ಏಷಿಯನ್ ಚಾಂಪಿಯನ್ಸ್ ಗೇಮ್ಸ್: 45 ಕೆಜಿ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಮುಧೋಳ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ

ನಿಂಗಪ್ಪನ ಸಾಧನೆ ಕಂಡು ಹರ್ಯಾಣಾದಲ್ಲಿ ಕುಸ್ತಿ ಇಂಡಿಯನ್ ಕ್ಯಾಂಪ್​ಗೆ ಆಯ್ಕೆಯಾಗಿದ್ದು, ಹರ್ಯಾಣಾ ಇಂಡಿಯನ್ ಕ್ಯಾಂಪ್​ನಲ್ಲಿ ಕಳೆದ ಎರಡು ವರ್ಷ ತರಬೇತಿಯಲ್ಲಿರುವ ನಿಂಗಪ್ಪ, ಇದೀಗ ಎಸ್​ಎಸ್​ಎಲ್​ಸಿ ಓದುತ್ತಿದ್ದಾನೆ.

ಏಷಿಯನ್ ಚಾಂಪಿಯನ್ಸ್ ಗೇಮ್ಸ್: 45 ಕೆಜಿ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಮುಧೋಳ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ
ಮುಧೋಳ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ
Follow us
TV9 Web
| Updated By: ಆಯೇಷಾ ಬಾನು

Updated on:Jun 26, 2022 | 10:22 PM

ಬಾಗಲಕೋಟೆ: ಏಷಿಯನ್ ಚಾಂಪಿಯನ್ ಗೇಮ್ಸ್​​ನ ಕುಸ್ತಿ (Wrestling) ಯಲ್ಲಿ ಮುಧೋಳ ನಗರದ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ ಚಿನ್ನದ ಪದಕ ಪಡೆದು, ದೇಶಕ್ಕೆ, ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಮೂಲದ ಪೈಲ್ವಾನ್​​ ನಿಂಗಪ್ಪ ಗೆನೆಣ್ಣವರ, 17 ವರ್ಷದೊಳಗಿನ 45 ಕೆಜಿ ವಿಭಾಗದಲ್ಲಿ ದೇಶಕ್ಕೆ ಚಿನ್ನ ತಂದ ಕುಸ್ತಿಪಟು. ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ಏಷಿಯನ್ ಗೇಮ್ಸ್ ನಡೆದಿದೆ. ನಿನ್ನೆ ನಡೆದ ಫೈನಲ್​ನಲ್ಲಿ ನಾಲ್ಕು ರಾಷ್ಟ್ರದ ಕುಸ್ತಿಪಟುಗಳನ್ನು ಸೋಲಿಸಿ ಚಿನ್ನದ ಭೇಟೆಯಾಡಿದ್ದು, ವಿಜಯದ ನಗೆ ಬೀರಿದ್ದಾನೆ. ಪೈಲ್ವಾನ್​​ ನಿಂಗಪ್ಪ ಗೆನೆಣ್ಣವರ ಇರಾನ್ ದೇಶದ ನವಾಜಿ ಅಲಿ ಎಂಬ ಕುಸ್ತಿಪಟುವನ್ನು ಮಣಿಸಿ ತಿರಂಗ ಹೊತ್ತು ಕುಣಿದಾಡಿದ್ದಾನೆ. ಜೂನ್ 17 ರಿಂದ 26 ರವರೆಗೆ ಷಿಯನ್ ಚಾಂಪಿಯನ್ಸ್ ಗೇಮ್ಸ್ ನಡೆದಿವೆ. ಸದ್ಯ ಮುಧೋಳ ನಗರದಲ್ಲಿ  ಕುಸ್ತಿಪಟು ನಿಂಗಪ್ಪ ಕುಟುಂಬ ನೆಲೆಸಿದ್ದು, ಮುಧೋಳ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷದಿಂದ ತರಬೇತಿ ಪಡೆಯುತ್ತಿದ್ದಾನೆ.

ಇದನ್ನೂ ಓದಿ: MVA Crisis: ಸಿಎಂ ಅಧಿಕೃತ ನಿವಾಸ ತೊರೆದ ಉದ್ಧವ್ ಠಾಕ್ರೆ, ಶಿವಸೈನಿಕರಿಂದ ಅಭೂತಪೂರ್ವ ಬೆಂಬಲ

ರಾಜ್ಯ ಮಟ್ಟದ ಕುಸ್ತಿಯಲ್ಲಿ ಪ್ರಥಮ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದು ನಿಂಗಪ್ಪ ಗಮನ ಸೆಳೆದಿದ್ದ. ನಿಂಗಪ್ಪನ ಸಾಧನೆ ಕಂಡು ಹರ್ಯಾಣಾದಲ್ಲಿ ಕುಸ್ತಿ ಇಂಡಿಯನ್ ಕ್ಯಾಂಪ್​ಗೆ ಆಯ್ಕೆಯಾಗಿದ್ದು, ಹರ್ಯಾಣಾ ಇಂಡಿಯನ್ ಕ್ಯಾಂಪ್​ನಲ್ಲಿ ಕಳೆದ ಎರಡು ವರ್ಷ ತರಬೇತಿಯಲ್ಲಿರುವ ನಿಂಗಪ್ಪ, ಇದೀಗ ಎಸ್​ಎಸ್​ಎಲ್​ಸಿ ಓದುತ್ತಿದ್ದಾನೆ. ತಂದೆ ತಾಯಿ ಇಬ್ಬರು ಕೃಷಿ ಕಾರ್ಮಿಕರಾಗಿದ್ದು, ಮತ್ತೊಬ್ಬರ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಕರ್ನಾಟಕದಿಂದ ಒಬ್ಬನೇ ಭಾಗಿಯಾಗಿದ್ದು, ಬಡತನದಲ್ಲಿ ಬೆಳೆದು ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಂಗಪ್ಪ ಗೆನೆಣ್ಣವರ ಮಿಂಚಿದ್ದಾನೆ.

ತಂದೆ ತಾಯಿ ಕೃಷಿ ಕಾರ್ಮಿಕರು,ಕಡುಬಡತನದಲ್ಲಿ ಅರಳಿದ ಜಗಜಟ್ಟಿ ನಿಂಗಪ್ಪ ಗೆನೆಣ್ಣವರ ಕಡುಬಡತನದಲ್ಲಿ ಬೆಳೆದ ಕುಸ್ತಿಪಟು ತಂದೆ ತಾಯಿ ಇಂದಿಗೂ ಬೇರೊಬ್ಬರ ಹೊಲದಲ್ಲಿ ಕೃಷಿಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.ಮೂಲತಃ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದವರಾದ ನಿಂಗಪ್ಪ ಅವರ ತಂದೆ ತಾಯಿ ಅವರು ಹೊಟ್ಟೆಪಾಡಿಗಾಗಿ ಮುಧೋಳ‌ ನಗರಕ್ಕೆ ಬಂದು ನೆಲೆಸಿದ್ದಾರೆ.ಬೇರೊಬ್ಬರ ಜಮೀನಿನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.ಇನ್ನು ಮಗನ ಕುಸ್ತಿ ಮೇಲಿನ ವ್ಯಾಮೋಹ ಕಂಡು ತಮ್ಮ ಕಷ್ಟದಲ್ಲೂ ಪ್ರೋತ್ಸಾಹ ನೀಡಿ ಕುಸ್ತಿ ಅಖಾಡಕ್ಕೆ ಕಳಿಸಿದ್ದಾರೆ.ನಿಂಗಪ್ಪ ಗೆನೆಣ್ಣವರ ಮುಧೋಳ‌ ನಗರದ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷಗಳ ಕಾಲ ಕುಸ್ತಿ ತರಭೇತಿ ಪಡೆದಿದ್ದಾರೆ.ಕುಸ್ತಿ ತರಭೇತಿದಾರ ಅರುಣ ಕುಮಕಾಲೆ ಅವರ ಬಳಿ ಕುಸ್ತಿ ಕಲಿತ ನಿಂಗಪ್ಪ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ನಂತರ ರಾಜಸ್ಥಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದರು.ಇದರಿಂದ ಆತ ಹರಿಯಾಣಾದ ಇಂಡಿಯನ್ ಕ್ಯಾಂಪ್ ಗೆ ಆಯ್ಕೆಯಾಗಿ ಅಲ್ಲೇ ಎರಡು ವರ್ಷದಿಂದ ಕುಸ್ತಿ ತರಭೇತಿ ಪಡೆಯುತ್ತಿದ್ದಾರೆ.

ರಾಜ್ಯದಿಂದ ಏಷಿಯನ್ ಚಾಂಪಿಯನ್ ಶಿಪ್ ಗೆ ಹೋಗಿದ್ದ ಕರ್ನಾಟಕದ ಏಕೈಕ ಕುಸ್ತಿಪಟು ನಿಂಗಪ್ಪ ನಿಂಗಪ್ಪ ಗೆನೆಣ್ಣವರ ಗೆ ಈಗ ಕೇವಲ ೧೬ ವರ್ಷ ವಯಸ್ಸಿದ್ದು ಮುಧೋಳ ನಗರದ ಆರ್ ಎಮ್ ಜಿ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಾರೆ.ಆದರೆ ಇಂತಹ ವಯಸ್ಸಲ್ಲೇ ತಮ್ಮ ಕುಸ್ತಿ ಪ್ರತಿಭೆ ಎಲ್ಲ ಕಡೆ ಹರಡುವಂತೆ ಪ್ರದರ್ಶನ ತೋರಿಸಿದ್ದಾರೆ‌.ಇನ್ನು ಕಿರಗಿಸ್ತಾನದಲ್ಲಿ ನಡೆದ ಏಷಿಯನ್ ಚಾಂಪಿಯನ್ಸ್ ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕುಸ್ತಿಪಟು ಇವರಾಗಿದ್ದಾರೆ.ಇಡೀ ದೇಶದಿಂದ ೩೫ ಜನ ಕುಸ್ತಿಪಟುಗಳು ಹೋಗಿದ್ದರೆ ಕರ್ನಾಟಕದಿಂದ ಹೋಗಿದ್ದು ಮುಧೋಳ‌ ಮಲ್ಲ ನಿಂಗಪ್ಪ ಮಾತ್ರ.ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನಗೆದ್ದು ಇಡೀ ದೇಶದ ಗೌರವ ಕಾಪಾಡಿದ್ದಾರೆ.

ಇನ್ನು ಈ ಬಗ್ಗೆ ಮಾತಾಡಿದ ನಿಂಗಪ್ಪ “ಏಷಿಯನ್ ಚಾಂಪಿಯನ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದು ಬಹಳ ಖುಷಿ ತಂದಿದೆ.ಫೈನಲ್‌ನಲ್ಲಿ ಗೆದ್ದ ತಕ್ಷಣ ಭಾರತ ಭಾವುಟ ಹಿಡಿದು ಮೈದಾನದಲ್ಲಿ ಓಡಾಡಿ ಸಂಭ್ರಮಪಟ್ಟ ಘಳಿಗೆ ಮರೆಯೋಕೆ ಆಗೋದಿಲ್ಲ.ನನ್ನ ಈ ಗೆಲುವಿಗೆ ಜೈ ಹನುಮಾನ ವ್ಯಾಯಾಮ ಶಾಲೆ ತರಭೇತಿದಾರ ಅರುಣ ಕುಮಕಾಲೆ,ಹರಿಯಾಣಾದ ಇಂಡಿಯನ್ ಕ್ಯಾಂಪ್ ನ ತರಭೇತಿ, ನಮ್ಮ ತಂದೆತಾಯಿ,ಸ್ನೇಹಿತರು,ನಾನು ಓದುತ್ತಿರುವ ಆರ್ ಎಮ್ ಜಿ ಶಾಲೆ ಸಿಬ್ಬಂದಿಯ ಪ್ರೋತ್ಸಾಹವೇ ಕಾರಣ,ಅವರ ಸಹಕಾರ, ಪ್ರೋತ್ಸಾಹದಿಂದ ನಾನು ಗೆಲ್ಲೋದಕ್ಕೆ ಕಾರಣ ಆಯಿತು” ಎಂದರು.

ಇನ್ನು ನಿಂಗಪ್ಪ ಗೆನೆಣ್ಣವರ ಗೆಲುವನ್ನು ಟ್ವೀಟ್ ಮೂಲಕ ಸಿಸಿ ಪಾಟಿಲ್ ಹಂಚಿಕೊಂಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:03 am, Thu, 23 June 22

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ