Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: 40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ

ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ನಡೆದಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದು, ಪೋಕ್ಸೋ ಕೇಸ್ ದಾಖಲಾಗಿದೆ.

ನೆಲಮಂಗಲ: 40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ
ನೆಲಮಂಗಲ: 40 ಸಾವಿರ ಅಸಲು, ಬಡ್ಡಿ ಕೊಟ್ಟಿಲ್ಲವೆಂದು ಸಾಲಗಾರನ ಪುತ್ರಿ ಮೇಲೆ ಅತ್ಯಾಚಾರ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 20, 2024 | 3:20 PM

ನೆಲಮಂಗಲ, ಅಕ್ಟೋಬರ್​​ 20: ಹಾಡಹಗಲೇ 17 ವರ್ಷದ ಬಾಲಕಿ ಮೇಲೆ ದುರುಳನಿಂದ ಅತ್ಯಾಚಾರ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ನೀಡಿದ ದೂರಿನ ಮೇರೆಗೆ ಆರೋಪಿ ರವಿಕುಮಾರ್(39) ಬಂಧಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ (pocso case) ದಾಖಲಾಗಿದೆ.

ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ 70 ಸಾವಿರ ರೂ. ಹಣ ಪಡೆದಿದ್ದರು. ಈ ಹಿಂದೆ 30 ಸಾವಿರ ರೂ. ಸಾಲ ಕೂಡ ತೀರಿಸಿದ್ದರು. ಇನ್ನುಳಿದ 40 ಸಾವಿರ ರೂ. ಜೊತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ರವಿಕುಮಾರ್ ಪೀಡಿಸುತ್ತಿದ್ದರು.

ಇದನ್ನೂ ಓದಿ: ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್​: 21 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ

ಈ ಹಿಂದೆ ಬಲವಂತವಾಗಿ ಬಾಲಕಿಗೆ ರವಿಕುಮಾರ್ ಕಿಸ್​ ಕೊಟ್ಟಿದ್ದ. ಕಿಸ್​ ಕೊಟ್ಟಿರುವುದನ್ನು ಫೋಟೋ ತೆಗೆದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಇಂದು ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಸದ್ಯ ರವಿಕುಮಾರ್​​ನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ಊರ ಹೊರವಲಯದಲ್ಲಿ ಮಹಿಳೆಯ ಬರ್ಬರ ಹತ್ಯೆ

ಕೋಲಾರ: ಸೆಪ್ಟಂಬರ್​-25 ರಂದು ಜಿಲ್ಲೆಯ ಮುಳಬಾಗಿಲಿನ ಹೈದರಿ ನಗರದ ಬಳಿಯಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಮುಳಬಾಗಿಲು ನಗರ ಪೊಲೀಸರು ಪರಿಶೀಲನೆ ನಡೆಸಿದ್ದರು. ಮೃತ ಮಹಿಳೆಯ ಗುರುತು ಪತ್ತೆಮಾಡಿದ ವೇಳೆ ಮೃತ ಮಹಿಳೆ ಮುಳಬಾಗಿಲು ನಗರದ ಪಳ್ಳಿಗರಪಾಳ್ಯದ ಮೈಕ್​ ಶಂಕರ್​ ಅವರ ಪತ್ನಿ ಸುಶೀಲಮ್ಮ ಅನ್ನೋದು ತಿಳಿದು ಬಂದಿತ್ತು.

ಇದನ್ನೂ ಓದಿ: ರಾಮನಗರ: ವಿದ್ಯಾರ್ಥಿನಿಯರಿಗೆ ಬಿಯರ್​ ಕುಡಿಸಿ ಉಪನ್ಯಾಸಕರಿಂದ ಕಿರುಕುಳ

ಮಾನಸೀಕವಾಗಿ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸುಶೀಲಮ್ಮ ಸೆಪ್ಟಂಬರ್​-24 ರಂದು ಮನೆಯಿಂದ ತಪ್ಪಿಸಿಕೊಂಡಿದ್ದಳು, ಆಕೆಗಾಗಿ ಕುಟುಂಬಸ್ಥರು ಹುಡುಕಿದ್ದರಾದರೂ ಪತ್ತೆಯಾಗಿರಲಿಲ್ಲ ಆದರೆ ಸೆಪ್ಟಂಬರ್​-25 ರಂದು ಶವವಾಗಿ ಪತ್ತೆಯಾಗಿದ್ದಳು. ಶವದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು, ಅಲ್ಲದೆ ತಲೆ ಹಾಗೂ ಕಿವಿಯಲ್ಲಿ ರಕ್ತ ಬಂದಿತ್ತು ಹಾಗಾಗಿ ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:18 pm, Sun, 20 October 24