ನೀರಿಲ್ಲದೆ ಘಟಪ್ರಭಾ ನದಿ ಖಾಲಿ: ಸರ್ಕಾರದ ವಿರುದ್ಧ ರೈತರು ಆಕ್ರೋಶ, ಉಗ್ರ ಪ್ರತಿಭಟನೆ ಎಚ್ಚರಿಕೆ

ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ನದಿ ಖಾಲಿಯಾಗಿದೆ. ಘಟಪ್ರಭಾ ತೀರದ ರೈತರ ಕೃಷಿ ಹಾಗೂ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಈಗಾಗಲೇ ‌ಮುಧೋಳ‌ ನಗರದಲ್ಲಿ ಒಂದು ಸುತ್ತು ರೈತರು ಪ್ರತಿಭಟನೆ ಮಾಡಿದ್ದಾರೆ. ಘಟಪ್ರಭಾ ವ್ಯಾಪ್ತಿಯ ಕಟ್ಟ ಕಡೆ ರೈತನಿಗೂ ನೀರು ತಲುಪುವಷ್ಟು ನೀರು ಹರಿಸಬೇಕು. ನೀರು ಬಿಡದಿದ್ದರೆ ಮುಂದೆ ಪ್ರತಿಭಟನೆ ಉಗ್ರ ರೂಪ ಪಡೆಯುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ನೀರಿಲ್ಲದೆ ಘಟಪ್ರಭಾ ನದಿ ಖಾಲಿ: ಸರ್ಕಾರದ ವಿರುದ್ಧ ರೈತರು ಆಕ್ರೋಶ, ಉಗ್ರ ಪ್ರತಿಭಟನೆ ಎಚ್ಚರಿಕೆ
Edited By:

Updated on: Feb 19, 2024 | 9:54 PM

ಬಾಗಲಕೋಟೆ, ಫೆಬ್ರವರಿ 19: ಪ್ರತಿ ವರ್ಷ ಬರಗಾಲ (drought) ವಿಲ್ಲದ ಸಮಯದಲ್ಲೂ ಆ ನದಿ ಖಾಲಿಯಾಗಿದ್ದೇ ತಡ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಬರಗಾಲವಿದೆ ರೈತರ ಬದುಕು ದುಸ್ತರವಾಗಿದೆ. ಇಂತಹ ಸಮಯದಲ್ಲೂ ನದಿ ಖಾಲಿಯಾದರೂ ಹನಿ ನೀರು ಬಿಟ್ಟಿಲ್ಲ. ಇದರಿಂದ ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಇಡೀ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದೆ. ಮಳೆಯಿಲ್ಲದೆ ಎಲ್ಲ ಜಲಮೂಲಗಳು ಬತ್ತಿ, ರೈತರ ಕೃಷಿಗೆ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಘಟಪ್ರಭಾ ನದಿ (Ghataprabha River) ಖಾಲಿಯಾಗಿದ್ದು, ಘಟಪ್ರಭಾ ತೀರದ ರೈತರ ಕೃಷಿ ಹಾಗೂ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಪ್ರತಿ ವರ್ಷವು ಘಟಪ್ರಭಾ ನದಿ ಖಾಲಿಯಾದಾಗ ಹಿಡಕಲ್‌ ಜಲಾಶಯದಿಂದ ನೀರು ಬಿಡುತ್ತ ಬರಲಾಗುತ್ತಿದೆ. ಆದರೆ ಈ ಬಾರಿ ನದಿ ಖಾಲಿಯಾಗಿ ತಿಂಗಳು ಕಳೆದರೂ ನೀರು ಬಿಟ್ಟಿಲ್ಲ. ಇದರಿಂದ ಘಟಪ್ರಭಾ ತೀರದ ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ.

ಈ ಬಗ್ಗೆ ಈಗಾಗಲೇ ‌ಮುಧೋಳ‌ ನಗರದಲ್ಲಿ ಒಂದು ಸುತ್ತು ರೈತರು ಪ್ರತಿಭಟನೆ ಮಾಡಿದ್ದಾರೆ. ನಮಗೆ ಒಂದು ಟಿಎಮ್​ಸಿ‌ ನೀರು ಸಾಲುವುದಿಲ್ಲ. ಘಟಪ್ರಭಾ ವ್ಯಾಪ್ತಿಯ ಕಟ್ಟ ಕಡೆ ರೈತನಿಗೂ ನೀರು ತಲುಪುವಷ್ಟು ನೀರು ಹರಿಸಬೇಕು. ಕೂಡಲೆ ನೀರು ಬಿಡದಿದ್ದರೆ ಮುಂದೆ ಪ್ರತಿಭಟನೆ ಉಗ್ರ ರೂಪ ಪಡೆಯುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಸೃಷ್ಟಿಯಾದ ಪಕ್ಷಿಗಳ ಲೋಕ; ಇಲ್ಲಿದೆ ಅದರ ಝಲಕ್​

ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ‌ಮೂರು ನದಿಗಳು ಹರಿಯುತ್ತವೆ. ಆದರೆ ಈಗ‌ ಮಳೆಯಿಲ್ಲದೇ ಮೂರು ನದಿಗಳು ಖಾಲಿ ಖಾಲಿಯಾಗಿವೆ. ಕೇವಲ‌ ನದಿಗಳು ಅಷ್ಟೇ ಅಲ್ಲದೆ ಕೆರೆ ಕಟ್ಟೆಗಳು ಬರಿದಾಗಿವೆ. ಇಂತಹ ಅವಧಿಯಲ್ಲಿ ಘಟಪ್ರಭಾ ತೀರದ ರೈತರು ನೀರಿಗಾಗಿ ಆಗ್ರಹ ಮಾಡುತ್ತಿದ್ದಾರೆ. ಬೆಳೆಗಳಿಗೆ ಜಾನುವಾರುಗಳಿಗೆ ನೀರಿಲ್ಲದೆ ರೈತರ ಬದುಕು ಕಂಗಾಲಾಗಿದೆ.

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಹೆಚ್ಚಿನ ದರಕ್ಕೆ ಟ್ಯಾಂಕರ್ ನೀರು ಮಾರುವಂತಿಲ್ಲ: ಶಾಸಕ‌ ಎಸ್​ಟಿ‌ ಸೋಮಶೇಖರ್​ ಎಚ್ಚರಿಕೆ

ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ದೋರಣೆ ತಾಳುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಮಾತಾಡಿದ ಜಿಪಂ ಸಿಇಒ, ಈಗಾಗಲೇ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಬಗ್ಗೆ ಡಿಸಿ ಅವರ ನೇತ್ರತ್ವದಲ್ಲಿ ಸಭೆ ಮಾಡಲಾಗಿದೆ. ನೀರು ಬಿಡುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಜೊತೆಗೆ ನಮಗೆ ಹೆಚ್ಚಿನ ಪ್ರಮಾಣದ ನೀರು ಬೇಕು. ಕೇವಲ ಒಂದು ಟಿಎಮ್​ಸಿ ಬಿಟ್ಟರೆ ಅದು ಕೇವಲ‌‌ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತ ಆಗುತ್ತದೆ. ಬಾಗಲಕೋಟೆ ಜಿಲ್ಲೆಯ ಘಟಪ್ರಭಾ ‌ಕಡೆ ಹಳ್ಳಿ ರೈತನಿಗೂ ತಲುಪುವಷ್ಟು ನೀರು ಬಿಡಲು ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ನೀರು ಬಿಡುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:43 pm, Mon, 19 February 24

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us