AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಸ್ಥಾನದ ಆಕಾಂಕ್ಷಿ ಹೌದು, ಹೈಕಮಾಂಡ್ ನಿರ್ಧಾರಕ್ಕೂ ಬದ್ಧ ಎಂದ ಶಾಸಕ ದೊಡ್ಡನಗೌಡ ಪಾಟೀಲ್

ನಾನು ಸಚಿವ ಸಚಿವ ಸ್ಥಾನದ ಆಕಾಂಕ್ಷಿ ಹೌದು, ಆದರೆ ಹೈಕಮಾಂಡ್ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿ ಹೌದು, ಹೈಕಮಾಂಡ್ ನಿರ್ಧಾರಕ್ಕೂ ಬದ್ಧ ಎಂದ ಶಾಸಕ ದೊಡ್ಡನಗೌಡ ಪಾಟೀಲ್
Doddanagouda Patil
TV9 Web
| Updated By: ನಯನಾ ರಾಜೀವ್|

Updated on: Jul 26, 2022 | 10:41 AM

Share

ನಾನು ಸಚಿವ ಸಚಿವ ಸ್ಥಾನದ ಆಕಾಂಕ್ಷಿ ಹೌದು, ಆದರೆ ಹೈಕಮಾಂಡ್ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆ ನೀಡಿದ್ದಾರೆ. ಇಳಕಲ್​ನಲ್ಲಿ ಮಾತನಾಡಿರುವ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂಬುದು ಪಕ್ಷದವರಿಗೂ ಗೊತ್ತಿದೆ, ಅವಕಾಶ ಕೊಟ್ಟರೆ ಸೇವೆ ಮಾಡುವೆ ಇಲ್ಲವಾದಲ್ಲಿ ಶಾಸಕನಾಗಿಯೇ ಕ್ಷೇತ್ರದಲ್ಲಿ ಸೇವೆ ಮುಂದುವರೆಸುತ್ತೇನೆ ಎಂದರು.

ಸಚಿವ ಸ್ಥಾನಕ್ಕೆ ಬಲವಾದ ಒತ್ತಡ ಹೇರುವುದಿಲ್ಲ, ಹೈಕಮಾಂಡ್​ಗೆ ತಲುಪಿಸಬೇಕು, ಅದನ್ನು ನಾನು ಮಾಡಿದ್ದೇನೆ, ಶಾಸಕನಾಗಿ ನನಗೆ ಕ್ಷೇತ್ರದ ಅಭಿವೃದ್ದಿಯ ಜವಾಬ್ದಾರಿ ಇದೆ, ಅದನ್ನು ಮಾಡುತ್ತಿದ್ದೇನೆ ಎಂದರು.

ಚುನಾವಣೆ ರಾಜಕೀಯದಿಂದ ಬಿಎಸ್ ವೈ ನಿವೃತ್ತಿ ವಿಚಾರದ ಕುರಿತು ಮಾತನಾಡಿ, ಯಡಿಯೂರಪ್ಪ ಬಿಟ್ಟು ಬಿಜೆಪಿ ಇಲ್ಲ, ಬಿಜೆಪಿ ಬಿಟ್ಟು ಯಡಿಯೂರಪ್ಪ ಇಲ್ಲ, ಯಡಿಯೂರಪ್ಪ ನೇತೃತ್ವ, ಮಾರ್ಗದರ್ಶನದಲ್ಲೇ 2023 ಮತ್ತು 2024 ರ ಸಾರ್ವತ್ರಿಕ ಚುನಾವಣೆ ಎದುರಿಸುತ್ತೇವೆ ಎದುರಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ನಿವೃತ್ತಿ ಘೋಷಣೆಯಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ, ಶಿಕಾರಿಪುರಕ್ಕೆ ಅವರ ಪುತ್ರ ವಿಜಯೇಂದ್ರ ಅವರನ್ನು ಘೋಷಣೆ ಮಾಡಿದ್ದಾರೆ. ಯಾವ ಮನೆತನವೂ ಕೂಡ ರಾಜಕೀಯದಿಂದ ನಿವೃತ್ತಿ ಆಗಲ್ಲ, ಬಿಎಸ್ ವೈಗೆ ವಯಸ್ಸಾಗಿದ್ದರಿಂದ ಚುನಾವಣೆಯಿಂದ ನಿವೃತ್ತಿ ಎಂದಿದ್ದಾರೆ ಅಷ್ಟೇ ಎಂದು ನುಡಿದರು.

ಶಿಕಾರಿಪುರ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ವಿಜಯೇಂದ್ರ ಅವರನ್ನೇ ಘೋಷಿಸಿದ್ದಾರೆ, ಇದು ನಿನ್ನೆ ಮೊನ್ನೆ ಆಗಿದ್ದಲ್ಲ. ಒಂದು ತಿಂಗಳ ಹಿಂದೆಯೇ ಆಗಿತ್ತು ಎಂದು ತಿಳಿಸಿದರು.

ಹುನಗುಂದ ಕ್ಷೇತ್ರದಲ್ಲಿ ತಮ್ಮ ಪುತ್ರ ಕಣಕ್ಕಿಳಿಯುತ್ತಾರೆ ಎನ್ನುವ ವಿಚಾರದ ಕುರಿತು ಮಾತನಾಡಿ, ನನಗೆ ವಯಸ್ಸಾಗಿಲ್ವಲ್ಲ? ನನಗೆ 75 ವರ್ಷ ಆಗಿದ್ರೆ ಘೋಷಣೆ ಮಾಡುತ್ತಿದ್ದೆ ಎಂದು ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.

ನನ್ನ ಮಗನೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಕೇಳಿಲ್ಲ, ಸುಮ್ಮನೆ ಗೊಂದಲ ಉಂಟು ಮಾಡಲು, ದಾರಿ ತಪ್ಪಿಸಲು ಇದೆಲ್ಲವನ್ನು ಯಾರೋ ಹೇಳಿರುತ್ತಾರೆ. ಇಂಥಹದೆಲ್ಲ ರಾಜಕಾರಣದಲ್ಲಿ ಇರುತ್ತೆ, ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಯಡಿಯೂರಪ್ಪ ನಿವೃತ್ತಿ ಬಗ್ಗೆ ಡಿಕೆಶಿ, ಸಿದ್ದರಾಮಯ್ಯ ಅನುಕಂಪದ ಮಾತು ವಿಚಾರ ಕುರಿತು ಮಾತನಾಡಿ, ಅವರು ಈಗ ಅನುಕಂಪದ ಮಾತು ಹೇಳುತ್ತಾರೆ, ಯಡಿಯೂರಪ್ಪ ಅವರಿಗೆ ಈ ಮೊದಲು ಏನೇನು ಮಾತಾಡಿದ್ದಾರೆ ಎಂಬುದೂ ತಿಳಿದಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಏನು ಮಾತಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ ಎಂದರು.