ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು

ಬಾಗಲಕೋಟೆಯಲ್ಲಿ ಇಂದು ರಿಯಲ್ ಸ್ಪೋರ್ಟ್ಸ್, ಸೆಲ್ಪ ಗವರ್ನಮೆಂಟ್, ಸಫಾಯಿ ಕರ್ಮಚಾರಿ ಸಂಸ್ಥೆ ವತಿಯಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು. ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಇದರಲ್ಲಿ ಭಾಗಿಯಾಗಿದ್ದರು. ಅದರಲ್ಲೂ ಇಳಕಲ್ ಸೀರೆ ಧರಿಸಿಯೇ ಗೃಹಿಣಿಯರು ಮ್ಯಾರಥಾನ್​ನಲ್ಲಿ ಓಡಿದ್ದು ವಿಶೇಷವಾಗಿತ್ತು. ರಜೆ ದಿನ ನಡೆದ ಮ್ಯಾರಥಾನ್​ ಎಲ್ಲರಿಗೂ ವಿಭಿನ್ನ ಅನುಭವ ನೀಡಿದೆ.

ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು
ವರ್ಲ್ಡ್ ರೆಕಾರ್ಡ್​ಗಾಗಿ ಮ್ಯಾರಥಾನ್ ಓಟ: ಇಳಕಲ್ ಸೀರೆಯಲ್ಲೇ ಓಡಿದ ಮಹಿಳೆಯರು
Edited By:

Updated on: Jun 16, 2024 | 10:39 PM

ಬಾಗಲಕೋಟೆ,  ಜೂನ್​ 16: ಇಂದು‌ ರವಿವಾರ ರಜೆ ದಿನ. ನಗರದಲ್ಲಿ ಜನ ಪಾರ್ಕ್, ಟ್ರಿಪ್ ಅಂತ ಹೋಗಲಿಲ್ಲ. ಬದಲಿಗೆ ಎಲ್ಲರೂ ಕಾಲಿಗೆ ಕೆಲಸ ನೀಡಿದ್ದರು. ಏರೋಬಿಕ್ಸ್​ಗೆ ಹೆಜ್ಜೆ ಹಾಕಿ, ಕಿಮೀ ಗಟ್ಟಲೆ ಓಡಿದರು. ಅದರಲ್ಲೂ ಇಳಕಲ್ ಸೀರೆಯುಟ್ಟ (Ilkal sarees) ನೀರೆಯರು ಓಡುವುದರೊಂದಿಗೆ ಕುಣಿದು ಕುಪ್ಪಳಿಸಿ ಎಲ್ಲರ ಗಮನ ಸೆಳೆದರು. ಅಷ್ಟಕ್ಕೂ ಇದಕ್ಕೆ ಕಾರಣ ಏನು ಅಂದರೆ ಮ್ಯಾರಥಾನ್ ಓಟ (Marathon). ನಗರದಲ್ಲಿ ರಿಯಲ್ ಸ್ಪೋರ್ಟ್ಸ್, ಸೆಲ್ಪ ಗವರ್ನಮೆಂಟ್, ಸಫಾಯಿ ಕರ್ಮಚಾರಿ ಸಂಸ್ಥೆ ವತಿಯಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು.

ಸಾವಿರಾರು ಜನರಿಂದ ಮ್ಯಾರಥಾನ್: ವಿಶ್ವದಾಖಲೆ ಮಾಡುವ ಗುರಿ

ವಿಶ್ವದಾಖಲೆ ಮಾಡುವ ಉದ್ದೇಶದಿಂದ ಸಾವಿರಾರು ಜನರಿಂದ ಮ್ಯಾರಥಾನ್ ​ನಡೆಸಲಾಯಿತು. ಚಿಕ್ಕಮಕ್ಕಳು, ಯುವಕ-ಯುವತಿಯರು ಸೇರಿದಂತೆ ಎಲ್ಲ ವಯೋಮಾನದವರು ಇದರಲ್ಲಿ ಭಾಗಿಯಾಗಿದ್ದರು. ಸರಕಾರಿ, ಖಾಸಗಿ ನೌಕರರು ವೈದ್ಯರು, ವಿದ್ಯಾರ್ಥಿಗಳು, ಗೃಹಿಣಿಯರು‌ ಕಿಮೀ ಗಟ್ಟಲೆ ಓಡಿದರು. ರಷ್ಯಾದ ಮ್ಯಾರಥಾನ್ ಓಟಗಾರ್ತಿ ಅಲೆಕ್ಷಾಂಡ್ರಾ ಕೂಡ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಚೌಕಾಸಿ ಮಾಡಿ ಖರೀದಿಗೆ ಮುಂದಾದ ಗ್ರಾಹಕರು

ಬಾಗಲಕೋಟೆ ಡಿಸಿ ಕೆಎಮ್ ಜಾನಕಿ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ಎಸ್ ಪಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ ಕೂಡ ಮ್ಯಾರಥಾನ್​ನಲ್ಲಿ ಓಡಿ ಗಮನ ಸೆಳೆದರು. ಇದಕ್ಕೂ‌ ಮುನ್ನ ಬೋವಿ ಪೀಠದ ಮೈದಾನದಲ್ಲಿ ಏರೋಬಿಕ್ಸ್ ನಡೆಯಿತು. ಸಂಗೀತದೊಂದಿಗೆ ಗೃಹಿಣಿಯರು ಇಳಕಲ್ ಸೀರೆಯಲ್ಲೇ ಕುಣಿದು ಸಂತಸ ಪಟ್ಟರು. ನಂತರ ಇಳಕಲ್ ಸೀರೆ ಧರಿಸಿಯೇ ಮ್ಯಾರಥಾನ್​ನಲ್ಲಿ ಓಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ‌‌ಗಾಗಿ 13 ಕಿಮೀ ದೀಡ ನಮಸ್ಕಾರ ಹಾಕಿದ ಅಭಿಮಾನಿ

ಮೂರು ಕಿಮೀ, ಐದು ಕಿಮೀ, 10 ಕಿಮೀ ನಂತೆ ಮ್ಯಾರಥಾನ್​ ನಡೆಸಲಾಯಿತು. ರಷ್ಯಾ ಮ್ಯಾರಥಾನ್​ ಪಟು ಅಲೆಕ್ಷಾಂಡ್ರಾ ಇಳಕಲ್ ಸೀರೆಯುಟ್ಟು ಮಹಿಳೆಯರ ಜೊತೆ ಓಡಿದರು. 1500 ಜನ ಇಳಕಲ್ ಸೀರೆಯುಟ್ಟ ಮಹಿಳೆಯರು, ಇತರೆ ಜನರು ಸೇರಿ ನಾಲ್ಕು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಕೇವಲ ವಿಶ್ವದಾಖಲೆ ಅಷ್ಟೇ ಅಲ್ಲದೆ ಇಳಕಲ್ ಸೀರೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶ ಇದರಲ್ಲಿತ್ತು. ಇಳಕಲ್ ಸೀರೆಯಲ್ಲಿ ಓಡೋದು ವಿಭಿನ್ನ ಅನುಭವ. ಇದರಲ್ಲಿ ಭಾಗಿಯಾಗಿದ್ದು ಬಹಳ ಸಂತಸ ತಂದಿದೆ ಎಂದು ಮಹಿಳೆಯರು ಸಂತಸ ವ್ಯಕ್ತಪಡಿಸಿದರು. ರಜೆ ದಿನ ನಡೆದ ಮ್ಯಾರಥಾನ್​ ಎಲ್ಲರಿಗೂ ವಿಭಿನ್ನ ಅನುಭವ ನೀಡಿದೆ. ಸಾವಿರಾರು ಜನರು ಭಾಗಿಯಾಗಿ ಖುಷಿ ಪಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us