ಡಿಕೆಶಿ ಪ್ರಕರಣದಲ್ಲಿ ಹೈಕಮಾಂಡ್ಗೂ ಕಾದಿದೆಯಾ ಬಿಸಿ?
ಕಾಂಗ್ರೆಸ್ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ಪ್ರಕರಣದಲ್ಲಿ ಹೈಕಮಾಂಡ್ಗೂ ನಂಟು ಇದೆಯಾ? ಈ ಸಂಬಂಧ ಎಐಸಿಸಿಗೂ ಇಡಿ ನೋಟಿಸ್ ನೀಡುತ್ತಾ ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ. ಸದ್ಯ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ. ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದಾಗ ದಾಖಲೆಯಿಲ್ಲದ ಹಣ ಮತ್ತು ಕೆಲವು ದಾಖಲೆಗಳು ಸಿಕ್ಕಿದ್ದವು. ಈ ಸಂಬಂಧ ನಿರಂತರವಾಗಿ ಇಡಿ ಅಧಿಕಾರಿಗಳು ಡಿಕೆಶಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿಯ […]
ಕಾಂಗ್ರೆಸ್ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ಪ್ರಕರಣದಲ್ಲಿ ಹೈಕಮಾಂಡ್ಗೂ ನಂಟು ಇದೆಯಾ? ಈ ಸಂಬಂಧ ಎಐಸಿಸಿಗೂ ಇಡಿ ನೋಟಿಸ್ ನೀಡುತ್ತಾ ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಕೇಳಿಬರುತ್ತಿವೆ.
ಸದ್ಯ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಅಧಿಕಾರಿಗಳ ವಶದಲ್ಲಿದ್ದಾರೆ. ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದಾಗ ದಾಖಲೆಯಿಲ್ಲದ ಹಣ ಮತ್ತು ಕೆಲವು ದಾಖಲೆಗಳು ಸಿಕ್ಕಿದ್ದವು. ಈ ಸಂಬಂಧ ನಿರಂತರವಾಗಿ ಇಡಿ ಅಧಿಕಾರಿಗಳು ಡಿಕೆಶಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿಯ ಸಪ್ದರ್ಜಂಗ್ ಪ್ಲ್ಯಾಟ್ನಲ್ಲಿ ಸಿಕ್ಕ ಹಣವನ್ನು ಹೈಕಮಾಂಡ್ಗೆ ನೀಡುವ ಉದ್ದೇಶವಿತ್ತಾ? ಅಥವಾ 2017ಕ್ಕೂ ಮುಂಚೆಯೇ ಎಐಸಿಸಿಗೆ ಹಣ ತಲುಪಿಸಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಡಿಕೆಶಿಗೆ ಇಡಿ ಅಧಿಕಾರಿಗಳು ಕೇಳುತ್ತಿದ್ದಾರೆ.
ಹಣವನ್ನು ಎಐಸಿಸಿಗೆ ನೀಡಲು ಸಫ್ದರ್ಜಂಗ್ ಪ್ಲ್ಯಾಟ್ನಲ್ಲಿಡಲಾಗಿತ್ತು ಎಂದು ಮತ್ತೊಬ್ಬ ಆರೋಪಿ ಆಂಜನೇಯ ಹೇಳಿಕೆ ಕೊಟ್ಟಿದ್ದರು. ಡಿಕೆಶಿ ಆಪ್ತ ಹಾಗೂ ಕಾರು ಚಾಲಕ ರಾಜೇಂದ್ರ ವರ್ಮಾ ಸಹ ಇದೇ ರೀತಿ ಹೇಳಿಕೆ ನೀಡಿದ್ದರು. ಹೀಗಾಗಿ ಎಐಸಿಸಿ ಹಣಕಾಸು ವಿಭಾಗದ ಪದಾಧಿಕಾರಿಗಳಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡುವ ಸಾಧ್ಯತೆ ಇದೆ.
Published On - 12:28 pm, Fri, 13 September 19