AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್​ ರೂಲ್ಸ್​​ ತುಂಬಾ ಸ್ಟ್ರಿಕ್ಟು..! ಆದ್ರೆ ಸ್ವತಃ RTO ಮಾಡಿದ್ದೇನು?

ಬೆಳ್ಳಂಬೆಳಿಗ್ಗೆ ಆರ್ ಟಿಒ ಇನ್ಸ್​ಪೆಕ್ಟರ್ ನಿಂದ ಅವಘಡವೊಂದು ಸಂಭವಿಸಿದೆ.  ಚಂದಾಪುರ ಆರ್ ಟಿಒ ಇನ್ಸ್​ಪೆಕ್ಟರ್ ಆಗಿರುವ  ಮಂಜುನಾಥ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದು, ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬೆಳ್ಳಿಗೆ 11 ಗಂಟೆಯ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಟಿಸಿಎಸ್ ಕಂಪನಿ ಬಳಿ ಈ ಘಟನೆ ಸಂಭವಿಸಿದ, ಅಲ್ಲೆ ನಿಂತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ಆಟೋದಲ್ಲಿದ್ದ ಚಾಲಕ ಇಮ್ರಾನ್​ಗೆ ಗಂಭೀರ ಗಾಯಗಳಾಗಿದ್ದು,  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಖಂಡಿಸಿ ಆಟೋ […]

ಟ್ರಾಫಿಕ್​ ರೂಲ್ಸ್​​ ತುಂಬಾ ಸ್ಟ್ರಿಕ್ಟು..! ಆದ್ರೆ ಸ್ವತಃ  RTO ಮಾಡಿದ್ದೇನು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Sep 12, 2019 | 5:17 PM

Share

ಬೆಳ್ಳಂಬೆಳಿಗ್ಗೆ ಆರ್ ಟಿಒ ಇನ್ಸ್​ಪೆಕ್ಟರ್ ನಿಂದ ಅವಘಡವೊಂದು ಸಂಭವಿಸಿದೆ.  ಚಂದಾಪುರ ಆರ್ ಟಿಒ ಇನ್ಸ್​ಪೆಕ್ಟರ್ ಆಗಿರುವ  ಮಂಜುನಾಥ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದು, ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ.

ಬೆಳ್ಳಿಗೆ 11 ಗಂಟೆಯ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಟಿಸಿಎಸ್ ಕಂಪನಿ ಬಳಿ ಈ ಘಟನೆ ಸಂಭವಿಸಿದ, ಅಲ್ಲೆ ನಿಂತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ. ಈ ಪರಿಣಾಮ ಆಟೋದಲ್ಲಿದ್ದ ಚಾಲಕ ಇಮ್ರಾನ್​ಗೆ ಗಂಭೀರ ಗಾಯಗಳಾಗಿದ್ದು,  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಖಂಡಿಸಿ ಆಟೋ ಚಾಲಕರಿಂದ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಲಾಗುತ್ತಿದೆ.  ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಘಟನೆಯನ್ನು ಪರಿಶೀಲಿಸಿ ಮೈಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸಿದ ಆರ್ ಟಿಒ ಇನ್ಸ್​ಪೆಕ್ಟರ್ ಮಂಜುನಾಥ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು