ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾವೆಲ್ಲರೂ ಶೇ 100ರಷ್ಟು ಒಪ್ಪಿದ್ದೇವೆ: ಶಾಸಕ ಯತ್ನಾಳ್

ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾವೆಲ್ಲರೂ ಶೇ 100ರಷ್ಟು ಒಪ್ಪಿದ್ದೇವೆ: ಶಾಸಕ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಬಿದ್ದಾಗ ನಿಮ್ಮ ಜೊತೆ ಯಾರಿದ್ದಾರೆ ಅಂತ ಯಾರೋ ಕೇಳಿದರು. ಆಗ ವಾಜಪೇಯಿ, ಅಕೇಲಾ ಚಲೋ ಅಂದ್ರು. ಈಗ ಶಾಸಕ ಯತ್ನಾಳ್ ಏಕಲಾ ಚಲೋ ಅಂತ ಹೋಗುತ್ತೇನೆ. ರವೀಂದ್ರನಾಥ ಟಾಗೋರರ ವಿಚಾರದಂತೆ ಏಕಲಾ ಚಲೋ ಅಂದ್ರು. ಮುಂದೆ ಇಡೀ ಕರ್ನಾಟಕ ರಾಜ್ಯ ಯತ್ನಾಳ್ ಬೆನ್ನು ಹತ್ತುತ್ತೆ ಎಂದು ಅವರು ವ್ಯಾಖ್ಯಾನಿಸಿದರು.

TV9kannada Web Team

| Edited By: guruganesh bhat

Aug 01, 2021 | 10:45 PM

ಬಾಗಲಕೋಟೆ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದನ್ನು ಪಕ್ಷದ ಶಿಸ್ತಿನ ಸಿಪಾಯಿಗಳಾದ ನಾವೆಲ್ಲವೂ ಶೇಕಡಾ 100ರಷ್ಟು ಒಪ್ಪಿದ್ದೇವೆ ಎಂದು ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಸ್ಪಷ್ಟಪಡಿಸಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಎಲ್ಲೂ ಹೇಳಿಲ್ಲ. ಅರ್ಹತೆ ಆಧಾರದಲ್ಲಿ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ. ಎ.ಬಿ.ವಾಜಪೇಯಿ ಇದ್ದಾಗ ನಾನು ವಿಜಯಪುರದಿಂದ ಗೆದ್ದಿದ್ದೆ. ಅನಂತಕುಮಾರ (Ananth Kumar) ಅವರ ಆಶೀರ್ವಾದಿಂದ ಕೇಂದ್ರದಲ್ಲಿ ಸಚಿವನಾಗಿದ್ದೆ. ನಮ್ಮ ಪಕ್ಷ ಈಗಲೂ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ನಿಷ್ಠಾವಂತರ ಕಾರ್ಯಕರ್ತನಾಗಿ ಇರುವೆ. ನನಗೆ ಸಚಿವ ಸ್ಥಾನ ಸಿಗುತ್ತೆ ಎಂದು ಹೇಳಲು ಜ್ಯೋತಿಷಿಯಲ್ಲ. ಡಿಸಿಎಂ ಸ್ಥಾನದ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಲಿದೆ. ಬಿಜೆಪಿ ಆಡಳಿತವಿರುವ ಇತರೆ ರಾಜ್ಯಗಳಲ್ಲಿ ಡಿಸಿಎಂ ಹುದ್ದೆ ಇಲ್ಲ. ಈ ಮೊದಲು ಮೂರು ಡಿಸಿಎಂ ಹುದ್ದೆ ಸೃಷ್ಟಿಸಿದ್ದರು. ಈಗ ಏನೂ ಅಂತ ಬಿಜೆಪಿ ಹೈಕಮಾಂಡ್ ಗುಟ್ಟು ಬಿಟ್ಟುಕೊಟ್ಟಿಲ್ಲ. ನಮ್ಮ ಹೈಕಮಾಂಡ್ ಬಿಗಿಯಾದ ಕ್ರಮಕೈಗೊಳ್ಳಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಪಂಚಮಸಾಲಿ ಸಮುದಾಯದವರಿಗೆ ಸಿಎಂ ಸ್ಥಾನ ಕೊಡಬೇಕೆನ್ನುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಯ ಕುರಿತೂ ಪ್ರತಿಕ್ರಿಯಿಸಿದ ಅವರು, ಜಾತಿ ಆಧಾರದ ಮೇಲೆ ಸಿಎಂ ಸ್ಥಾನ ಕೊಡಲು ಆಗಲ್ಲ. ಬಿಜೆಪಿಯಲ್ಲಿ ಜಾತಿ ವ್ಯವಸ್ಥೆಯಿಲ್ಲ, ಮಧ್ಯದಲ್ಲಿ ಬಂದು ಸೇರಿದೆ. ನಾವು ಹಿಂದುತ್ವದ ಆಧಾರದಲ್ಲಿ ಗೆದ್ದು ಬಂದಿದ್ದೇವೆಯೇ ವಿನಃ ಜಾತಿಯಿಂದಲ್ಲ. ವಿಜಯಪುರದಲ್ಲಿ ಒಂದೂವರೆ ಲಕ್ಷ ಹಿಂದೂಗಳು ಇದ್ದಾರೆ. ಜತೆಗೆ ಒಂದು ಲಕ್ಷ ಮುಸ್ಲಿಮರು ಇದ್ದಾರೆ. ನಮಗೆ ಹಿಂದೂಗಳೇ ಮತ ಹಾಕಬೇಕು, ದೇಶ, ಧರ್ಮ ಮುಖ್ಯವೆಂಬ ಪರಿಕಲ್ಪನೆಯಲ್ಲಿ ನಾವಿದ್ದೇವೆ. ಜಾತಿಬೇಧ ಮಾಡಲಾಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಹುಚ್ಚಾಸ್ಪತ್ರೆಯಲ್ಲಿ ಚೆಕ್ ಮಾಡಿಸಬೇಕೆಂದು ಹೇಳಿರುವ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಶಾಸಕ ಯತ್ನಾಳ್ ಟಾಂಗ್ ನೀಡಿದ್ದಾರೆ. ಯಾರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕೆಂದು ಜನ ನಿರ್ಧರಿಸ್ತಾರೆ. ಸಮಾನತೆ ಬಿಟ್ಟು ಹೋಗುವವರು ಹುಚ್ಚಾಸ್ಪತ್ರೆಗೆ ಹೋಗುತ್ತಾರೆ. ಯಾರು ಯಾವ ಜಾಗದಲ್ಲಿ ಇರಬೇಕು, ಅಲ್ಲಿದ್ದರೆ ಒಳ್ಳೆಯದು. ನಾನು ರಾಜಕಾರಣಿ, ರಾಜಕಾರಣಿಯಾಗಿ ಕೆಲಸ ಮಾಡಬೇಕು. ಧರ್ಮಪೀಠಾಧಿಕಾರಿಗಳು ಧರ್ಮದ ಕೆಲಸ ಮಾಡಬೇಕು. ಮಠಾಧೀಶರು ಕಳ್ಳರು, ಸುಳ್ಳರನ್ನು ಬೆಂಬಲಿಸಬಾರದು. ಮಠಾಧೀಶರು ಅಂದರೆ ಎಲ್ಲರಿಗೂ ಸಮಾನ ಎಂದು ಅವರು ಹರಿಹಾಯ್ದರು.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಬಿದ್ದಾಗ ನಿಮ್ಮ ಜೊತೆ ಯಾರಿದ್ದಾರೆ ಅಂತ ಯಾರೋ ಕೇಳಿದರು. ಆಗ ವಾಜಪೇಯಿ, ಅಕೇಲಾ ಚಲೋ ಅಂದ್ರು. ಈಗ ಶಾಸಕ ಯತ್ನಾಳ್ ಏಕಲಾ ಚಲೋ ಅಂತ ಹೋಗುತ್ತೇನೆ. ರವೀಂದ್ರನಾಥ ಟಾಗೋರರ ವಿಚಾರದಂತೆ ಏಕಲಾ ಚಲೋ ಅಂದ್ರು. ಮುಂದೆ ಇಡೀ ಕರ್ನಾಟಕ ರಾಜ್ಯ ಯತ್ನಾಳ್ ಬೆನ್ನು ಹತ್ತುತ್ತೆ ಎಂದು ಅವರು ವ್ಯಾಖ್ಯಾನಿಸಿದರು.

ಇದನ್ನೂ ಓದಿ: 

ಬಿ.ಎಸ್. ಯಡಿಯೂರಪ್ಪ ನನಗೆ ಸಿಎಂ ಸ್ಥಾನವನ್ನು ತಪ್ಪಿಸಿದರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್!

ಬಿ.ಎಸ್​.ಯಡಿಯೂರಪ್ಪ ಕೆಳಗಿಳಿದರು ಅದಕ್ಕೆ ಗಡ್ಡ ತೆಗೆದೆ; ಬಸನಗೌಡ ಪಾಟೀಲ್ ಯತ್ನಾಳ್

(MLA Basanagouda Patil Yatnal says We all agree with CM Basavaraj Bommai in Vijayapura)

Follow us on

Related Stories

Most Read Stories

Click on your DTH Provider to Add TV9 Kannada