AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಮತ್ತೊಂದು ಹಗರಣ: ಸ್ವಪಕ್ಷದ ಶಾಸಕನ ವಿರುದ್ದವೇ ನಾರಾಯಣಸ್ವಾಮಿ ಆರೋಪ

ಕೋಲಾರ ಹಾಲು ಒಕ್ಕೂಟದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಸ್ವಪಕ್ಷದ ಶಾಸಕ ಕೆ.ವೈ. ನಂಜೇಗೌಡ ಮತ್ತು ಒಕ್ಕೂಟದ ಎಂ.ಡಿ. ಗೋಪಾಲಮೂರ್ತಿ ಅವರ ವಿರುದ್ಧ ಭೂಮಿ ವ್ಯವಹಾರ ಮತ್ತು ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. 50 ಎಕರೆ ಭೂಮಿ ಅನುಮತಿಯಲ್ಲೂ ಅಕ್ರಮ ಎಸಗಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಹಗರಣ: ಸ್ವಪಕ್ಷದ ಶಾಸಕನ ವಿರುದ್ದವೇ ನಾರಾಯಣಸ್ವಾಮಿ ಆರೋಪ
ಕರ್ನಾಟಕದಲ್ಲಿ ಮತ್ತೊಂದು ಹಗರಣ: ಸ್ವಪಕ್ಷದ ಶಾಸಕನ ವಿರುದ್ದವೇ ಆರೋಪ ನಾರಾಯಣಸ್ವಾಮಿ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Dec 08, 2024 | 4:39 PM

Share

ಕೋಲಾರ, ಡಿಸೆಂಬರ್​ 08: ಕೋಲಾರ ಹಾಲು ಒಕ್ಕೂಟದಲ್ಲಿ (Kolar Milk Union) ಭಾರಿ ಅವ್ಯವಹಾರ ನಡೆಯುತ್ತಿದೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕರಿಂದ ಮಾಲೂರು ಕಾಂಗ್ರೆಸ್ ಶಾಸಕರ ವಿರುದ್ದ ಗಂಭೀರ ಆರೋಪ ಮಾಡಲಾಗಿದೆ. ಪರೋಕ್ಷವಾಗಿ ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಮತ್ತು ಹಾಲಿ ಶಾಸಕ ಕೆ.ವೈ.ನಂಜೇಗೌಡ ವಿರುದ್ದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿರುಗಿಬಿದಿದ್ದಾರೆ. ಎಂವಿಕೆ‌ ಗೋಲ್ಡನ್ ಡೈರಿ ನಿರ್ಮಾಣ ಹಾಗೂ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬರುತ್ತಿದೆ.

ಸ್ವಪಕ್ಷದ ಎಂಎಲ್‌ಎ ವಿರುದ್ದವೇ ಆರೋಪ

ಎಂವಿಕೆ ಡೈರಿ‌ ಗುತ್ತಿಗೆ ಆಗಿರುವುದು ಒಬ್ಬರಿಗೆ. ಆದರೆ ಕೆಲಸ ಮಾಡುತ್ತಿರುವುದು ಮತ್ತೊಬ್ಬರು. ಮೆಟೀರಿಯಲ್ ಸರಬರಾಜು ಮಾಡುತ್ತಿರುವವರು ಮತ್ಯಾರೋ. ಎಲ್ಲಾ ಕಾಮಗಾರಿಗಳು ಒಂದೇ ಕುಟುಂಬದಿಂದ ನಡೆಯುತ್ತಿದೆ. ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಈ‌ ಬಗ್ಗೆ ಸರ್ಕಾರಕ್ಕೆ ದೂರು ನೀಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಸ್ವಾಮಿ ಸ್ವಪಕ್ಷದ ಎಂಎಲ್‌ಎ ವಿರುದ್ದವೇ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೋಲಾರ ಹಾಲು ಒಕ್ಕೂಟ ನೇಮಕಾತಿಯಲ್ಲಿ ಹಗರಣ ಆರೋಪ: ಅಂತಿಮ ಪಟ್ಟಿ ಬಿಡುಗಡೆ ಮಾಡದ ಆಡಳಿತ ಮಂಡಳಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಸ್​ಎನ್​ ನಾರಾಯಸ್ವಾಮಿ, ಕೋಲಾರ ಹಾಲು ಒಕ್ಕೂಟದ ಕ್ಷೇತ್ರ ವಿಗಂಡಣೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಒಕ್ಕೂಟದ ಎಂಡಿ  ಗೋಪಾಲಮೂರ್ತಿ ಅಕ್ರಮ ಕೂಟ ಕಟ್ಟಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕ್ಷೇತ್ರದ ವಿಗಂಡಣೆ ಮಾಡಿ ಕೋಲಾರ ಜನತೆಗೆ ಮೋಸ ಮಾಡಿದ್ದಾರೆ. ಒಕ್ಕೂಟದಲ್ಲಿ ಯಾರು ಪ್ರಶ್ನೆ ಮಾಡಬಾರದೆಂದು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಒಕ್ಕೂಟದಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ‌ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಈ ಹಿಂದಿನ ಒಕ್ಕೂಟದ ಆಡಳಿತ ಮಂಡಳಿ ಸಾಕಷ್ಟು ಅವ್ಯವಹಾರ ನಡೆಸಿದೆ. ಕ್ಷೇತ್ರ ವಿಂಗಡಣೆ ಮಾಡುವಾಗ ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ಮಾಡಬೇಕು. ಕ್ಷೇತ್ರ ವಿಂಗಡಣೆ ಬಗ್ಗೆ ಸೂಚನೆ ಬಂದರೆ ಯಾರ ಗಮನಕ್ಕೂ ತರದೆ ಅಕ್ರಮ ಎಸಗಿದ್ದಾರೆ. ಈ ಅಕ್ರಮ ಕೂಟದಲ್ಲಿ ಕೋಟ್ಯಾಂತರ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕ್ಷೇತ್ರ ವಿಂಗಡಣೆ‌ ಬಗ್ಗೆ‌ ಏಕೆ ಪ್ರಚಾರ ಮಾಡಿಲ್ಲ, ಯಾರ ಒತ್ತಡವಿತ್ತು ಎಂಬುವುದು ಎಂ.ಡಿ. ಅವರು ತಿಳಿಸಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರ ಹಾಲು ಒಕ್ಕೂಟದ ನೇಮಕಾತಿಯಲ್ಲಿ ದಂಧೆ; ವಿದ್ಯಾರ್ಹತೆಗಿಂತ ಶಿಫಾರಸ್ಸು ಪತ್ರವೇ ಮುಖ್ಯ

ಹಾಲು‌ ಒಕ್ಕೂಟಕ್ಕೆ ಹೊಳಲಿ ಗ್ರಾಮದ ಬಳಿ 50 ಎಕರೆ ಭೂಮಿ ಮಂಜೂರು ಮಾಡಿರುವುದೇ ಅಕ್ರಮ. ಡಿಸಿಗೆ 10 ಎಕರೆ ಮಾತ್ರ ಮಂಜೂರು ಮಾಡಲು ಅಧಿಕಾರ ಇದೆ. ಡಿಸಿ ಅವರು ತಮ್ಮ ವ್ಯಾಪ್ತಿ ಮೀರಿ ಮಂಜೂರು ಮಾಡಿದ್ದಾರೆ. ಹಸುಗಳಿಗೆ ಮೇವು ಬೆಳೆಯುವುದಾಗಿ ಎಂದು ಮಂಜೂರು ಮಾಡಿದ್ದಾರೆ. ಮೂಲ ಉದ್ದೇಶಕ್ಕೆ ಭೂಮಿ ಬಳಸದೆ ಕಮರ್ಷಿಯಲ್​ಗೆ ಅಂದರೆ ಸೋಲಾರ್ ಪ್ಲಾಂಟ್ ಮಾಡಲು ಹೊರಟ್ಟಿದ್ದಾರೆ. ಕಂದಾಯ ಇಲಾಖೆಯಿಂದ‌ ಯಾವುದೇ ಅನುಮತಿ‌ ಪಡೆಯದೆ ಅಕ್ರಮ ಪ್ರವೇಶ ಮಾಡಿದ್ದಾರೆ. ಇಂದನ ಸಚಿವ ಜಾರ್ಜ್ ಅವರ ಗಮನಕ್ಕೂ ತಂದಿಲ್ಲ. ಅವರು ಯಾವುದೇ ಮಂಜೂರಾತಿ ಕೊಟ್ಟಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ‌ ಧ್ವನಿ ಏತ್ತುವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.