AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Book Brahma Sahityotsava 2026: ಆ.14ರಿಂದ ಬೆಂಗಳೂರಿನಲ್ಲಿ ‘ಬುಕ್ ಬ್ರಹ್ಮ ಸಾಹಿತ್ಯೋತ್ಸವ; 10 ದಿನಗಳ ಕಾಲ ಸಾಹಿತ್ಯ-ಸಾಂಸ್ಕೃತಿಕ ಸಂಭ್ರಮ!

ಬೆಂಗಳೂರಿನಲ್ಲಿ 'ಬುಕ್ ಬ್ರಹ್ಮ ಸಾಹಿತ್ಯೋತ್ಸವ – 2026' ಆಗಸ್ಟ್ 14-23ರವರೆಗೆ ಸೆಂಟ್‌ ಜಾನ್ಸ್‌ ಆವರಣದಲ್ಲಿ ನಡೆಯಲಿದೆ. 10 ದಿನಗಳ ಈ ಬೃಹತ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬವು ಸಾಹಿತ್ಯ ಗೋಷ್ಠಿಗಳು, ಸಂಗೀತ, ಯಕ್ಷಗಾನ, ಪುಸ್ತಕಲೋಕ ಮತ್ತು ಜಾನಪದ ಮಾರುಕಟ್ಟೆಗಳನ್ನು ಒಳಗೊಂಡಿದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳ 400ಕ್ಕೂ ಹೆಚ್ಚು ಲೇಖಕರು ಭಾಗವಹಿಸಲಿದ್ದು, ಪ್ರವೇಶ ಸಂಪೂರ್ಣ ಉಚಿತವಾಗಿದೆ. ಉಚಿತ ನೋಂದಣಿಗೆ ವೆಬ್‌ಸೈಟ್‌ಗೆ ಭೇಟಿ ನೀಡಿ.

Book Brahma Sahityotsava 2026: ಆ.14ರಿಂದ ಬೆಂಗಳೂರಿನಲ್ಲಿ 'ಬುಕ್ ಬ್ರಹ್ಮ ಸಾಹಿತ್ಯೋತ್ಸವ; 10 ದಿನಗಳ ಕಾಲ ಸಾಹಿತ್ಯ-ಸಾಂಸ್ಕೃತಿಕ ಸಂಭ್ರಮ!
ಬುಕ್ ಬ್ರಹ್ಮ ಸಾಹಿತ್ಯೋತ್ಸವ
ಅಕ್ಷತಾ ವರ್ಕಾಡಿ
|

Updated on: Jul 21, 2026 | 11:34 AM

Share

ಬೆಂಗಳೂರು: ಸಾಹಿತ್ಯಾಸಕ್ತರು ಕಾತುರದಿಂದ ಕಾಯುತ್ತಿದ್ದ ‘ಬುಕ್ ಬ್ರಹ್ಮ ಸಾಹಿತ್ಯೋತ್ಸವ – 2026’ (BBLF 2026) ರ ಮೂರನೇ ಆವೃತ್ತಿಗೆ ವೇದಿಕೆ ಸಜ್ಜಾಗಿದೆ. ಕೋರಮಂಗಲದ ಪ್ರಸಿದ್ಧ ಸೇಂಟ್ ಜಾನ್ಸ್ ಸಭಾಂಗಣದ ಆವರಣದಲ್ಲಿ ಆಗಸ್ಟ್ 14 ರಿಂದ 23 ರವರೆಗೆ ಒಟ್ಟು 10 ದಿನಗಳ ಕಾಲ ಈ ಬೃಹತ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಈ ಬಾರಿ ಸಾಹಿತ್ಯ ಗೋಷ್ಠಿಗಳ ಜೊತೆಗೆ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಮಾರುಕಟ್ಟೆ ಹಾಗೂ ಪುಸ್ತಕ ಲೋಕ ಮುಂತಾದ ಹಲವು ಆಕರ್ಷಣೆಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರ ಹಾಗೂ ದಿನಾಂಕಗಳು:

ಸಾಂಸ್ಕೃತಿಕ ಉತ್ಸವ, ಪುಸ್ತಕಲೋಕ ಮತ್ತು ಫ್ಲೀ ಮಾರ್ಕೆಟ್ (ಆಗಸ್ಟ್ 14 – 20) ಮೊದಲ 7 ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಿಬಿಎಲ್‌ಎಫ್-ಪುಸ್ತಕಲೋಕ ಮತ್ತು ಜಾನಪದ ಮಾರುಕಟ್ಟೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

  • ಆಗಸ್ಟ್ 14 (ಸಂಜೆ): ಶಿಲ್ಪಾ ಮಡುಬಿ ಅವರಿಂದ ಸಂಗೀತ ಕಾರ್ಯಕ್ರಮ.
  • ಆಗಸ್ಟ್ 15 (ಸಂಜೆ): ರಾಮಚಂದ್ರ ಹಡಪದ ಮತ್ತು ತಂಡದವರಿಂದ ಗಾಯನ.
  • ಆಗಸ್ಟ್ 16 (ಸಂಜೆ): ‘ಗಿಗ್ ಮ್ಯಾನ್ ಲೈವ್’ ತಂಡದ ಸುನಿಧಿ ಗಣೇಶ್ ಅವರಿಂದ ಸಂಗೀತ ರಸಸಂಜೆ.

ಪ್ರಮುಖ ಸಾಹಿತ್ಯೋತ್ಸವ ಕಾರ್ಯಕ್ರಮಗಳು (ಆಗಸ್ಟ್ 21 – 23):

ಸಾಹಿತ್ಯೋತ್ಸವದ ಪ್ರಮುಖ 3 ದಿನಗಳಲ್ಲಿ 9 ಸಮಾನಾಂತರ ವೇದಿಕೆಗಳಲ್ಲಿ ಒಟ್ಟು 207 ಗೋಷ್ಠಿಗಳು, ಚರ್ಚೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸಾಹಿತ್ಯ ಲೋಕದ 400ಕ್ಕೂ ಹೆಚ್ಚು ಲೇಖಕರು, ಚಿಂತಕರು, ಕಲಾವಿದರು, ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ಭಾಗವಹಿಸಲಿದ್ದಾರೆ.

ಆಗಸ್ಟ್ 21-23 ರ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳು:

  • ಆಗಸ್ಟ್ 21 (ಸಂಜೆ 6:30): ನಿರ್ದೇಶಕ ನಟೇಶ್ ಹೆಗಡೆ ಅವರಿಂದ ‘ವಾಘಾಚಿಪಾಣಿ’ ಚಲನಚಿತ್ರದ ಕುರಿತು ಮಾತುಕತೆ ಮತ್ತು ಪ್ರದರ್ಶನ.
  • ಆಗಸ್ಟ್ 22 (ಬೆಳಿಗ್ಗೆ 8:30): ರಫಿ ಖಾನ್ ಮತ್ತು ಶಫಿ ಖಾನ್ ಅವರಿಂದ ಸಿತಾರ್ ವಾದನ.
  • ಆಗಸ್ಟ್ 22 (ಸಂಜೆ 6:30): ವಿದುಷಿ ಟಿ.ಎಸ್. ಸತ್ಯವತಿ ಮತ್ತು ತಂಡದವರಿಂದ ಕರ್ನಾಟಕ ಸಂಗೀತ ಕಚೇರಿ.
  • ಆಗಸ್ಟ್ 23 (ಬೆಳಿಗ್ಗೆ 8:30): ಅನಿರುಧ್ ಐತಾಳ ಮತ್ತು ತಂಡದವರಿಂದ ಹಿಂದೂಸ್ತಾನಿ ಸಂಗೀತ.
  • ಆಗಸ್ಟ್ 23 (ಸಂಜೆ 6:30): ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ‘ಪಾವಂಜೆ ಮೇಳ’ದವರಿಂದ ಆಕರ್ಷಕ ಯಕ್ಷಗಾನ ಪ್ರದರ್ಶನ.

#BBLF-2026 ರ ಮುಖ್ಯ ವೈಶಿಷ್ಟ್ಯಗಳು:

10 ದಿನಗಳ ಎಲ್ಲ ಕಾರ್ಯಕ್ರಮಗಳು, ಸಾಂಸ್ಕೃತಿಕ ಸಂಜೆ ಹಾಗೂ ಗೋಷ್ಠಿಗಳಿಗೆ ಪ್ರವೇಶ ಸಂಪೂರ್ಣ ಉಚಿತ. ಮಂಟಪ, ಅಂಗಳ (ಕನ್ನಡ ಗೋಷ್ಠಿಗಳಿಗೆ), ಅಕ್ಷರ, ಮಥನ, ಮುಖಾಮುಖಿ, ನ್ಯೂಜೆನ್, ಅನಾವರಣ, ಚಿಣ್ಣರಲೋಕ ಮತ್ತು ಪೋಯೆಟ್ರಿ (ಕಾವ್ಯ ಕಣಜ) ಹೀಗೆ ಒಂಬತ್ತು ಪ್ರತ್ಯೇಕ ವೇದಿಕೆಗಳು. ಉತ್ಸವದ ಸಮಯದಲ್ಲಿ ಕಾದಂಬರಿ ಸ್ಪರ್ಧೆ, ಸ್ವಾತಂತ್ರ್ಯ ಉತ್ಸವ ಕಥಾ ಸ್ಪರ್ಧೆ, ಇಂಗ್ಲಿಷ್ ಫಿಕ್ಷನ್ ಆಫ್ ದಿ ಇಯರ್ ಮತ್ತು ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ಗಳನ್ನು ಪ್ರದಾನ ಮಾಡಲಾಗುವುದು. ನವಕರ್ನಾಟಕ, ಡಿಸಿ ಬುಕ್ಸ್, ಕಾಲಚುವಾಡು, ಛಾಯಾ, ಸಾಹಿತ್ಯ ಅಕಾಡೆಮಿ ಸೇರಿದಂತೆ ಪ್ರಮುಖ ಪ್ರಕಾಶನಗಳ ಮಳಿಗೆಗಳು ಮತ್ತು ಫ್ಲೀ ಮಾರ್ಕೆಟ್, ಆಹಾರ ಮಳಿಗೆಗಳು 10 ದಿನಗಳ ಕಾಲ ಲಭ್ಯವಿರಲಿವೆ. ಇದಲ್ಲದೇ ಹೊರಊರಿನಿಂದ ಬರುವ ಆಸಕ್ತರಿಗಾಗಿ ಸೇಂಟ್ ಜಾನ್ಸ್ ಆವರಣದ ಸುತ್ತಮುತ್ತಲಿರುವ ಹೋಟೆಲ್‌ಗಳ ವಿವರ ಹಾಗೂ ಗೈಡ್ ಅನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

ನೋಂದಣಿ ಮಾಡಿಕೊಳ್ಳುವುದು ಹೇಗೆ?

ಉತ್ಸವಕ್ಕೆ ಆಗಮಿಸುವವರು ಮುಂಚಿತವಾಗಿಯೇ www.bookbrahmalitfest.com ವೆಬ್‌ಸೈಟ್‌ಗೆ ಭೇಟಿ ನೀಡಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. (ಸ್ಥಳದಲ್ಲೂ ನೋಂದಣಿ ಕೌಂಟರ್‌ಗಳ ಮೂಲಕ ಪಾಸ್ ಪಡೆಯಲು ಅವಕಾಶವಿದೆ).

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು