ನವಜಾತ ಶಿಶು ಕಿಡ್ನಾಪ್ ಆರೋಪ; ಹಾಲಸ್ವಾಮಿ ಮಠದ ಹಾಲಸ್ವಾಮೀಜಿ ಸೇರಿ ಮೂವರ ವಿರುದ್ಧ ಎಫ್ಐಆರ್
ಆಶ್ರಯ ನೀಡುವ ಭರವಸೆ ನೀಡಿ ಹಾಲಸ್ವಾಮಿ ಮಠಕ್ಕೆ ಕರೆತಂದಿದ್ದಾರೆ. ಕೆಲಕಾಲ ಮಠದಲ್ಲೇ ಆಶ್ರಯ ನೀಡಿದ್ದರು. ಹೆರಿಗೆಗಾಗಿ ಹರಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 31 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು ಜನವರಿ 3 ರಂದು ಮಗು ತೀರಿಕೊಂಡಿದೆ ಎಂದು ಹೇಳಿ ವಸಂತಾ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದರು.
ವಿಜಯನಗರ: ಮಗು ಸಾವನ್ನಪ್ಪಿದೆ ಎಂದು ಬಾಣಂತಿಗೆ ಸುಳ್ಳು ಹೇಳಿ ನವಜಾತು ಶಿಶುವನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಸ್ವಾಮೀಜಿ ಸೇರಿದಂತೆ ಮೂವರ ವಿರುದ್ಧ ಹರಪನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಪನಹಳ್ಳಿ ತಾಲೂಕಿನ ನಿಚ್ಚವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ, ಕಂಚಿಕೇರಿಯ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ ಬೆಳಗಾವಿ ಮೂಲದ ವಸಂತಾ ಬೆಂಗಳೂರಿನಲ್ಲಿ ವಾಸವಿದ್ದು ಪಿಜಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರು ಗರ್ಭಿಣಿಯಾಗಿದ್ದರು. ಆರೋಪಿತರು ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದ ಪರಿಣಾಮ ಪರಿಚಯಸ್ಥರ ಮೂಲಕ ಮಹಿಳೆಯನ್ನು ಭೇಟಿಯಾಗಿದ್ದಾರೆ. ಅವರಿಗೆ ಆಶ್ರಯ ನೀಡುವ ಭರವಸೆ ನೀಡಿ ಹಾಲಸ್ವಾಮಿ ಮಠಕ್ಕೆ ಕರೆತಂದಿದ್ದಾರೆ. ಕೆಲಕಾಲ ಮಠದಲ್ಲೇ ಆಶ್ರಯ ನೀಡಿದ್ದರು. ಹೆರಿಗೆಗಾಗಿ ಹರಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 31 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು ಜನವರಿ 3 ರಂದು ಮಗು ತೀರಿಕೊಂಡಿದೆ ಎಂದು ಹೇಳಿ ವಸಂತಾ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದರು.
ಆ ಮಗುವನ್ನು ಆರೋಪಿತರಾದ ಗುರುರಾಜ ಹಾಗೂ ಪ್ರಿಯಾಂಕಾ ದಂಪತಿಗೆ ಹಸ್ತಾಂತರಿಸಲಾಗಿತ್ತು. ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಈಚೆಗೆ ಮಗುವಿಗೆ ಅನಾರೋಗ್ಯವಾಗಿದ್ದರಿಂದ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ, ಹೆರಿಗೆ ಮಾಡಿಸಿದ ವರದಿ ನೀಡುವಂತೆ ಕೇಳಿದ ದಂಪತಿ ಹಾರಿಕೆ ಉತ್ತರ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ದಾವಣಗೆರೆ ವೈದ್ಯರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆಗ ಆರೋಪಿತರು ಬೆಂಗಳೂರಿನಿಂದ ವಸಂತಾ ಅವರನ್ನು ಕರೆಯಿಸಿ, ಈ ಮಗು ನಿನ್ನದೆಂದು ಒಪ್ಪಿಕೊಂಡರೆ ನೀನೇ ಜೈಲಿಗೆ ಹೋಗುತ್ತೀಯಾ ಎಂದು ಬೆದರಿಸಿದ್ದಾರೆ ಎಂದು ಪಿಎಸ್‌ಐ ಸಿ . ಪ್ರಕಾಶ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲಾ ರಕ್ಷಣಾ ಘಟಕದ ಅಸಾಂಸ್ಥಿಕ ಮಕ್ಕಳ ರಕ್ಷಣಾಧಿಕಾರಿ ಎನ್.ಕೆ. ಚಂದ್ರಶೇಖರ ಅವರ ದೂರಿನ ಮೇರೆಗೆ ಹರಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ನಿಚ್ಚವನಹಳ್ಳಿ ಹಾಲಸ್ವಾಮಿ ಮಠದ ಹಾಲಸ್ವಾಮಿ, ಗುರುರಾಜ ಹಾಗೂ ಪ್ರಿಯಾಂಕಾ ದಂಪತಿ ವಿರುದ್ಧ ಅಪಹರಣ ಸೇರಿದಂತೆ ಇತರ ಪ್ರಕರಣ ದಾಖಲಿಸಲಾಗಿದ್ದು. ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಪತ್ರಕರ್ತೆ ರಾಣಾ ಅಯೂಬ್ಗೆ ನ್ಯಾಯಾಂಗ ಕಿರುಕುಳ ಆರೋಪಗಳು ಆಧಾರರಹಿತ: ವಿಶ್ವಸಂಸ್ಥೆ ಟ್ವೀಟ್ಗೆ ಭಾರತ ಪ್ರತಿಕ್ರಿಯೆ
‘ಕಲ್ಲಾದರೆ ನಾನು..’ ಹಾಡನ್ನು ಕೇಳಿ ವಿಷ್ಣುವರ್ಧನ್ ಹೇಳಿದ್ದೇನು? ಎಸ್.ನಾರಾಯಣ್ ಹಂಚಿಕೊಂಡ್ರು ಕುತೂಹಲಕರ ವಿಚಾರ