ನೋ ಬೇಲ್; ಡಿಕೆಶಿ ಮತ್ತೆ 4 ದಿನ ಇಡಿ ಕಸ್ಟಡಿಗೆ

ನೋ ಬೇಲ್; ಡಿಕೆಶಿ ಮತ್ತೆ 4 ದಿನ ಇಡಿ ಕಸ್ಟಡಿಗೆ

ದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಇಡಿ ಸಂಕಷ್ಟ ಮುಂದುವರಿದೆ. ಸೆಪ್ಟಂಬರ್ 17ರ ಮಂಗಳವಾರದವರೆಗೂ ಮತ್ತೆ ಇಡಿ ಕಸ್ಟಡಿಗೆ ನೀಡಿ ದೆಹಲಿಯ ರೋಸ್ ಅವೆನ್ಯೂ ವಿಶೇಷ ಕೋರ್ಟ್ ಆದೇಶಿಸಿದೆ. ಸೆ.16ರಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಕಾಲಾವಕಾಶ ನೀಡಿದೆ. ದೆಹಲಿಯ ತಮ್ಮ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಸೆ.3ರಿಂದ 10 ದಿನಗಳ ಕಾಲ ಡಿಕೆ ಶಿವಕುಮಾರ್ ಇಡಿ ಕಸ್ಟಡಿಯಲ್ಲಿದ್ದಾರೆ. ಇಂದಿಗೆ ಕಸ್ಟಡಿ ಅವಧಿ ಮುಗಿದ ಕಾರಣ ಡಿಕೆಶಿಯನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಆರಂಭದಿಂದಲೂ ಡಿಕೆಶಿಗೆ ಜಾಮೀನು […]

sadhu srinath

|

Sep 13, 2019 | 7:47 PM

ದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಇಡಿ ಸಂಕಷ್ಟ ಮುಂದುವರಿದೆ. ಸೆಪ್ಟಂಬರ್ 17ರ ಮಂಗಳವಾರದವರೆಗೂ ಮತ್ತೆ ಇಡಿ ಕಸ್ಟಡಿಗೆ ನೀಡಿ ದೆಹಲಿಯ ರೋಸ್ ಅವೆನ್ಯೂ ವಿಶೇಷ ಕೋರ್ಟ್ ಆದೇಶಿಸಿದೆ. ಸೆ.16ರಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಇಡಿಗೆ ಕಾಲಾವಕಾಶ ನೀಡಿದೆ.

ದೆಹಲಿಯ ತಮ್ಮ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ಸೆ.3ರಿಂದ 10 ದಿನಗಳ ಕಾಲ ಡಿಕೆ ಶಿವಕುಮಾರ್ ಇಡಿ ಕಸ್ಟಡಿಯಲ್ಲಿದ್ದಾರೆ. ಇಂದಿಗೆ ಕಸ್ಟಡಿ ಅವಧಿ ಮುಗಿದ ಕಾರಣ ಡಿಕೆಶಿಯನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಆರಂಭದಿಂದಲೂ ಡಿಕೆಶಿಗೆ ಜಾಮೀನು ನೀಡುವ ಸಂಬಂಧ ವಾದ-ಪ್ರತಿವಾದಗಳು ಜೋರಾಗಿದ್ದವು. ಇತ್ತ ಡಿಕೆಶಿ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ರೆ, ಅತ್ತ ಇಡಿ ಪರ ವಕೀಲ ನಟರಾಜ್ ಪ್ರತಿವಾದ ಮಂಡಿಸಿದ್ರು.

ಕೋರ್ಟ್​ನಲ್ಲಿ ವಾದ-ಪ್ರತಿವಾದ ಹೇಗಿತ್ತು?

ಎಲ್ಲ ಕಡೆ ಸಿಕ್ಕ ಹಣ ಸೇರಿಸಿ  ಒಟ್ಟು 8.50 ಕೋಟಿ ರೂ. ಎಂದಿದ್ದಾರೆ. ಆದ್ರೆ ಆರೋಪ ಇರುವುದು 41 ಲಕ್ಷ ರೂಪಾಯಿ ಮಾತ್ರ. ಇದು ಅರ್ಧ ಕೋಟಿಯೂ ಆಗುವುದಿಲ್ಲ. ಅಲ್ಲದೆ ಆಂಜನೇಯ, ಸಚಿನ್ ನಾರಾಯಣ್ ಬೇರೆ ಬೇರೆ ವ್ಯಕ್ತಿಗಳು. ಮೂವರೂ ಪ್ರತ್ಯೇಕವಾಗಿ ಆದಾಯ ತೆರಿಗೆ ಪಾವತಿಸ್ತಿದ್ದಾರೆ. ಡಿಕೆಶಿ ಜಾಮೀನು ಅರ್ಜಿಗೆ ಈವರೆಗೂ ಇಡಿ ಆಕ್ಷೇಪಣೆ ಸಲ್ಲಿಸಿಲ್ಲ. ನಾನು ಚಂದ್ರನನ್ನು ಕೇಳುತ್ತಿಲ್ಲ, ಇಡಿ ಕಸ್ಟಡಿಗೆ ಡಿಕೆಶಿಯನ್ನು ನೀಡಬೇಡಿ ಅಂತ ಕೇಳುತ್ತಿದ್ದೇನೆ ಎಂದು ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದ್ರು.

ಇನ್ನು ಇಡಿ ಪರ ವಾದ ಮಂಡಿಸಿದ ಕೆ.ಎಂ.ನಟರಾಜನ್, ಇಡಿ ಪ್ರಶ್ನೆಗಳಿಗೆ ಡಿಕೆಶಿ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೆ ಅವರು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಡಿಕೆಶಿ ಮತ್ತು ಸಹಚರರು 317 ಖಾತೆಗಳಿಂದ ವಹಿವಾಟು ನಡೆಸುತ್ತಿದ್ದಾರೆ. ಹೀಗಾಗಿ ಎಲ್ಲಾ ಮಾಹಿತಿಯನ್ನು ಪಡೆಯಲು ಇನ್ನೂ 5 ದಿನ ಇಡಿ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ರು.

ವಾದ-ಪ್ರತಿವಾದ ಆಲಿಸಿದ ಜಡ್ಜ್​ ಕುಹರ್, ಸೋಮವಾರದೊಳಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಇಡಿಗೆ ಸೂಚನೆ ನೀಡಿ ಆದೇಶ ಕಾಯ್ದಿರಿಸಿ ಚೇಂಬರ್ ಕಡೆ ಹೊರಟರು. ಅರ್ಧಗಂಟೆ ಬಳಿಕ ಕೋರ್ಟ್​ಗೆ ಆಗಮಿಸಿದ ಜಡ್ಜ್​ ಕುಹರ್ ಡಿಕೆಶಿಯನ್ನು ಸೆ.17ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದರು. ಮೊದಲು ಡಿ.ಕೆ.ಶಿವಕುಮಾರ್​ಗೆ ವೈದ್ಯಕೀಯ ನೆರವು ನೀಡಿ. ಆರೋಗ್ಯಕ್ಕೆ ಮೊದಲ ಆದ್ಯತೆ ಬಳಿಕ ವಿಚಾರಣೆ ಮುಂದುವರಿಸಿ ಎಂದು ಇಡಿ ತನಿಖಾಧಿಕಾರಿಗೆ ನ್ಯಾ. ಕುಹರ್‌ ಸೂಚನೆ ನೀಡಿದರು.

ಇಡಿ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಡಿಕೆಶಿ ವಕೀಲರ ಪ್ರಯತ್ನ ಇಂದೂ ವಿಫಲವಾಯ್ತು. ಅನಾರೋಗ್ಯ ನೆಪವೊಡ್ಡಿದರೂ ಇಡಿ ಕಸ್ಟಡಿಯಿಂದ ಡಿಕೆ ಶಿವಕುಮಾರ್ ಪಾರಾಗಲು ಸಾಧ್ಯವಾಗಲಿಲ್ಲ. ಇನ್ನೂ 4 ದಿನಗಳ ಕಾಲ ಇಡಿ ಅಧಿಕಾರಿಗಳು ಕೇಳಬಹುದಾದ ಪ್ರಶ್ನೆಗಳ ಆತಂಕದಲ್ಲಿ ಡಿಕೆಶಿ ಕಾಲಕಳೆಯಬೇಕಾದ ಪರಿಸ್ಥಿತಿ ಬಂದಿದೆ. ಒಂದು ವೇಳೆ ಸೆ.17ರಂದು ಜಾಮೀನು ಸಿಗದಿದ್ರೆ ಡಿಕೆಶಿಯನ್ನು ತಿಹಾರ್ ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ.

ಬೆಂಬಲಿಗರಿಗೆ ಊರಿಗೆ ತೆರಳುವಂತೆ ಡಿಕೆಶಿ ಸೂಚನೆ

ಕೋರ್ಟ್​ ಆದೇಶ ನೀಡುವ ಮುಂಚೆಯೇ ಬೆಂಬಲಿಗರಿಗೆ ಊರಿಗೆ ಹೋಗಿ ಎಂದು ಡಿಕೆ ಶಿವಕುಮಾರ್​ ಸೂಚನೆ ನೀಡಿದ್ದಾರೆ. ವಾದ-ಪ್ರತಿವಾದ ಮುಗಿದ ಬಳಿಕ ನ್ಯಾಯಾಧೀಶರು ತೀರ್ಪು ಕಾಯ್ದಿರಿಸುತ್ತಾರೆ. ತೀರ್ಪು ನೀಡುವ ಮುಂಚೆಯೇ ತನಗೆ ಜಾಮೀನು ಸಿಗುವುದಿಲ್ಲ ಎಂದು ಅರಿತ ಡಿಕೆ ಶಿವಕುಮಾರ್​, ನನ್ನನ್ನು ನೋಡಿದವರೆಲ್ಲ ಕೋರ್ಟ್ ಹಾಲ್​ನಿಂದ ಹೊರಗೆ ಹೋಗಿ, ನಿಮ್ಮ ಊರಿಗೆ ತೆರಳಿ, ನನಗೆ ಇನ್ನೂ ಒಂದು ವಾರ ಇಡಿ ಕಸ್ಟಡಿ ವಿಸ್ತರಿಸುತ್ತಾರೆ ಎಂದರು. ಈ ವೇಳೆ ಡಿಕೆಶಿ ಪರ ಪ್ರತಿಭಟನೆ ನಡೆಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

Follow us on

Related Stories

Most Read Stories

Click on your DTH Provider to Add TV9 Kannada