AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಆಗದು

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 21 ಮೇ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ದಿನಭವಿಷ್ಯ:  ಈ ರಾಶಿಯವರಿಗೆ ಇಂದು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಆಗದು
ಪ್ರಾತಿನಿಧಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: May 21, 2024 | 1:01 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ,  ಮೇ​​​​​ 21ರ ರಾಶಿ ಭವಿಷ್ಯದಲ್ಲಿ  ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ 15:42 ರಿಂದ 17:18ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17ರಿಂದ ಬೆಳಗ್ಗೆ10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:06ರ ವರೆಗೆ.

ಮೇಷ ರಾಶಿ :ಇಂದು ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ.‌ ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಲಿದೆ. ಅತಿಯಾದ ಚಿಂತಯನ್ನು ಮಾಡಬೇಡಿ. ಬೆಳಗಿನ ಉತ್ಸಾಹವೇ ನಿಮ್ಮ ಕಾರ್ಯಗಳನ್ನು ಪೂರೈಸುವುದು. ಅಧಿಕಾರಿಗಳ ಕಡೆಯಿಂದ ನಿಮ್ಮ ಬಗ್ಗೆ ವಿಚಾರಣೆ ಇರಬಹುದು. ಯಾವುದೇ ಆಕಸ್ಮಿಕ ಘಟನೆಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ.ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳವಾಗಿ ಕೆಲಸಗಳು ಇಂದು ಆಗದು. ಯಾವುದರಿಂದಲಾದರೂ ನಿಮಗೆ ಘಾಸಿಯಾಗಬಹುದು.

ವೃಷಭ ರಾಶಿ :ಈ ದಿನ ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ಹೊಸ ಮನೆಯ ಖರೀದಿಯೇ ನಿಮಗೆ ಉತ್ತಮ ಎನಿಸಬಹುದು. ಹೊಸ ಉದ್ಯಮವನ್ನು ಪ್ರಾರಂಭಿಸಲೂ ಯೋಚಿಸಬಹುದು. ನಿಮ್ಮ ಬಂಧುಗಳು ನಿಮ್ಮನ್ನು ಇಷ್ಟ ಪಡುವರು. ನಿಮ್ಮ ಜೊತೆ ಸಲುಗೆಯಿಂದ ಮಾತನಾಡಲು ಬಯಸುವರು. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಿದ್ಧಿಸಿದ ಗುಣವಾಗಿದೆ. ಆಲಸ್ಯವು ಸ್ವಲ್ಪವಿದ್ದರೂ ನಿಮ್ಮ ಇಂದಿನ ಕಾರ್ಯಗಳು ನಿಮ್ಮನ್ನು ಚುರುಕಾಗಿಸುತ್ತವೆ. ಯಾವುದನ್ನೂ ಕೃತಕವಾಗಿ ತೋರಿಸಲು ಹೋಗುವುದು ಬೇಡ. ಸಹಜತೆಯು ನಿಮ್ಮ ಸ್ವಭಾವವಾಗಿರಲಿ. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ಪೆಟ್ಟು ಬೀಳುವುದು.

ಮಿಥುನ ರಾಶಿ :ಇಂದು ನಿಮ್ಮ ಸಂಗಾತಿಯಿಂದ ಯಾವುದೇ ಸ್ಪಂದನೆಯು ಯಾವ ವಿಚಾರಕ್ಕೂ ಸಿಗದು. ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಪ್ರೀತಿಯ ಕೊರತೆಯಿಂದ ಇಬ್ಬರ ನಡುವೆ ಅಸಮಾಧಾನವಾಗಲಿದೆ. ಯಾವ ವ್ಯವಹಾರವನ್ನೂ ಬಿಟ್ಟುಕೊಡಲಾರಿರಿ. ಪಾಲುದಾರಿಕೆಯ ಉದ್ಯಮವು ಹೆಚ್ಚು ಫಲಕಾರಿಯಾಗಲಿದೆ. ಕೆಲಸದ ವಿಷಯದಲ್ಲಿ ನೀವು ಬಹಳ ಚುರುಕಾಗಿ ಇರಲಿದ್ದೀರಿ. ನಿಮ್ಮ ಜೊತೆ ಸಂವಹನವನ್ನು ಮಾಡುವವರಿಗೆ ಖುಷಿ ಸಿಗಲಿದೆ. ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಎಲ್ಲದಕ್ಕೂ ಅಡ್ಡಿಯನ್ನು ಕೊಡುವುದು ಬೇಡ. ನಿಮಗೆ ಸಿಕ್ಕಷ್ಟನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಯೋಚನೆ ಇರಲಿ.

ಕಟಕ ರಾಶಿ :ನೀವು ಕುಟುಂಬದವರ ಪ್ರೀತಿಯನ್ನು ಬಹಳ ಕಾಲದ ಅನಂತರ ಅನುಭವಿಸುವಿರಿ‌. ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತ ವಾಗಲಿದೆ. ನಿಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಲು ಇಚ್ಛಿಸುವಿರಿ‌. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವ ಅಥವಾ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿವ ಮನಸ್ಸು ಇರಲಿದೆ. ಅನ್ಯೋನ್ಯತೆಯ ಬಗ್ಗೆ ಕಣ್ಣು ಬೀಳಬಹುದು. ಆರ್ಥಿಕತೆ ಒಂದೇ ರೀತಿಯಲ್ಲಿ ಇರಲಿದೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು.

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು