ವಿದ್ಯಾಗಿರಿಯ 4 ಅಂಗಡಿಗಳಲ್ಲಿ ಕಳ್ಳತನ: ಕಳ್ಳರ ಪತ್ತೆ ಹಚ್ಚಲು ಶ್ವಾನದಳದ ನೆರವು
ಬಾಗಲಕೋಟೆ ವಿದ್ಯಾಗಿರಿಯ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ಎಸಗಿರುವ ಕಿಡಿಗೇಡಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.
ಬಾಗಲಕೋಟೆ: ವಿದ್ಯಾಗಿರಿಯಲ್ಲಿ ನಾಲ್ಕು ಅಂಗಡಿಗಳಲ್ಲಿ ನಿನ್ನೆ (ಡಿ. 23) ತಡರಾತ್ರಿ ಕಿಡಿಗೇಡಿಗಳು ಕಳ್ಳತನ ಎಸಗಿದ್ದಾರೆ. ವಿದ್ಯಾಗಿರಿಯ ಸೂಪರ್ ಮಾರ್ಕೆಟ್, 2 ಬಟ್ಟೆ ಅಂಗಡಿ ಹಾಗೂ ಮೆಡಿಕಲ್ ಶಾಪ್ನಲ್ಲಿ ಕಳ್ಳತನವಾಗಿರುವುದಾಗಿ ಮೂಲಗಳು ತಿಳಿಸಿವೆ.
ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದ ಸಹಾಯದಿಂದ ಕಳ್ಳರ ಪತ್ತೆ ಹಚ್ಚುವಿಕೆ ಪ್ರಯತ್ನಗಳು ನಡೆಯುತ್ತಿವೆ.
ಕತ್ತಲಲ್ಲಿ ಶಾಪಿಂಗ್ ಮಾಲ್‌ಗಳಿಗೆ ನುಗ್ಗಿ ಕಳ್ಳತನ ಮಾಡ್ತಿದ್ದ ಕಳ್ಳರ ಬಂಧನ
Published On - 1:03 pm, Thu, 24 December 20