AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ದಿವ್ಯಾ ಟಿಎಸ್​​ಗೆ ಚಿನ್ನದ ಪದಕ

ಭೋಪಾಲ್​ನಲ್ಲಿ ನಡೆದ 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ದಿವ್ಯಾ ಟಿಎಸ್ ಚಿನ್ನದ ಪದಕ ಗೆದ್ದಿದ್ದಾರೆ.

65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ದಿವ್ಯಾ ಟಿಎಸ್​​ಗೆ ಚಿನ್ನದ ಪದಕ
Divya TS
TV9 Web
| Edited By: |

Updated on:Dec 12, 2022 | 8:32 PM

Share

ಬೆಂಗಳೂರು: ಭೋಪಾಲ್​ನಲ್ಲಿ ನಡೆದ 65ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ (65th National Shooting Championship) ಕರ್ನಾಟಕದ ದಿವ್ಯಾ ಟಿಎಸ್ (Divya TS) ಚಿನ್ನದ ಪದಕ ಗೆದ್ದಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ದಿವ್ಯಾ, ಉತ್ತರ ಪ್ರದೇಶದ ಸಂಸ್ಕೃತಿ ಬನಾ ಅವರನ್ನು 16-14 ಅಂಕಗಳ ಅಂತರದಿಂದ ಸೋಲಿಸಿ ಚೊಚ್ಚಲ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಒಲಿಂಪಿಯನ್ ಮನು ಭಾಕರ್ ಅವರು ತೆಲಂಗಾಣದ ಇಶಾ ಸಿಂಗ್ ವಿರುದ್ಧ 17-13 ಅಂತರದಲ್ಲಿ ಜಯಗಳಿಸುವ ಮೂಲಕ ಜೂನಿಯರ್ ಮಹಿಳೆಯರ ಏರ್ ಪಿಸ್ತೂಲ್ ಚಿನ್ನವನ್ನು ಗೆದ್ದರು. ಯೂತ್ ವಿಭಾಗದಲ್ಲಿ ಹರಿಯಾಣದ ರಿದಮ್ ಅವರು ಸಂಸ್ಕೃತಿ ಬನಾ ಅವರನ್ನು 16-12 ಅಂತರಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.

ಮಹಿಳೆಯರ ಏರ್ ಪಿಸ್ತೂಲ್ ಅರ್ಹತೆಯಲ್ಲಿ ಮನು 583 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ದಿವ್ಯಾ 578 ಮತ್ತು ಸಂಸ್ಕೃತಿ 577 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇಶಾ 576 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಇನ್ನೂ ಲಯ 575 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:29 pm, Mon, 12 December 22