4 ಕೆಜಿ 900 ಗ್ರಾಂ ಚಿನ್ನ ನಾಪತ್ತೆ ಪ್ರಕರಣ; ಸಿಐಡಿಯಿಂದ ಬಂಧಿತ ಆರೋಪಿಯ ತೀವ್ರ ವಿಚಾರಣೆ

4 ಕೆಜಿ 900 ಗ್ರಾಂ ಚಿನ್ನ ನಾಪತ್ತೆ ಪ್ರಕರಣ; ಸಿಐಡಿಯಿಂದ ಬಂಧಿತ ಆರೋಪಿಯ ತೀವ್ರ ವಿಚಾರಣೆ
ಪ್ರಾತಿನಿಧಿಕ ಚಿತ್ರ

2021 ಜನವರಿ 9ರಂದು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಎರ್ಟಿಗಾ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಯಮಕನಮರಡಿ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ಠಾಣೆ ಮುಂಭಾಗದಲ್ಲಿ ನಿಲ್ಲಿಸಿದ್ದರು. ಈ ವೇಳೆ ಕಾರಿನಲ್ಲಿದ್ದ 4.9ಕೆಜಿ ಚಿನ್ನ ಕಳ್ಳತನವಾಗಿತ್ತು

TV9kannada Web Team

| Edited By: guruganesh bhat

Jun 07, 2021 | 4:04 PM

ಬೆಳಗಾವಿ: 4ಕೆಜಿ 900 ಗ್ರಾಂ ಚಿನ್ನ ಅಕ್ರಮ ಸಾಗಣೆ ಪ್ರಕರಣವೊಂದರ ಪ್ರಮುಖ ಆರೋಪಿ ಕಿರಣ್ ವೀರಣಗೌಡರ್ ಎಂಬ ವ್ಯಕ್ತಿಯನ್ನು ಬಂಧಿಸಿರುವ ಸಿಐಡಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆಗೆ ಕರೆತಂದಿದ್ದು ವಿಚಾರಣೆ ನಡೆಸುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಆರೋಪಿ ಕಿರಣ್ ಗೌಡರ್ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ರೀತಿ ಚಿನ್ನವನ್ನು ಕಳ್ಳತನ ಮಾಡಲಾಗಿದೆ, ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಶ್ನಿಸಲಾಗುತ್ತಿದೆ. 

ವಿಚಾರಣೆ ನಂತರ ಸಿಐಡಿ ಅಧಿಕಾರಿಗಳು ಬಂಧಿತ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಿಸಿದ್ದು, ಆರೋಪಿ ಕಿರಣ್ ವೀರಣಗೌಡರ್​ಗೆ ಕೊವಿಡ್ ನೆಗೆಟಿವ್ ಬಂದಿದೆ. ಹೀಗಾಗಿ ಇಂದು ಸಂಜೆ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

2021 ಜನವರಿ 9ರಂದು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಎರ್ಟಿಗಾ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಯಮಕನಮರಡಿ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ಠಾಣೆ ಮುಂಭಾಗದಲ್ಲಿ ನಿಲ್ಲಿಸಿದ್ದರು. ಈ ವೇಳೆ ಕಾರಿನಲ್ಲಿದ್ದ 4.9ಕೆಜಿ ಚಿನ್ನ ಕಳ್ಳತನವಾಗಿತ್ತು. ಈ ಬಗ್ಗೆ ಅಂದಿನ ಐಜಿಪಿ ರಾಘವೇಂದ್ರ ಸುಹಾಸ್ ಅವರಿಗೆ ಕಾರು ಮಾಲೀಕ ತಿಲಕ್ ಪೂಜಾರಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಬೆಳಗಾವಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾದ ಶಂಕೆ ಇದ್ದ ಕಾರಣ ಪ್ರಕರಣದ ವರದಿಯನ್ನು ಗೃಹ ಇಲಾಖೆಗೆ ನೀಡಿದ್ದರು.

ಗೃಹ ಇಲಾಖೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿ ತನಿಖೆಗೆ ಆದೇಶಿಸಿತ್ತು. ಪ್ರಕರಣದಲ್ಲಿ ಆರೋಪಿ ಕಿರಣ್ ವೀರಣ್ಣ ಗೌಡರ್ ಮಧ್ಯಸ್ಥಿಕೆ ವಹಿಸಿದ್ದ ಹಿನ್ನಲೆ ಬಂಧಿಸಲಾಗಿತ್ತು. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಐಜಿಪಿ ಸೇರಿ ನಾಲ್ವರು ಅಧಿಕಾರಿಗಳನ್ನು ಗೃಹ ಇಲಾಖೆ ವರ್ಗಾಯಿಸಿತ್ತು.

ಇದನ್ನೂ ಓದಿ: ಮೈಸೂರು ವಿವಿಯಿಂದ ಕೊವಿಡ್ ರ‍್ಯಾಪಿಡ್‌ ಡಿಟೆಕ್ಷನ್ ಕಿಟ್ ವಿನ್ಯಾಸ; ಲಸಿಕೆ ಅಭಿವೃದ್ಧಿಪಡಿಸಲು ಅನುದಾನದ ಕೊರತೆ

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂತ್ ಮಟ್ಟದಲ್ಲಿ ಕೊವಿಡ್ ಲಸಿಕೆ ನೀಡಲು ಮನೆ-ಮನೆ ಸಮೀಕ್ಷೆ: ಅರವಿಂದ್ ಕೇಜ್ರಿವಾಲ್ ಘೋಷಣೆ

(4 kg 900 gram gold theft case CID starts inquiry of arrested accused in Belagavi)

Follow us on

Related Stories

Most Read Stories

Click on your DTH Provider to Add TV9 Kannada