AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂಡಲಸಂಗಮದಲ್ಲಿ ಮತ್ತೆ ಮೇಳೈಸಿದ ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸಹಸ್ರಾರು ಭಕ್ತರು   

ಇಂದು ಎಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಭಕ್ತರು ಸಂಕ್ರಾಂತಿ ಹಬ್ಬದ ಪುಣ್ಯಸ್ನಾನ ಮಾಡಿದರು.

ಕೂಡಲಸಂಗಮದಲ್ಲಿ ಮತ್ತೆ ಮೇಳೈಸಿದ ಮಕರ ಸಂಕ್ರಾಂತಿ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸಹಸ್ರಾರು ಭಕ್ತರು     
ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಭಕ್ತರ ಸಂಕ್ರಾಂತಿ ಪುಣ್ಯಸ್ನಾನ
TV9 Web
| Edited By: |

Updated on:Jan 15, 2023 | 4:47 PM

Share

ಬಾಗಲಕೋಟೆ: ಮಕರ ಸಂಕ್ರಾಂತಿ (Makar Sankranti) ಸೂರ್ಯ ತನ್ನ ಪಥವನ್ನು ಬದಲಿಸುವ ಸುಮಧುರ ಕಾಲ. ಜನರ ಬದುಕಿಗೆ ಹೊಸ ದಿಕ್ಕು ದೆಸೆ ನೀಡುವ ಸಂಕ್ರಮಣ ಸಡಗರಗೊಂಡಿದೆ. ಇಂತಹ ದಿವ್ಯ ಸಂಕ್ರಮಣ ಸಂಭ್ರಮಕ್ಕೆ ತ್ರಿವೇಣಿ ಸಂಗಮ ಸಾಕ್ಷಿಯಾಗಿದೆ, ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಸಂಕ್ರಾಂತಿ ಪುಣ್ಯಸ್ನಾನ ಮಾಡಿ ದೇವರ ದರ್ಶನ‌ ಪಡೆದು ಪುನೀತರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮ ಬಸವಣ್ಣನವರು ಐಕ್ಯವಾದ ಸ್ಥಳ, ಜೊತೆಗೆ ಸಂಗಮನಾಥ ದೇವಾಲಯ ಇರುವ ಪುಣ್ಯ ಭೂಮಿ ಎಂದೇ ಪ್ರಸಿದ್ಧ. 

ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರೆ ಪಾಪ ಹೋಗುತ್ತದೆಂಬ ನಂಬಿಕೆ

ಇಂತಹ ಪವಿತ್ರ ಸ್ಥಳದಲ್ಲಿ ಇಂದು ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿ ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಭಕ್ತರು ಸಂಕ್ರಾಂತಿ ಹಬ್ಬದ ಪುಣ್ಯಸ್ನಾನ ಮಾಡಿದರು. ಮಹಿಳೆಯರು ಸೇರಿದಂತೆ ರಾಜ್ಯ, ಪರರಾಜ್ಯದಿಂದ ಭಕ್ತರು ಚಳಿಯನ್ನು ಲೆಕ್ಕಿಸದೆ ನದಿಯಲ್ಲಿ ಮಿಂದೆದ್ದರು. ಬೆಳಿಗ್ಗೆ ಐದು ಗಂಟೆಯಿಂದಲೇ ಪುಣ್ಯಸ್ನಾನ ಮಾಡಿ ಬಸವಣ್ಣನ ಐಕ್ಯಮಂಟಪ, ಸಂಗಮನಾಥನ ದರ್ಶನ ಪಡೆದರು. ಈ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರೆ ಪಾಪ  ಹೋಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದ್ದು, ಕುಟುಂಬ ಸಮೇತ ಬಂದು ಪುಣ್ಯಸ್ನಾನ ಮಾಡಿ ಐಕ್ಯಮಂಟಪ, ಸಂಗಮನಾಥನ ದರ್ಶನ ಮಾಡಿ ಸಂಭ್ರಮಿಸಿದರು.

ಇದನ್ನೂ ಓದಿ: ಬಾಗಲಕೋಟೆ: ಕಲರ್ ಫುಲ್ ವಿದ್ಯಾರ್ಥಿನಿಯರು ಕಾಲೇಜಿನ ಅಂದವನ್ನೇ ಹೆಚ್ಚಿಸಿದರು, ಸಂದರ್ಭ ಏನು?

ಮೂರು ನದಿಗಳು ಸಂಗಮವಾಗುವ ಕ್ಷೇತ್ರವೇ ಕೂಡಲಸಂಗಮ

ಮೂರು ನದಿಗಳು ಸಂಗಮವಾಗುವ ಕ್ಷೇತ್ರ ಕೂಡಲಸಂಗಮ ಆಗಿರುವುದರಿಂದ ಈ ಸ್ಥಾನ ವಿಶೇಷವಾಗಿದೆ. ಜೊತೆಗೆ ಬಸವಣ್ಣನ ಐಕ್ಯಮಂಟಪ, ಸಂಗಮನಾಥ ದೇಗುಲ ಇರುವುದರಿಂದ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಇದರಿಂದ ಸಂಕ್ರಾಂತಿ ದಿನ ಈ ಪುಣ್ಯ ಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಬಂದ ಭಕ್ತರು ನದಿ ಮಧ್ಯೆದೊಳಗಿನ ಬಸವಣ್ಣನವರ ಐಕ್ಯಮಂಟಪ ದರ್ಶನ ಪಡೆದುಕೊಳ್ಳುತ್ತಾರೆ. ಇನ್ನೊಂದು ಕಡೆ ಸಂಗಮನಾಥ ದೇಗುಲದಲ್ಲಿ ಪೂಜೆ ಪುನಸ್ಕಾರ ದರ್ಶನ ಮಾಡಲಾಯಿತು. ಸಾಲು ಸಾಲಾಗಿ ಬಂದ ಭಕ್ತರು ಸಂಗಮನಾಥ ಹಾಗೂ ಐಕ್ಯಮಂಟಪ ದರ್ಶನ ಮಾಡಿದರು.

ಕೂಡಲಸಂಗಮದಲ್ಲಿ ಮತ್ತೆ ಮೇಳೈಸಿದ ಸಂಕ್ರಮಣ ಹಬ್ಬ  

ಇನ್ನು ಕೆಲ ಭಕ್ತರು ಪುಣ್ಯಸ್ನಾನ ಮಾಡಿ ನದಿ ತೀರದಲ್ಲಿ ಐಕ್ಯಮಂಟಪ ಆವರಣದಲ್ಲಿ ಕುಳಿತು ಲಿಂಗಪೂಜೆ ಮಾಡಿದರು‌. ಸಂಗಮನಾಥ ದೇವರನ್ನು ಆರಾಧನೆ ಮಾಡಿದವರು ಬಸವಣ್ಣನವರು. ಬಸವಣ್ಣನರ ವಚನಗಳ ಅಂಕಿತನಾಮವೇ ಕೂಡಲಸಂಗಮದೇವ. ಇದರಿಂದ ಇಲ್ಲಿ ಬಂದ ಭಕ್ತರು ನೂರಾರು ವರ್ಷಗಳಿಂದ ಪುಣ್ಯಸ್ನಾನ ಮಾಡಿ ಐಕ್ಯಮಂಟಪ ಸಂಗಮನಾಥನ ದರ್ಶನ ಮಾಡಿ ಹೋಗೋದು ನಡೆದುಕೊಂಡು ಬಂದ ‌ಸಂಪ್ರದಾಯ. ಕಳೆದ ಎರಡು ವರ್ಷ ಕೊವಿಡ್​ನಿಂದ ಕಳೆಗುಂದಿದ್ದ ಸಂಕ್ರಾಂತಿ ಸಡಗರ ಇಂದು ಪುನಃ ಸಂಗಮದಲ್ಲಿ ಮೇಳೈಸಿದ್ದು, ಭಕ್ತರು ಪುಣ್ಯಸ್ನಾನ ಮಾಡಿ ದೇವರ ದರುಶನ ಪಡೆದು ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದರು.

ವರದಿ: ರವಿ ಮೂಕಿ, ಟಿವಿ9, ಬಾಗಲಕೋಟೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:45 pm, Sun, 15 January 23

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ