45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂತ್ ಮಟ್ಟದಲ್ಲಿ ಕೊವಿಡ್ ಲಸಿಕೆ ನೀಡಲು ಮನೆ-ಮನೆ ಸಮೀಕ್ಷೆ: ಅರವಿಂದ್ ಕೇಜ್ರಿವಾಲ್ ಘೋಷಣೆ

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂತ್ ಮಟ್ಟದಲ್ಲಿ ಕೊವಿಡ್ ಲಸಿಕೆ ನೀಡಲು ಮನೆ-ಮನೆ ಸಮೀಕ್ಷೆ: ಅರವಿಂದ್ ಕೇಜ್ರಿವಾಲ್ ಘೋಷಣೆ
ಅರವಿಂದ್ ಕೇಜ್ರಿವಾಲ್

Arvind Kejriwal: 45 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಲಸಿಕೆ ಪಡೆಯಲು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕೆಲವೇ ಜನರು ಹಾಜರಾಗುತ್ತಿದ್ದಾರೆ. ಆದ್ದರಿಂದ ನಾವು ಜನರಿಗಾಗಿ ಕಾಯುವ ಬದಲು ವ್ಯಾಕ್ಸಿನೇಷನ್ ಗಾಗಿ ನಾವು ಅವರ ಬಳಿಗೆ ಹೋಗುತ್ತೇವೆ ಎಂದು ನಿರ್ಧರಿಸಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

TV9kannada Web Team

| Edited By: Rashmi Kallakatta

Jun 07, 2021 | 3:27 PM

ದೆಹಲಿ: ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಪಡೆಯುವ ಜನರ ಸಂಖ್ಯೆ ಕುಸಿದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಮ್ಮ ಮತದಾನ ಕೇಂದ್ರಗಳಲ್ಲಿ ಲಸಿಕೆ ನೀಡಲು ಮನೆ-ಮನೆ ಸಮೀಕ್ಷೆ ನಡೆಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ. ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿದ ಕೇಜ್ರಿವಾಲ್, ಲಸಿಕೆಗಳ ಕೊರತೆಯಿಲ್ಲದಿದ್ದರೆ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ನಾಲ್ಕು ವಾರಗಳಲ್ಲಿ ನಗರದಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದರು. ದೆಹಲಿಯಲ್ಲಿ 57 ಲಕ್ಷ ಜನರಿದ್ದು, 45 ಕ್ಕಿಂತ ಮೇಲ್ಪಟ್ಟವರಲ್ಲಿ 27 ಲಕ್ಷ ಜನರು ತಮ್ಮ ಮೊದಲ ಲಸಿಕೆ ಡೋಸ್ ಪಡೆದಿದ್ದಾರೆ.

ಮತದಾನ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆ ಬಾಗಿಲಿಗೆ ಹೋಗಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ತೆಗೆದುಕೊಳ್ಳಲು ಸ್ಲಾಟ್ ನೀಡಲಿದೆ ಎಂದು ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಾಜಧಾನಿಯ 70 ವಾರ್ಡ್‌ಗಳಲ್ಲಿ ಮಂಗಳವಾರದಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದಿದ್ದಾರೆ ಕೇಜ್ರಿವಾಲ್. 45 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಲಸಿಕೆ ಪಡೆಯಲು ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಕೆಲವೇ ಜನರು ಹಾಜರಾಗುತ್ತಿದ್ದಾರೆ. ಆದ್ದರಿಂದ ನಾವು ಜನರಿಗಾಗಿ ಕಾಯುವ ಬದಲು ವ್ಯಾಕ್ಸಿನೇಷನ್ ಗಾಗಿ ನಾವು ಅವರ ಬಳಿಗೆ ಹೋಗುತ್ತೇವೆ ಎಂದು ನಿರ್ಧರಿಸಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿಯಲ್ಲಿ ಸುಮಾರು 280 ವಾರ್ಡ್‌ಗಳಿವೆ. ಪ್ರತಿ ವಾರ 70 ವಾರ್ಡ್‌ಗಳಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಕೇಜ್ರಿವಾಲ್ ಘೋಷಿಸಿದರು. ಮತದಾನ ಕೇಂದ್ರಗಳು ಎಲ್ಲಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಬೂತ್‌ಗಳು ತಮ್ಮ ಮನೆಗಳಿಂದ “ನಡೆದುಕೊಂಡು ಹೋಗುವಷ್ಟು ದೂರದಲ್ಲಿ” ಇರುವುದರಿಂದ ಜನರು ಲಸಿಕೆ ಪಡೆಯಲು ಸುಲಭವಾಗಿ ಹೋಗಬೇಕು.

ಯಾರಾದರೂ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದರೆ, ಬೂತ್ ಮಟ್ಟದ ಅಧಿಕಾರಿಗಳು ಮತ್ತು ನಾಗರಿಕ ಸ್ವಯಂಸೇವಕರು ಲಸಿಕೆ ತೆಗೆದುಕೊಳ್ಳಲು ಮನವೊಲಿಸಲು ಪ್ರಯತ್ನಿಸುತ್ತಾರೆ, ಅಧಿಕಾರಿಗಳು ಈಗಾಗಲೇ ತರಬೇತಿಯಲ್ಲಿದ್ದಾರೆ ಎಂದು ಅವರು ಹೇಳಿದರು. ವ್ಯಾಕ್ಸಿನೇಷನ್ ಗಾಗಿ ಸಮಯ ಸ್ಲಾಟ್ ಪಡೆದವರು ಲಿಸಿಕೆ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಇಂತಿರುವಾಗ ಅಧಿಕಾರಿಗಳು ಮತ್ತೆ ಚುಚ್ಚುಮದ್ದನ್ನು ಪಡೆಯುವಂತೆ ಮನವೊಲಿಸಲು ಹೋಗುತ್ತಾರೆ.

ಜನರು ಸುಲಭವಾಗಿ ತಮ್ಮ ಮನೆಗಳಿಂದ ಮತದಾನ ಕೇಂದ್ರಕ್ಕೆ ಕರೆದೊಯ್ಯಲು ಇ-ರಿಕ್ಷಾಗಳನ್ನು ಸಹ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಲಸಿಕೆಯ ಎರಡೂ ಡೋಸ್ ಗಳಿಗೆ ಈ ಪ್ರಕ್ರಿಯೆಯನ್ನು ಎರಡು ಸುತ್ತುಗಳಲ್ಲಿ ಪುನರಾವರ್ತಿಸಲಾಗುತ್ತದೆ. ರಾಜಧಾನಿ ಸಾಕಷ್ಟು ಲಸಿಕೆ ಡೋಸ್ ಹೊಂದಿರುವಾಗ 18-44 ವಯೋಮಾನದವರಿಗೆ ಲಸಿಕೆ ಹಾಕಲು ದೆಹಲಿ ಸರ್ಕಾರವು ಈ ಯೋಜನೆಯನ್ನು ಅನುಸರಿಸುತ್ತದೆ ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ:  ಪಿಜ್ಜಾ ಹೋಮ್ ಡೆಲಿವರಿ ಮಾಡುವುದಾದರೆ ರೇಷನ್ ಯಾಕೆ ಆಗಲ್ಲ?: ಅರವಿಂದ್ ಕೇಜ್ರಿವಾಲ್

Follow us on

Related Stories

Most Read Stories

Click on your DTH Provider to Add TV9 Kannada