ಶಾಲೆಗೆ ಬಂದ್ರೂ 8 ತಿಂಗಳಿಂದ ಕ್ಲಾಸ್ ತೆಗೆದುಕೊಳ್ಳದ ಹೆಡ್ ಮಾಸ್ಟರ್ ಸಸ್ಪೆಂಡ್!
ಬಾಗಲಕೋಟೆ: ಮಕ್ಕಳಿಗೆ ಶಿಕ್ಷಕರೇ ಮೊದಲ ಗುರುಗಳಾಗಿರುತ್ತಾರೆ. ಏಕೆಂದ್ರೆ ಶಾಲಾ ಮಕ್ಕಳ ಮುಂದಿನ ಭವಿಷ್ಯ ಶಿಕ್ಷಕರ ಮೇಲೆಯೇ ಅವಲಂಬಿಸಿರುತ್ತೆ. ಆದ್ರೆ ಇಲ್ಲೊಬ್ಬ ಶಿಕ್ಷಕ ಸುಮಾರು 8 ತಿಂಗಳಿನಿಂದ ಒಂದೇ ಒಂದು ತರಗತಿ ತೆಗೆದುಕೊಳ್ಳದೆ ಕರ್ತವ್ಯ ಲೋಪ ಎಸಗಿ ಇದೀಗ ಅಮಾನತಾಗಿದ್ದಾರೆ. ಬೇವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ.ಹೆಬ್ಬಾಳ ಅಮಾನತುಗೊಂಡವರು. ಜೂನ್ 2019ರಿಂದ ವಿದ್ಯಾರ್ಥಿಗಳಿಗೆ ಇದುವರೆಗೂ ಒಂದೇ ಒಂದು ಪಾಠ ಮಾಡಿಲ್ಲ. ಶಾಲಾ ಮಕ್ಕಳ ಪರೀಕ್ಷೆ ಪೇಪರ್ ಸಹ ಚೆಕ್ ಮಾಡಿಲ್ಲ. ಕರ್ತವ್ಯಲೋಪ ಎಸಗಿದ […]
ಬಾಗಲಕೋಟೆ: ಮಕ್ಕಳಿಗೆ ಶಿಕ್ಷಕರೇ ಮೊದಲ ಗುರುಗಳಾಗಿರುತ್ತಾರೆ. ಏಕೆಂದ್ರೆ ಶಾಲಾ ಮಕ್ಕಳ ಮುಂದಿನ ಭವಿಷ್ಯ ಶಿಕ್ಷಕರ ಮೇಲೆಯೇ ಅವಲಂಬಿಸಿರುತ್ತೆ. ಆದ್ರೆ ಇಲ್ಲೊಬ್ಬ ಶಿಕ್ಷಕ ಸುಮಾರು 8 ತಿಂಗಳಿನಿಂದ ಒಂದೇ ಒಂದು ತರಗತಿ ತೆಗೆದುಕೊಳ್ಳದೆ ಕರ್ತವ್ಯ ಲೋಪ ಎಸಗಿ ಇದೀಗ ಅಮಾನತಾಗಿದ್ದಾರೆ.
ಬೇವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಬಿ.ಹೆಬ್ಬಾಳ ಅಮಾನತುಗೊಂಡವರು. ಜೂನ್ 2019ರಿಂದ ವಿದ್ಯಾರ್ಥಿಗಳಿಗೆ ಇದುವರೆಗೂ ಒಂದೇ ಒಂದು ಪಾಠ ಮಾಡಿಲ್ಲ. ಶಾಲಾ ಮಕ್ಕಳ ಪರೀಕ್ಷೆ ಪೇಪರ್ ಸಹ ಚೆಕ್ ಮಾಡಿಲ್ಲ. ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿ ಬಾಗಲಕೋಟೆ ಡಿಡಿಪಿಐ ಶ್ರೀಶೈಲ್ ಬಿರಾದಾರ್ ಆದೇಶಿಸಿದ್ದಾರೆ.