ಸಿಲಿಂಡರ್ ಸ್ಪೋಟಕ್ಕೆ ಹೊತ್ತಿ ಉರಿದ ಕಿರಾಣಿ ಅಂಗಡಿ; ಬಳ್ಳಾರಿಯಲ್ಲಿ ಮಾವ, ಸೊಸೆ ಸಜೀವ ದಹನ
ಭೂಮಿಕಾ ಎನ್ನುವ ಬಾಲಕಿ ಕೃಷ್ಣಪ್ಪನ ಅಕ್ಕನ ಮಗಳಾಗಿದ್ದು, ಮಾವ ಸೊಸೆ ಇಬ್ಬರು ಸಜೀವ ದಹನವಾಗಿರುವುದನ್ನು ನೋಡಿ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಗ್ಯಾಸ್ ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಗ್ಯಾಸ್ ಸ್ಪೋಟಗೊಂಡಿದ್ದು, ಅಂಗಡಿ ಬೆಂಕಿಯಿಂದ ಹೊತ್ತಿ ಉರಿದಿದೆ.
ವಿಜಯನಗರ: ಕಿರಾಣಿ ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಜೀವ ದಹನವಾಗಿರುವ ಘಟನೆ ಶುಕ್ರವಾರ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಕಿರಾಣಿ ಅಂಗಡಿಯೊಂದರಲ್ಲಿ ನಡೆದಿದೆ. ಗ್ಯಾಸ್ ಸಿಲೆಂಡರ್ ಸಿಡಿದು ತಾಯಕನಹಳ್ಳಿ ಗ್ರಾಮದ ಕೃಷ್ಣಪ್ಪ (28) ಹಾಗೂ ಭೂಮಿಕಾ (11) ಸ್ಥಳದಲ್ಲಿಯೇ ಸಜೀವ ದಹನವಾಗಿದ್ದಾರೆ. ಭೂಮಿಕಾ ಎನ್ನುವ ಬಾಲಕಿ ಕೃಷ್ಣಪ್ಪನ ಅಕ್ಕನ ಮಗಳಾಗಿದ್ದು, ಮಾವ ಸೊಸೆ ಇಬ್ಬರು ಸಜೀವ ದಹನವಾಗಿರುವುದನ್ನು ನೋಡಿ ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಗ್ಯಾಸ್ ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಗ್ಯಾಸ್ ಸ್ಪೋಟಗೊಂಡಿದ್ದು, ಅಂಗಡಿ ಬೆಂಕಿಯಿಂದ ಹೊತ್ತಿಕೊಂಡು ಉರಿದಿದೆ. ಏಕಾಏಕಿ ಬೆಂಕಿ ಮುಗಿಲೆತ್ತರಕ್ಕೆ ಉರಿದಿದ್ದರಿಂದ ಶೆಡ್ನಿಂದ ಹೊರಬರಲಾಗದೇ ಮಾವ ಸೊಸೆ ಇಬ್ಬರು ಸಾವನ್ನಪ್ಪಿದ್ದಾರೆ.
ಸಿಲೆಂಡರ್ಗೆ ಆಕಸ್ಮಿಕ ಬೆಂಕಿ ತಗುಲಿ ಬ್ಲಾಸ್ಟ್ ಆದಾಗ ಸೊಸೆ ಭೂಮಿಕಾ ಅಂಗಡಿಯೊಳಗೆ ಇದ್ದಳು. ಮಾವ ಕೃಷ್ಣಪ್ಪ ಅಂಗಡಿಯ ಹೊರಗಡೆ ಇದ್ದರು. ಕೃಷ್ಣಪ್ಪ ತನ್ನ ಜೀವವನ್ನು ಲೆಕ್ಕಿಸದೇ ಸೊಸೆಯನ್ನು ಉಳಿಸಲು ಅಂಗಡಿಯೊಳಕ್ಕೆ ನುಗ್ಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದ ಹೊರಬರಲಾಗದೇ ಅವರೂ ಸೊಸೆಯ ಜೊತೆಗೆ ಬೆಂಕಿಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಅಕ್ಕಪಕ್ಕದ ಜನತೆ ನೀರು ತಂದು ಬೆಂಕಿ ಆರಿಸಲು ಹೋದರೂ ಪ್ರಯೋಜನವಾಗಿಲ್ಲ. ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಭಾಗಕ್ಕೆ ಅಗ್ನಿಶಾಮಕ ಠಾಣೆ ಇಲ್ಲದಿರುವುದ್ದರಿಂದ 50 ಕಿ.ಮೀ.ದೂರದ ಕೂಡ್ಲಿಗಿಯಿಂದ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಬೇಕಾಗಿದೆ. ಅಷ್ಟೊತ್ತಿಗಾಗಲೇ ಜೀವಹಾನಿ, ಆಸ್ತಿಹಾನಿಯಾಗಿರುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಲಾವಣ್ಯ ಸೇರಿದಂತೆ ಖಾನಹೊಸಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ
(Ballari Cylinder Blast 2 dead as fire attacks on departmental store in Vijayanagar )