Yamaha Neo: ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಯಮಹಾ
Yamaha Neo electric scooter: ಇದು ನಗರ ಸಂಚಾರಕ್ಕೆ ಅಗತ್ಯವಾದ ಉನ್ನತ ವೇಗವನ್ನು ಒದಗಿಸುತ್ತದೆ. ಇನ್ನು ಇದರಲ್ಲಿ ಬದಲಾಯಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ.
ಜಪಾನಿನ ಜನಪ್ರಿಯ ಮೋಟರ್ ವಾಹನ ತಯಾರಿಕಾ ಕಂಪೆನಿ ಯಮಹಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ನಿಯೋ (Yamaha Neo) ಅನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಿದೆ. ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಕಂಪನಿಯ ದೀರ್ಘಾವಧಿಯ ಯೋಜನೆಗೆ ಮುನ್ನುಡಿ ಬರೆದಿದೆ. ಇದಾಗ್ಯೂ ಯಮಹಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಯ್ದ ದೇಶಗಳಲ್ಲಿ ಡೀಲರ್‌ಶಿಪ್‌ಗಳಲ್ಲಿ ಮಾತ್ರ ಮಾರಾಟ ಮಾಡಲಿದೆ ಎಂದು ತಿಳಿಸಿದೆ.
ಯಮಹಾದ ಈ ಎಲೆಕ್ಟ್ರಿಕ್ ಸ್ಕೂಟರ್ 50cc ಪೆಟ್ರೋಲ್ ಚಾಲಿತ ಸ್ಕೂಟರ್‌ಗೆ ಸಮನಾಗಿರುವುದು ವಿಶೇಷ. ಇದು E02 ಪರಿಕಲ್ಪನೆಯನ್ನು ಆಧರಿಸಿದ್ದು, ಇದನ್ನು ಈ ಮೊದಲು 2019 ಟೋಕಿಯೊ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಕಂಪನಿಯು ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್-ಚಾಲಿತ ನಿಯೋ 50cc ಸ್ಕೂಟರ್ ಅನ್ನು ಮಾರಾಟ ಮಾಡಲಿದೆ.
ವಿಶೇಷ ಎಂದರೆ ಯಮಹಾ ಇವಿ ಹಬ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರಲಿದೆ. ಇದು ನಗರ ಸಂಚಾರಕ್ಕೆ ಅಗತ್ಯವಾದ ಉನ್ನತ ವೇಗವನ್ನು ಒದಗಿಸುತ್ತದೆ. ಇನ್ನು ಇದರಲ್ಲಿ ಬದಲಾಯಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಇದರಿಂದ ಎರಡು ಬ್ಯಾಟರಿ ಬಳಕೆಯ ಮೂಲಕ ದೂರ ಪ್ರಯಾಣವನ್ನು ಸಹ ಮಾಡಬಹುದು.
ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಆಯ್ದ ದೇಶಗಳಲ್ಲಿ ಡೀಲರ್‌ಶಿಪ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಆದಾಗ್ಯೂ, ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ತುಂಬಾ ಕಡಿಮೆ ಎನ್ನಲಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ ನಿಯೋ ಸ್ಕೂಟರ್‌ಗೆ ಸಿಗಲಿರುವ ಬೇಡಿಕೆ ಆಧರಿಸಿ ಉಳಿದ ದೇಶಗಳಲ್ಲಿ ಈ ಸ್ಕೂಟರ್ ಅನ್ನು ಯಮಹಾ ಪರಿಚಯಿಸಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದಲ್ಲೂ ಯಮಹಾ ನಿಯೋ ಬಿಡುಗಡೆಯಾದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Yamaha Neo’s electric scooter breaks cover)