ರಾಯಚೂರಿನಲ್ಲಿ ಮತ್ತೊಂದು ಬಸ್ ಅಪಘಾತ: ಚಾಲಕ ಸಾವು, 9 ಜನರಿಗೆ ಗಾಯ
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಸಾರಿಗೆ ಬಸ್ ಮತ್ತು ಶಾಲಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಚಾಲಕ ಸಾವನ್ನಪ್ಪಿದ್ದು, 9 ಜನರಿಗೆ ಗಾಯಗಳಾಗಿವೆ.
ರಾಯಚೂರು, ಸೆಪ್ಟೆಂಬರ್ 08: ಕೆಎಸ್ಆರ್ಟಿಸಿ ಬಸ್ಗೆ ಖಾಸಗಿ ಬಸ್ ಡಿಕ್ಕಿ (bus accident) ಹೊಡೆದ ಪರಿಣಾಮ ಖಾಸಗಿ ಬಸ್ ಚಾಲಕ ಸಾವನ್ನಪ್ಪಿದ್ದು, 9 ಪ್ರಯಾಣಿಕರಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಹರಾಪೂರ ಗ್ರಾಮದ ಬಳಿ ನಡೆದಿದೆ. ಪುಂಡಲೀಕ್ (36) ಮೃತ ಖಾಸಗಿ ಬಸ್ ಚಾಲಕ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಕ್ಯಾಮರಾದಲ್ಲಿ ಸೆರೆ ಆಗಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಿಂದ ಯಾದಗಿರಿ ಕಡೆಗೆ ಕೆಎಸ್ಆರ್ಟಿಸಿ ಬಸ್ ಹೊರಟಿತ್ತು. ಬೆಂಗಳೂರಿನಿಂದ ಕಲಬುರಗಿಯತ್ತ ಖಾಸಗಿ ಬಸ್ ಹೊರಟಿತ್ತು. ಈ ಹರಾಪೂರ ಗ್ರಾಮದ ಬಳಿ ಡಿಕ್ಕಿ ಹೊಡೆದಿವೆ. ಗಾಯಾಳುಗಳಿಗೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರ್ಲಾಪುರ ಕ್ರಾಸ್ ಬಳಿ ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ: ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ
ಬೆಳಗಾವಿ: ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿರುವಂತಹ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಬಳಿ ನಡೆದಿದೆ. ಸರ್ಕಾರಿ ಬಸ್ನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ: 30ಕ್ಕೂ ಹೆಚ್ಚು ಜನರು ವಶಕ್ಕೆ
ಮಹಾಲಿಂಗಪುರದಿಂದ ಬೆಳಗಾವಿ ನಗರಕ್ಕೆ ಸರ್ಕಾರಿ ಬಸ್ ಹೊರಟಿತ್ತು. ಬಸ್ ಡಿಕ್ಕಿಯ ರಭಸಕ್ಕೆ ರಸ್ತೆ ಪಕ್ಕದ ಗುಂಡಿಗೆ ಲಾರಿ ಬಿದ್ದಿದೆ. ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜೊತೆಗೆ ಬಂದಿದ್ದವನಿಂದಲೇ ಚಾಕುವಿನಿಂದ ಇರಿದು ಕೊಲೆಗೆ ಯತ್ನ
ಕಲಬುರಗಿ: ಚಾಕುವಿನಿಂದ ಇರಿದು ಮಹಿಳೆಯ ಕೊಲೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮಡಕಿ ತಾಂಡಾದಲ್ಲಿ ನಡೆದಿದೆ. ಸವಿತಾ ಎಂಬುವರ ಕತ್ತು ಕೊಯ್ದು ಕೊಲೆಗೆ ದುಷ್ಕರ್ಮಿ ಯತ್ನಿಸಿದ್ದಾನೆ. ಹಲ್ಲೆಗೊಳಗಾದ ಸವಿತಾ ಕಮಲಾಪುರದ ಮರಮಂಚಿ ಗ್ರಾಮದ ನಿವಾಸಿ.
ಇದನ್ನೂ ಓದಿ: ತರಬೇತಿ ವೇಳೆ ಬೋಟ್ ಮಗುಚಿ ಇಬ್ಬರು ಕಮಾಂಡೋಗಳು ಸಾವು: ನಾಲ್ವರು ಪಾರು
ಬೆಳಗ್ಗೆ ಕ್ರೂಸರ್ ವಾಹನದಲ್ಲಿ ಸವಿತಾ ಮತ್ತು ವ್ಯಕ್ತಿ ಊರಿಗೆ ಹೊರಟಿದ್ದರು. ತಾಂಡಾ ಬಳಿ ಇಳಿದುಕೊಂಡಿದ್ದ ಸವಿತಾ, ಆಕೆಯ ಜೊತೆಗೆ ಬಂದಿದ್ದ ವ್ಯಕ್ತಿ. ಇಬ್ಬರ ನಡುವೆ ಗಲಾಟೆಯಾಗಿ ಕತ್ತು ಕೊಯ್ದು ಕೊಲೆಗೆ ಯತ್ನಿಸಲಾಗಿದೆ. ಸವಿತಾ ಪತಿ ಹೈದರಾಬಾದ್ನಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.