3 ಎಕರೆ ಜಮೀನಿಗೆ 30 ಲಕ್ಷ ರೂ ಸಾಲ ಮಾಡಿಕೊಂಡಿದ್ದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಈಶ್ವರಪ್ಪ ಜಕ್ಕನ್ನವರ (55) ಮೃತ ರೈತ.

3 ಎಕರೆ ಜಮೀನಿಗೆ 30 ಲಕ್ಷ ರೂ ಸಾಲ ಮಾಡಿಕೊಂಡಿದ್ದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ
ಸಾಂದರ್ಭಿಕ ಚಿತ್ರ

ಬಾಗಲಕೋಟೆ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಈಶ್ವರಪ್ಪ ಜಕ್ಕನ್ನವರ (55) ಮೃತ ರೈತ. ಈಶ್ವರಪ್ಪ ಜಕ್ಕನ್ನವರ ಬ್ಯಾಂಕ್ ಆಫ್​ ಇಂಡಿಯಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಮೂಲಕ ಒಟ್ಟು 30 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ರೈತ ಈಶ್ವರಪ್ಪ ಜಕ್ಕನ್ನವರ 3 ಎಕರೆ 27 ಗುಂಟೆ ಭೂಮಿ ಹೊಂದಿದ್ದ. ಹೊಲದಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆ ಲಾಭ ತಂದಿರಲಿಲ್ಲ. ಹಾಗಾಗಿ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪತ್ನಿ ಮಕ್ಕಳ ಜೊತೆ ಮದುವೆಯಿಂದ ಬರುವಾಗ ಪಲ್ಟಿಯಾಗಿದ್ದ ಆಟೋಗೆ ಬೈಕ್ ಡಿಕ್ಕಿ, ಸವಾರ ಸಾವು: ಮೈಸೂರು -ಪಲ್ಟಿಯಾಗಿದ್ದ ಆಪೇ ಆಟೋಗೆ ಬೈಕ್ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವಿಗೀಡಾಗದ್ದಾನೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹೊಸ ಅಗ್ರಹಾರದ ಬಳಿ ಅಪಘಾತ ನಡೆದಿದೆ. ಬೆಕ್ಯಾ ಗ್ರಾಮದ ನಿವಾಸಿ ಸತೀಶ್ (35) ಮೃತ ದುರ್ದೈವಿ. ಪತ್ನಿ ಮಕ್ಕಳ ಜೊತೆ ಮದುವೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಅಪಘಾತ ಸಂಭವಿಸಿದೆ. ಪತ್ನಿ ಪಾರ್ವತಿ ಮತ್ತು ಮಗಳು ಖುಷಿ ಮಗ ಜೀವನ್‌ಗೆ ಗಂಭೀರ ಗಾಯಗಳಾಗಿವೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ

missing person

ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದಿರುತಳ ಗ್ರಾಮಕ್ಕೆ ಹೋಗಿದ್ದ ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಕಣ್ಮರೆಯಾಗಿದ್ದಾರೆ. ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ನಾಗೇಶ್ ಅವರು ಕೃಷ್ಣೇಗೌಡ ಎಂಬುವರ ಜೊತೆ ಜೀಪ್ ನಲ್ಲಿ ಹೋಗಿದ್ದರು. ಕಣ್ಮರೆಯಾಗುವ ವ್ಯಕ್ತಿಗಾಗಿ ಚಾರ್ಮಾಡಿ ಘಾಟ್ ನಲ್ಲಿ ಸ್ಥಳೀಯರಿಂದ ಹುಡುಕಾಟ ನಡೆದಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:40 am, Tue, 30 November 21

Click on your DTH Provider to Add TV9 Kannada