ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು

ಮೈಸೂರು ಬಿಟ್ಟರೇ ಅದ್ದೂರಿ ದಸರಾ ನೋಡಲು ಸಿಗುವುದು ಶಿವಮೊಗ್ಗ ನಗರದಲ್ಲಿ. ದಶಕಗಳಿಂದ ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯು ಅದ್ಧೂರಿಯಾಗಿ ನಡೆಯುತ್ತಿದೆ. ಹೀಗಾಗಿ ಶಿವಮೊಗ್ಗ ದಸರಾ ಹಬ್ಬಕ್ಕಾಗಿ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಶಿವಮೊಗ್ಗದ ಜಂಬೂ ಸವಾರಿಗಾಗಿ ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳು ಬರಲಿವೆ.

ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು
ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on:Oct 02, 2024 | 10:33 PM

ಶಿವಮೊಗ್ಗ, ಅಕ್ಟೋಬರ್​ 02: ವಿಶ್ವವಿಖ್ಯಾತ ಮೈಸೂರು ದಸರಾ (Dasara) ಬಿಟ್ಟರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ನಡೆಯಲಿದೆ. ದಸರಾ ಅಂದರೆ ಅಲ್ಲಿ ಆನೆಗಳು ಇರಲೇಬೇಕು. ಶಿವಮೊಗ್ಗ ದಸರಾಕ್ಕೆ ಈ ಬಾರಿ ಮೂರು ಆನೆಗಳು ಎಂಟ್ರಕೊಡುತ್ತಿವೆ. ಸಕ್ರೆಬೈಲಿನ ಆನೆ ಬಿಡಾರದಲ್ಲಿ ದಸರಾಕ್ಕೆ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.

ಶಿವಮೊಗ್ಗದಲ್ಲಿ ಅದ್ಧೂರಿ ದಸರಾ ಜಂಬೂ ಸವಾರಿ

ಮೈಸೂರು ಬಿಟ್ಟರೇ ಅದ್ದೂರಿ ದಸರಾ ನೋಡಲು ಸಿಗುವುದು ಶಿವಮೊಗ್ಗ ನಗರದಲ್ಲಿ. ದಶಕಗಳಿಂದ ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯು ಅದ್ಧೂರಿಯಾಗಿ ನಡೆಯುತ್ತಿದೆ. ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಮೈಸೂರು ಮಾದರಿಯಲ್ಲಿಯೇ ಆನೆಯನ್ನು ಬಳಸಿಕೊಳ್ಳುವುದು ಶಿವಮೊಗ್ಗ ದಸರಾ ಮತ್ತೊಂದು ವಿಶೇಷವಾಗಿದೆ.

ಇದನ್ನೂ ಓದಿ: ಮೈಸೂರು ದಸರಾ: ಸಿಡಿಮದ್ದು ತಾಲೀಮಿನ ವೇಳೆ ಬೆಚ್ಚಿದ ಹಿರಣ್ಯ ಆನೆ, ಮಾವುತನ ಸಾಹಸದಿಂದ ತಪ್ಪಿದ ಅನಾಹುತ

ಶಿವಮೊಗ್ಗ ದಸರಾ ಹಬ್ಬಕ್ಕಾಗಿ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಶಿವಮೊಗ್ಗದ ಜಂಬೂ ಸವಾರಿಗಾಗಿ ಸಕ್ರೆಬೈಲು ಆನೆಬಿಡಾರದ ಸಾಗರ್, ಬಾಲಣ್ಣ ಹಾಗೂ ಬಹದ್ಹೂರ್ ಆನೆಗಳಿಗೆ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚೆನ್ನಬಸಪ್ಪ ಹಾಗೂ ಪಾಲಿಕೆ ಆಯುಕ್ತೆ ಕವಿತಾ ನೇತೃತ್ವದಲ್ಲಿ ಸಕ್ರೆಬೈಲು ಆನೆ ಬಿಡಾರದ ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ಶಿವಮೊಗ್ಗ ದಸರಾದ ಜಂಬೂ ಸವಾರಿ ಹೊರಲು ತಾಲಿಮು ನಡೆಸಲು ಶಿವಮೊಗ್ಗಕ್ಕೆ ಮೂರು ಆನೆಗಳು ಎಂಟ್ರಿಕೊಡುತ್ತಿವೆ.

ಇದೇ ಮೊದಲ ಬಾರಿಗೆ ಆನೆ ಬಿಡಾರದಿಂದ ಮೂರು ಗಂಡಾನೆಗಳನ್ನು ಕಳಿಸಲಾಗುತ್ತಿದೆ. ಈ ಹಿಂದೆ ಸಾಗರ್ , ನೇತ್ರಾವತಿ, ಬಾನುಮತಿ ಆನೆಗಳು ಭಾಗವಹಿಸುತ್ತಿತ್ತು. ಈ ಬಾರಿ ಎರಡು ಆನೆಗಳು ಮರಿ ಹಾಕಿರುವುದರಿಂದ ಮೂರು ಗಂಡಾನೆಗಳು ಆಗಮಿಸಿವೆ. ಅಂಬಾರಿಯನ್ನು ಸಾಗರ್ ಹೊತ್ತು ನಡೆದರೆ ಬಾಬಣ್ಣ ಹಾಗೂ ಬಹದ್ಹೂರ್ ಆನೆಗಳು ಸಾಥ್ ನೀಡಲಿವೆ. ಬಾಲಣ್ಣ 3500 ಕೆ.ಜಿ ತೂಕ ಹೊಂದಿದೆ. ಎತ್ತರ 2.70 ಮೀಟರ್, ಬಾಲಣ್ಣ (28) ಸೌಮ್ಯ ಸ್ವಭಾವ ಹೊಂದಿದೆ. 2017ರಲ್ಲಿ ಉಬ್ರಾಣಿ ಆಭಯಾರಣದ ಚನ್ನಗಿರಿಯಲ್ಲಿ ಸೆರೆಸಿಕ್ಕಿತ್ತು. ಬಹದ್ದೂರ್ (37) ಆನೆ 4000 ಕೆಜಿ ಇದೆ. 2.60 ಮೀಟರ್. ಇದು ಚನ್ನಗಿರಿ ಅರಣ್ಯದಲ್ಲಿ ಸೆರೆಸಿಕ್ಕಿತ್ತು. ಇದರ ಸ್ವಭಾವ ಕೂಡ ಸೌಮ್ಯ ಆಗಿದೆ. ಸಾಗರ ಆನೆ ಕೂಡ ಬಲಿಷ್ಠವಾಗಿದೆ. ಸಾಗರ ಆನೆಯೇ ಶಿವಮೊಗ್ಗದ ದಸರಾದ ಅಂಬಾರಿಯನ್ನು ಹೊರಲಿದೆ. ಸಾಗರ ಆನೆಯು ಈ ವರ್ಷದ ದಸರಾದ ಪ್ರಮುಖ ಆಕರ್ಷಣೆ ಆಗಿದೆ.

ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಹಾಗಾಗಿ ದೇಶ ವಿದೇಶಗಳಿಂದಲೂ ಮೈಸೂರು ದಸರಾ ನೋಡಲು ಜನ ಬರುತ್ತಾರೆ. ಅದರಂತೆ ರಾಜ್ಯದಲ್ಲೇ ಎರಡನೇ ಅದ್ದೂರಿಯಾಗಿ ದಸರಾ ಆಚರಣೆ ನಡೆಯುವುದು ಮಲೆನಾಡು ಶಿವಮೊಗ್ಗದಲ್ಲಿ. ಹಾಗಾಗಿ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಈಗಾಗಲೇ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ.

ಅ.3ರಂದು ಬೆಳಗ್ಗೆ 9 ಗಂಟೆಗೆ ಮಹಾನಗರ ಪಾಲಿಕೆ ಆವರಣದಿಂದ ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಆರಂಭವಾಗಲಿದೆ. ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ದೇಗುಲದ ಆವರಣದಲ್ಲಿ ಸಿನಿಮಾ ನಿರ್ದೇಶಕ ಸುನಿಲ್‌ ಕುಮಾರ್‌ ದೇಸಾಯಿ ದಸರಾ ಮಹೋತ್ಸವ ಉದ್ಘಾಟಿಸಿ, ದಸರಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರು ದಸರಾ ರೀತಿಯಲ್ಲೇ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಗಳು, ನಟ ,ನಟಿಯರಿಂದಲೂ ಕಾರ್ಯಕ್ರಮಗಳು ನಡೆಯಲಿದೆ. ಈ ವರ್ಷದ ದಸರಾಕ್ಕೆ ಮೂರು ಆನೆಗಳು ಎಂಟ್ರಿ ಕೊಡುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಸಕ್ರೆಬೈಲು ಆನೆಬಿಡಾರದ ಮೂರು ಪಳಗಿದ ಆನೆಗಳು ಶಿವಮೊಗ್ಗದ ದಸರಾದ ಮೆರಗನ್ನು ಹೆಚ್ಚಸಲಿವೆ.

ಇದನ್ನೂ ಓದಿ: ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ​ ಅವರಿಗೆ ಸಚಿವ ಹೆಚ್​ಸಿ ಮಹದೇವಪ್ಪರಿಂದ ಅಧಿಕೃತ ಆಹ್ವಾನ

ರಾಜ್ಯದಲ್ಲೇ ಮೈಸೂರು ಹೊರತು ಪಡಿಸಿ ನಡೆಯುವ ಅದ್ದೂರಿ ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭ ವಾಗಿದೆ. ಕಳೆದ ಬಾರಿ ಕೊನೆ ಕ್ಷಣದಲ್ಲಿ ದಸರಾಕ್ಕೆ ಬಂದ ಅಂಬಾರಿ ಹೊರುವ ಕುಂತಿ ಆನೆಯು ಮರಿ ಹಾಕಿತ್ತು. ಇದರಿಂದ ಜಂಬೂಸವಾರಿ ರದ್ದಾಗಿತ್ತು. ಈ ವರ್ಷ ಆದರೂ ಆನೆಯು ಅಂಬಾರಿ ಹೊತ್ತು ಸಾಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:32 pm, Wed, 2 October 24

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ