AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್​​

ಕೆಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಕಾಲದ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ. ಈ ವಿಚಾರವಾಗಿ ಅಗತ್ಯವಿದ್ದರೆ ಕುಮಾರಸ್ವಾಮಿ ಬಂಧಿಸುತ್ತೇವೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ವಿಚಾರವಾಗಿ ಮಾತನಾಡಿರುವ ಕುಮಾರಸ್ವಾಮಿ, ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂದು ಟಾಂಗ್ ನೀಡಿದ್ದಾರೆ.

ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್​​
ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಸಿಎಂಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್​​
Sunil MH
| Edited By: |

Updated on: Aug 21, 2024 | 4:00 PM

Share

ಬೆಂಗಳೂರು, ಆಗಸ್ಟ್​ 21: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ (Siddaramaiah) ಬರಬೇಕು ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದ್ದಾರೆ. ಅಗತ್ಯವಿದ್ದರೆ ಕುಮಾರಸ್ವಾಮಿ ಅವರನ್ನು ಬಂಧಿಸುತ್ತೇವೆ ಎಂದು ಸಿಎಂ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾವ ಸಿಎಂ ಕೂಡ ಇಂತಹ ಭಂಡತನವನ್ನು ಪ್ರದರ್ಶಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿಗೆ ಭಯ ಶುರುವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನಗೆ ಭಯ ಶುರುವಾಗಿದೆಯಾ, ನನ್ನ ನೋಡಿದ್ರೆ ಹಾಗೆ ಅನಿಸುತ್ತಾ? ಎಂದು ತಿರುಗೇಟು ನೀಡಿದ್ದಾರೆ. ಕಳೆದ ವಾರದಿಂದ ಮುಖ್ಯಮಂತ್ರಿ ಹೇಗೆ ನಡೆದುಕೊಂಡಿದ್ದಾರೆ ನೋಡಿದ್ದೀರಲ್ವಾ? ಇವರು ಏನು ಮಾಡಿದ್ದಾರೆ ಎಂದು ಜನರು ನೋಡಿದ್ದಾರೆ. ಮುಡಾ ಆಸ್ತಿಯನ್ನ ನನ್ನ ಆಸ್ತಿ ಅಂತ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯರನ್ನ ಒಂದು ನಟೋರಿಯಸ್ ಗ್ಯಾಂಗ್​ ಖೆಡ್ಡಾಗೆ ಕೆಡವಿದೆ: ಹೊಸ ಬಾಂಬ್​ ಸಿಡಿಸಿದ ಸಿಟಿ ರವಿ ​

ಸಿದ್ದರಾಮಯ್ಯ ಪತ್ನಿ ಹೆಸರಿನ ದಾಖಲೆ ತಿದ್ದುಪಡಿ ವಿಚಾರವಾಗಿ ಮಾತನಾಡಿದ ಅವರು, ಮೈಸೂರಿಗೆ ಏನು ಹೆಲಿಕಾಪ್ಟರ್​ ತೆಗೆದುಕೊಂಡು ಹೋದರಲ್ಲಾ? ಈಗ ರೋಡ್ ಚೆನ್ನಾಗಿದೆ ಒಂದೂವರೆ ಗಂಟೆಯಲ್ಲಿ ರೀಚ್ ಆಗಬಹುದು. ಒಳ್ಳೆಯ ಪೈಲಟ್ ಕರೆದುಕೊಂಡು ಹೋಗಿದ್ದಾರೆ. ಯಾವ ಪೇಪರ್​ಗೆ ವೈಟ್ನರ್​​ ಹಾಕಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್

ಡೇ ಒನ್​​​​ನಿಂದ ಎಷ್ಟು ಸುಳ್ಳು ಹೇಳಿಕೊಂಡು ಬಂದ್ರು. ಡಿನೋಟಿಫಿಕೇಷನ್ ಮಾಡೋದಾದರೆ ಮಗನ ಹೆಸರಲ್ಲಿ ಮಾಡಬೇಕಿತ್ತು. ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲೇ ಪ್ರಾಪರ್ಟಿ ಇದೆ. ನಿಮ್ಮ ಬಾಮೈದ ಅಷ್ಟೊಂದು ದಡ್ಡನಾ ಸಿದ್ದರಾಮಯ್ಯ ಅವರೇ? 2010ರಲ್ಲಿ ದಾನ ಮಾಡಿದಾಗ ಯಾವ ಆಸ್ತಿ ಅಂತಾ ಗೊತ್ತಾಗಲಿಲ್ವಾ? ಸಾಯಿ ಮಿನರಲ್ಸ್ ವಿಚಾರದಲ್ಲಿ ನಾನು ಲೀಗಲ್ ಫೈಟ್ ಮಾಡುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ಕಾನೂನು ಮೊರೆ ಹೋಗಲೇಬೇಕು ಎಂದಿದ್ದಾರೆ.

ಕುಮಾರಸ್ವಾಮಿ ಅರೆಸ್ಟ್​ ಮಾಡಿ ಎಂದು ನಾನು ಎಲ್ಲೂ ಹೇಳಿಲ್ಲ, ಅಂತಹ ಸನ್ನಿವೇಶ ಬಂದ್ರೆ ಮಾಡುತ್ತೇವೆ: ಸಿಎಂ 

ಕೊಪ್ಪಳ ತಾಲೂಕಿನ ಗಿಣಗೇರಾ ಏರ್​ಸ್ಟ್ರಿಪ್​​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಿಎಂ ಸಿದ್ದರಾಯ್ಯ, ಕುಮಾರಸ್ವಾಮಿ ಅರೆಸ್ಟ್​ ಮಾಡಿ ಎಂದು ನಾನು ಎಲ್ಲೂ ಹೇಳಿಲ್ಲ. ಅಂತಹ ಸನ್ನಿವೇಶ ಬಂದ್ರೆ ಮುಲಾಜಿಲ್ಲದೆ ಅರೆಸ್ಟ್ ಮಾಡುತ್ತೇವೆ. ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡ್ತಾರೆಂದು ಕುಮಾರಸ್ವಾಮಿ ಭಯ ಪಟ್ಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ 62 ಪ್ರಕರಣ ದಾಖಲಾಗಿವೆ: ಹೆಚ್​ಡಿ ಕುಮಾರಸ್ವಾಮಿ

ಪ್ರಾಸಿಕ್ಯೂಷನ್​​ಗೆ ನಾವು ಕೇಳಿಲ್ಲ, ಖಾಸಗಿಯವರು ಸಹ ಕೇಳಿಲ್ಲ. ಎಸ್​​ಐಟಿ ಹಾಗೂ ಲೋಕಾಯುಕ್ತ ತನಿಖೆ ಮಾಡಿ ಕೇಳಿದ್ದಾರೆ. ಸಾಕ್ಷ್ಯ ಸಂಗ್ರಹ ಮಾಡಿ ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳಿದ್ದಾರೆ. ಕುಮಾರಸ್ವಾಮಿ ವಿರುದ್ಧ ಸಾಕ್ಷಿಗಳು ಇವೆ ಅಂತಾ ಅದರ ಅರ್ಥ. ತನಿಖೆ ಮಾಡಿ, ಸಾಕ್ಷಿ ಇದ್ದರೂ ಸಹ ಬಿಟ್ಟುಬಿಡಬೇಕಾ. ರಾಜ್ಯಪಾಲರು ತಾರತಮ್ಯ ಮಾಡಿದ್ದಾರೆ, ನನಗೆ ನೋಟಿಸ್ ಕೊಟ್ಟರು. ಟಿ.ಜೆ.ಅಬ್ರಹಾಂ ಕೊಟ್ಟ ಪತ್ರದ ಮೇಲೆ ಅವತ್ತೇ ನೋಟಿಸ್ ನೀಡಿದ್ದಾರೆ. ಆದರೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಯಾಕೆ ನೋಟಿಸ್​ ಕೊಡಲಿಲ್ಲ. ಲೋಕಾಯುಕ್ತ ತನಿಖೆ ಮಾಡಿ ಪ್ರಾಸಿಕ್ಯೂಷನ್​ಗೆ ಕೇಳಿದ್ರೂ ಕೊಟ್ಟಿಲ್ಲ. ಕುಮಾರಸ್ವಾಮಿ ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.