Updated on: Sep 16, 2021 | 9:35 PM
ಎನರ್ಜಿ ಸ್ಟೊರೇಜ್ ಸೆಕ್ಟರ್ನ ಮುಂಚೂಣಿ ಕಂಪನಿಯಾದ ಒಕಯಾ ಗ್ರೂಪ್ ಎಲೆಕ್ಟ್ರಿಕ್ ಸ್ಕೂಟರ್ (ಇ-ಸ್ಕೂಟರ್) ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಫ್ರೀಡಂ ಬ್ರಾಂಡ್ ಹೆಸರಿನಲ್ಲಿ ಈ ಸ್ಕೂಟರ್ನ್ನು ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ದೇಶದೆಲ್ಲೆಡೆ ಖರೀದಿಗೆ ಲಭ್ಯವಿರಲಿದೆ.
ಈಗಾಗಲೇ ಕಂಪೆನಿಯು ಏವಿಯನ್ಐಕ್ಯೂ ಮತ್ತು ಕ್ಲಾಸ್‌ಐಕ್ಯೂ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿದ್ದು, ಅದರ ಜೊತೆಗೆ ಇದೀಗ ಫ್ರೀಡಂ ಹೆಸರಿನಲ್ಲಿ ನೂತನ ಸ್ಕೂಟರ್ನ್ನು ಪರಿಚಯಿಸಿದೆ.
ಒಕಾಯಾ ಫ್ರೀಡಮ್ 250 ವ್ಯಾಟ್ ಬಿಎಲ್‌ಡಿಸಿ ಹಬ್ ಮೋಟಾರ್ ಅನ್ನು ಹೊಂದಿದೆ. ಇನ್ನು ಈ ಇ-ಸ್ಕೂಟರ್ ಲಿಥಿಯಂ ಐಯಾನ್ ಮತ್ತು ಲೀಡ್ ಆಸಿಡ್ ಬ್ಯಾಟರಿಗಳ ಆಯ್ಕೆಯೊಂದಿಗೆ ಲಭ್ಯವಿರಲಿದೆ.
48 ವೋಲ್ಟ್ 30 ಲಿಥಿಯಂ-ಐಯಾನ್ ಆವೃತ್ತಿಯನ್ನು 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದು. ಹಾಗೆಯೇ ಲೀಡ್-ಆಸಿಡ್ ಆವೃತ್ತಿಯು ಚಾರ್ಜಿಂಗ್ 8 ರಿಂದ 10 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿಕೊಂಡರೆ ಗರಿಷ್ಠ 250 ಕಿ.ಮೀ. ವರೆಗೆ ಚಲಿಸಬಹುದು ಎಂದು ಒಕಯಾ ಕಂಪೆನಿ ಹೇಳಿಕೊಂಡಿದೆ. ಇದರಿಂದ ಈ ಸ್ಕೂಟರ್ ಅನ್ನು ದೂರ ಪ್ರಯಾಣಕ್ಕೂ ಬಳಸಿಕೊಳ್ಳಬಹುದು.
ಇನ್ನು ಒಕಯಾ ಪರಿಚಯಿಸಿರುವ ನೂತನ ಫ್ರೀಡಂ ಸ್ಕೂಟರ್ನ ಆರಂಭಿಕ ಬೆಲೆ 69,900 ರೂ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಹೋಲಿಸಿದರೆ ಇದು ಕಡಿಮೆ ಎಂದೇ ಹೇಳಬಹುದು.