Tortoise Ring: ಆಮೆ ಆಕಾರದ ಉಂಗುರ ಧರಿಸುವುದರಿಂದ ಪಡೆಯಬಹುದು ಅನೇಕ ಫಲಗಳು, ಆದ್ರೆ ಇದಕ್ಕೂ ಇವೆ ಕೆಲವು ನಿಯಮಗಳು

ಪುರಾಣ ಗ್ರಂಥಗಳ ಪ್ರಕಾರ, ಆಮೆಯು ಭಗವಾನ್ ವಿಷ್ಣುವಿನ ಅವತಾರವಾಗಿದೆ. ಅಲ್ಲದೆ ಆಮೆಯೊಂದಿಗೆ ಲಕ್ಷ್ಮೀ ದೇವಿಯು ಸಾಗರ ಮಂಥನದ ಸಮಯದಲ್ಲಿ ಕಾಣಿಸಿಕೊಂಡಳು ಎನ್ನಲಾಗುತ್ತದೆ. ಆದ್ದರಿಂದ, ಆಮೆ ಉಂಗುರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Tortoise Ring: ಆಮೆ ಆಕಾರದ ಉಂಗುರ ಧರಿಸುವುದರಿಂದ ಪಡೆಯಬಹುದು ಅನೇಕ ಫಲಗಳು, ಆದ್ರೆ ಇದಕ್ಕೂ ಇವೆ ಕೆಲವು ನಿಯಮಗಳು
ಆಮೆ ಆಕಾರದ ಉಂಗುರ
Follow us
TV9 Web
| Updated By: ಆಯೇಷಾ ಬಾನು

Updated on: Jul 06, 2022 | 6:40 AM

ಸಾಮಾನ್ಯವಾಗಿ ಜನರು ತಮ್ಮ ಕೈಯ ಅಂದವನ್ನು ಹೆಚ್ಚಿಸಲು ಉಂಗುರ(Ring) ಧರಿಸುತ್ತಾರೆ. ಕೆಲವರು ವಾಸ್ತು ತಜ್ಞರ ಸಲಹೆಯಂತೆ ಹವಳ, ಆಮೆ ಆಕಾರದ ಉಂಗುರಗಳನ್ನು ಧರಿಸಿರುವುದನ್ನು ನೀವು ನೋಡಿರುತ್ತೀರಿ. ಆದ್ರೆ ಅನೇಕರಿಗೆ ಆಮೆ ಆಕಾರದ ಉಂಗುರ(Tortoise Ring) ಏಕೆ ಧರಿಸುತ್ತಾರೆ? ಅದನ್ನು ಎಲ್ಲರೂ ಧರಿಸಬಹುದಾ? ಇದರಿಂದ ಏನು ಪ್ರಯೋಜನ ಎಂಬ ಬಗ್ಗೆ ಮಾಹಿತಿ ಇರೋದಿಲ್ಲ. ಹಾಗಾಗಿ ನಾವು ಇಲ್ಲಿ ಆಮೆ ಉಂಗುರ ಧರಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಪುರಾಣ ಗ್ರಂಥಗಳ ಪ್ರಕಾರ, ಆಮೆಯು ಭಗವಾನ್ ವಿಷ್ಣುವಿನ ಅವತಾರವಾಗಿದೆ. ಅಲ್ಲದೆ ಆಮೆಯೊಂದಿಗೆ ಲಕ್ಷ್ಮೀ ದೇವಿಯು ಸಾಗರ ಮಂಥನದ ಸಮಯದಲ್ಲಿ ಕಾಣಿಸಿಕೊಂಡಳು ಎನ್ನಲಾಗುತ್ತದೆ. ಆದ್ದರಿಂದ, ಆಮೆ ಉಂಗುರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಸಮುದ್ರದಲ್ಲಿ ವಾಸಿಸುವ ಆಮೆಯ ಆಕಾರದ ಉಂಗುರ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಸಂಕೇತವಾಗಿದೆ. ಜೀವನದಲ್ಲಿ ಸಕಾರಾತ್ಮಕತೆ ಮತ್ತು ಸಂತೋಷವನ್ನು ತರಲು ಹೆಚ್ಚಾಗಿ ಜನರು ಆಮೆಯ ಉಂಗುರವನ್ನು ಧರಿಸುತ್ತಾರೆ. ಅಲ್ಲದೆ ಯಶಸ್ಸು ಮತ್ತು ದೀರ್ಘಾಯುಷ್ಯಕ್ಕಾಗಿ ಉಂಗುರವನ್ನು ಧರಿಸುವುದುಂಟು. ಆದರೆ ಆಮೆಯ ಉಂಗುರವನ್ನು ಧರಿಸುವ ಮೊದಲು ಕೆಲವು ನಿಯಮಗಳ ಬಗ್ಗೆ ತಿಳಿದಿರಬೇಕು.

ಆಮೆ ಉಂಗುರವನ್ನು ಧರಿಸುವುದು ಹೇಗೆ? ಆಮೆ ಉಂಗುರವನ್ನು ಧರಿಸುವ ಮೊದಲು ಅದನ್ನು ಧರಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಬೇಕು. ಆಗ ಮಾತ್ರ ಅದರ ಪ್ರಯೋಜನ ಪಡೆಯಬಹುದು. ಹಾಗೂ ಸರಿಯಾದ ಕ್ರಮದಲ್ಲಿ ಆಮೆಯ ಉಂಗುರವನ್ನು ಧರಿಸಿದರೆ ಜೀವನದಲ್ಲಿ ತ್ವರಿತ ಮತ್ತು ದೀರ್ಘಕಾಲೀನ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಇದನ್ನೂ ಓದಿ: ಛಾಯಾಗ್ರಹಗಳು ಯಾರು? ಇವರ ಆರಾಧನೆ ಹೇಗೆ? ಇದರಿಂದಾಗುವ ಅತ್ಯುನ್ನತ ಪ್ರಯೋಜನಗಳೇನು?

ಆಮೆಯ ಉಂಗುರವನ್ನು ಧರಿಸುವ ಮೊದಲು ಅದನ್ನು ಹಸಿ ಹಾಲಿನಲ್ಲಿ ಅದ್ದಿ ನಂತರ ಅದನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಲಕ್ಷ್ಮಿ ದೇವಿಯ ಮುಂದೆ ಇರಿಸಿ. ನಂತರ, ಲಕ್ಷ್ಮಿ ದೇವಿಯನ್ನು ಪೂಜಿಸಿ ಮತ್ತು ಶ್ರೀ ಮಹಾಲಕ್ಷ್ಮಿ ಸ್ತೋತ್ರವನ್ನು ಪಠಿಸಿದ ಮೇಲೆ ಆಮೆ ಉಂಗುರವನ್ನು ಧರಿಸಿದರೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು ಜೊತೆಗೆ ಐಶ್ವರ್ಯವನ್ನು ಪಡೆಯುವಿರಿ.

-ಆಮೆಯ ಉಂಗುರವನ್ನು ಧರಸುವವರು ಬಲಗೈ ಮಧ್ಯದ ಬೆರಳಿಗೆ ಅಥವಾ ತೋರು ಬೆರಳಿಗೆ ಧರಿಸಬೇಕು. -ಶುಕ್ರವಾರ ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಮಂಗಳಕರ ದಿನವೆಂದು ಪರಿಗಣಿಸಲ್ಪಟ್ಟಿರುವುದರಿಂದ, ಈ ದಿನ ನೀವು ಆಮೆಯ ಉಂಗುರವನ್ನು ಖರೀದಿಸಿ ಧರಿಸಿದರೆ ಫಲ ಹೆಚ್ಚು. -ಆಮೆಯ ಉಂಗುರವನ್ನು ಧರಿಸುವಾಗ, ಆಮೆಯ ಮುಖವು ಯಾವಾಗಲೂ ಧರಿಸಿದವರ ಕಡೆಗೆ ಇರಬೇಕು. ಹೀಗೆ ಮಾಡಿದರೆ ಹಣ ನಿಮ್ಮ ಕಡೆಗೆ ಆಕರ್ಷಿತವಾಗುತ್ತದೆ. -ಸ್ನಾನ ಮಾಡುವಾಗ, ಕೆಲಸ ಮಾಡುವಾಗ, ಹಿಟ್ಟನ್ನು ಕಲಸುವಾಗ, ಇತ್ಯಾದಿ ಯಾವುದೇ ಕೆಲಸ ಮಾಡುತ್ತಿದ್ದರೆ, ಉಂಗುರವನ್ನು ತೆಗೆದು ಪೂಜಾ ಮನೆಯಲ್ಲಿ ಲಕ್ಷ್ಮಿದೇವಿಯ ಬಳಿ ಇರಿಸಿ. ಲಕ್ಷ್ಮಿ ದೇವಿಯ ಪಾದಗಳಿಗೆ ಉಂಗುರವನ್ನು ಸ್ಪರ್ಶಿಸಿದ ನಂತರ, ಮತ್ತೆ ಉಂಗುರವನ್ನು ಧರಿಸಿ. ಹಾಗೆ ಮಾಡುವುದರಿಂದ ಉಂಗುರದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. -ಉಂಗುರವನ್ನು ಧರಿಸಿದ ನಂತರ ಅದನ್ನು ತಿರುಗಿಸುತ್ತಲೇ ಇರುವ ಕೆಲಸ ಮಾಡಬಾರದು. ಉಂಗುರವನ್ನು ತಿರುಗಿಸುವುದು ಅದರ ದಿಕ್ಕನ್ನು ಬದಲಾಯಿಸುತ್ತದೆ, ಇದು ಹಣದ ಹಾದಿಯನ್ನು ತಡೆಯುತ್ತದೆ. ಆದ್ದರಿಂದ ಆಮೆಯ ಉಂಗುರವನ್ನು ತಿರುಗಿಸಬಾರದು. ಇದನ್ನೂ ಓದಿ: Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?

ಆಮೆಯ ಉಂಗುರವನ್ನು ಧರಿಸುವುದರ ಉದ್ದೇಶವೇನು? ಇತ್ತೀಚಿನ ದಿನಗಳಲ್ಲಿ, ಉಂಗುರವು ಜನಪ್ರಿಯತೆಯನ್ನು ಗಳಿಸಿದೆ ಮತ್ತು ಫ್ಯಾಷನ್ ಪ್ರವೃತ್ತಿಯಾಗಿದೆ. ಇದು ಕೈಗಳ ಅಂದವನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆಮೆಯ ಉಂಗುರವನ್ನು ಧರಿಸಿದರೆ ಸಂಪತ್ತು ಮತ್ತು ಸಮೃದ್ಧಿ ನಿಮ್ಮ ಜೊತೆ ಇರುತ್ತದೆ. ನೀವು ವ್ಯವಹಾರದಲ್ಲಿ ಸಮಸ್ಯೆ, ನಷ್ಟ ಎದುರಿಸುತ್ತಿದ್ದರೆ, ಈ ಉಂಗುರವನ್ನು ಧರಿಸುವುದರಿಂದ ನಿಮ್ಮ ಸಮಸ್ಯೆಗಳು ದೂರುವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತೆ ಎಂದು ಹೇಳಲಾಗುತ್ತೆ. ಹಾಗೂ ಜೀವನದಲ್ಲಿ ಸರಿಯಾದ ಮಾರ್ಗ ದೊರಕುತ್ತೆ.

ಆಮೆ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಜೊತೆ ನಿಕಟ ಸಂಪರ್ಕ ಹೊಂದಿರುವುದರಿಂದ, ಆಮೆಯ ಉಂಗುರವನ್ನು ಧರಿಸುವುದರಿಂದ ನಿಮ್ಮ ದೈನಂದಿನ ಜೀವನದಲ್ಲಿ ಅವರ ಆಶೀರ್ವಾದ ನಿಮ್ಮೊಂದಿಗೆ ಇರುತ್ತದೆ. ಯಶಸ್ಸನ್ನು ಸಾಧಿಸಲು ಬಯಸುವವರು, ಸಾಧನೆ ಮಾಡಲು, ಮತ್ತು ನಿಮ್ಮ ಗುರಿಯನ್ನು ತಲುಪಲು ಆಮೆ ಉಂಗುರ ಹೆಚ್ಚು ಸಹಾಯಕವಾಗಿದೆ.

ವಾಸ್ತು ಶಾಸ್ತ್ರ ತಜ್ಞರ ಪ್ರಕಾರ ಜೀವನಕ್ಕೆ ಸಮತೋಲನ, ಸಕಾರಾತ್ಮಕತೆ ಮತ್ತು ಪ್ರಶಾಂತತೆಯನ್ನು ತರಲು ಆಮೆಯ ಉಂಗುರವನ್ನು ಧರಿಸಬೇಕಂತೆ. ವೃಶ್ಚಿಕ ಮತ್ತು ಮೀನ ರಾಶಿಯವರು ಆಮೆಯ ಉಂಗುರವನ್ನು ಧರಿಸಬಾರದು ಎನ್ನಲಾಗಿದೆ. ಈ ರಾಶಿಚಕ್ರ ಚಿಹ್ನೆಗಳಿಗೆ ಈ ಉಂಗುರವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಈ ಎರಡು ರಾಶಿಚಕ್ರದ ಚಿಹ್ನೆಗಳು ನೀರಿನ ಅಂಶವಾಗಿದೆ. ಆದ್ದರಿಂದ, ಇದನ್ನು ಧರಿಸುವುದರಿಂದ ಶೀತ ಸ್ವಭಾವವು ಹೆಚ್ಚಾಗುತ್ತದೆ, ಇದು ನಿಮ್ಮ ಆರೋಗ್ಯ ಮತ್ತು ಮನಸ್ಸಿನ ಮೇಲೆ ನೇರ ವಿರುದ್ಧ ಪರಿಣಾಮವನ್ನು ಬೀರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್