AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ತೆರಿಗೆ ಕಟ್ಟದಿದ್ರೆ ಶೀಘ್ರವೇ ಎದುರಾಗಲಿದೆ ಶಾಕ್, ತೆರಿಗೆ ವಸೂಲಿಗೆ ಬಿಬಿಎಂಪಿ ಹೊಸ ಅಸ್ತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನೀವೇನಾದ್ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ. ಒಂದ್ವೇಳೆ ಟ್ಯಾಕ್ಸ್‌ ಏನಾದ್ರೂ ಕಟ್ಟದಿದ್ರೆ ಕೂಡಲೇ ಪಾವತಿಸಿಬಿಡಿ. ಇಲ್ಲದಿದ್ರೆ ಶೀಘ್ರದಲ್ಲೇ ನೀವು ಊಹಿಸಲಾಗದಂತಹ ಶಾಕ್‌ ಎದುರಿಸಬೇಕಾಗುತ್ತೆ. ಯಾಕೆಂದ್ರೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕಠಿಣ ಅಸ್ತ್ರ ಪ್ರಯೋಗಿಸೋದು ಪಕ್ಕಾ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕಾದಿದೆ ದೊಡ್ಡ ಶಾಕ್! ಯೆಸ್ ಆಸ್ತಿ ತೆರಿಗೆ ಬಿಬಿಎಂಪಿಯ ಪ್ರಮುಖ ಆದಾಯ ಮೂಲ. ಇವ್ರು ಕಟ್ಟೋ ಆಸ್ತಿ ತೆರಿಗೆಯಿಂದ್ಲೇ ಬೆಂಗಳೂರು ಉದ್ಧಾರ ಆಗೋದು. ಆದ್ರೆ ಆಸ್ತಿ ತೆರಿಗೆ ಕಟ್ಟೋದಕ್ಕೆ […]

ಆಸ್ತಿ ತೆರಿಗೆ ಕಟ್ಟದಿದ್ರೆ ಶೀಘ್ರವೇ ಎದುರಾಗಲಿದೆ ಶಾಕ್, ತೆರಿಗೆ ವಸೂಲಿಗೆ ಬಿಬಿಎಂಪಿ ಹೊಸ ಅಸ್ತ್ರ
ಸಾಧು ಶ್ರೀನಾಥ್​
|

Updated on:Jan 15, 2020 | 12:58 PM

Share

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನೀವೇನಾದ್ರೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ. ಒಂದ್ವೇಳೆ ಟ್ಯಾಕ್ಸ್‌ ಏನಾದ್ರೂ ಕಟ್ಟದಿದ್ರೆ ಕೂಡಲೇ ಪಾವತಿಸಿಬಿಡಿ. ಇಲ್ಲದಿದ್ರೆ ಶೀಘ್ರದಲ್ಲೇ ನೀವು ಊಹಿಸಲಾಗದಂತಹ ಶಾಕ್‌ ಎದುರಿಸಬೇಕಾಗುತ್ತೆ. ಯಾಕೆಂದ್ರೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ಧ ಕಠಿಣ ಅಸ್ತ್ರ ಪ್ರಯೋಗಿಸೋದು ಪಕ್ಕಾ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಕಾದಿದೆ ದೊಡ್ಡ ಶಾಕ್! ಯೆಸ್ ಆಸ್ತಿ ತೆರಿಗೆ ಬಿಬಿಎಂಪಿಯ ಪ್ರಮುಖ ಆದಾಯ ಮೂಲ. ಇವ್ರು ಕಟ್ಟೋ ಆಸ್ತಿ ತೆರಿಗೆಯಿಂದ್ಲೇ ಬೆಂಗಳೂರು ಉದ್ಧಾರ ಆಗೋದು. ಆದ್ರೆ ಆಸ್ತಿ ತೆರಿಗೆ ಕಟ್ಟೋದಕ್ಕೆ ಮಾತ್ರ ಜನ ಹಿಂದೇಟು ಹಾಕ್ತಿದ್ದಾರೆ. ಬರಬೇಕಾದ ಟ್ಯಾಕ್ಸ್ ವಸೂಲಿ ಮಾಡೋಕೆ ಪಾಲಿಕೆ ಹರಸಾಹಸಪಡ್ತಿದೆ. ಪ್ರತಿವರ್ಷ ನಿಗದಿತ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಯೋಜನೆ ರೂಪಿಸಿದ್ರೂ ನಿರೀಕ್ಷಿತ ತೆರಿಗೆ ಮಾತ್ರ ಖಜಾನೆಗೆ ಬಂದು ಸೇರ್ತಿಲ್ಲ.

ಪ್ರಸ್ತುತ ವರ್ಷದಲ್ಲಿ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸೋ ಗುರಿ ಪಾಲಿಕೆ ಹೊಂದಿತ್ತು. ಆದ್ರೆ ಸಂಗ್ರಹವಾಗಿರೋದು ಮಾತ್ರ 2400 ಕೋಟಿ. ಇದು ಪಾಲಿಕೆ ಅಧಿಕಾರಿಗಳಿಗೆ ಬಿಸಿತುಪ್ಪವಾಗಿದೆ. ಐಟಿಬಿಟಿ ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಎಷ್ಟೇ ನೋಟಿಸ್ ಕೊಡ್ರೂ ಕ್ಯಾರೆ ಅಂತಿಲ್ಲ. ಹೀಗಾಗಿ ಪಾಲಿಕೆ, ಬಾಕಿ ಉಳಿಸಿಕೊಂಡವ್ರ ಮನೆಗಳಿಗೆ ಕಾವೇರಿ ನೀರು, ವಿದ್ಯುತ್ ಪೂರೈಸದಂತೆ ಬೆಸ್ಕಾಂ ಮತ್ತು ಜಲಮಂಡಳಿಗೆ ಮನವಿ ಮಾಡಿದೆ.

ಇನ್ನು ಬಿಬಿಎಂಪಿ ಮನವಿಗೆ ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತೆರಿಗೆ ಕಟ್ಟದವ್ರಿಗೆ ವಿದ್ಯುತ್ ಹಾಗೂ ಕಾವೇರಿ ವಾಟರ್‌ ಕಟ್‌ ಆಗಲಿದ್ಯಂತೆ. ಮೊದಲ ಹಂತವಾಗಿ ಪ್ರತಿ ವಲಯದಲ್ಲಿ ಅತಿಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರೋ ಆಸ್ತಿ ಮಾಲೀಕರ ಪಟ್ಟಿ ಮಾಡಿ ಅವ್ರ ವಿರುದ್ಧ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಜೊತೆಗೆ ಸಾವಿರಾರು ಜನಕ್ಕೆ ಪ್ರಾಪರ್ಟಿ ಜಪ್ತಿ ವಾರಂಟ್ ನೀಡಲಾಗಿದ್ಯಂತೆ. ಆದ್ರೂ ಟ್ಯಾಕ್ಸ್ ಕಟ್ಟೋ ಮನಸು ಮಾಡ್ತಿಲ್ಲ. ಇದ್ರಿಂದ ಬೆೇಸತ್ತ ಪಾಲಿಕೆ ಆಸ್ತಿ ತೆರಿಗೆ ಮತ್ತು ಸುಧಾರಣಾ ಶುಲ್ಕ ಪಾವತಿ ಮಾಡದ ಮಾಲೀಕರ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಎಚ್ಚರಿಕೆ ಸಹ ನೀಡಿದೆ.

ಒಟ್ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಉಳಿಸಿಕೊಂಡವ್ರ ಸಂಖ್ಯೆ ಅಧಿಕವಾಗಿದ್ದು, ಪಾಲಿಕೆಗೆ ಬರೋಬ್ಬರಿ 1100 ಕೋಟಿ ಬರಬೇಕಿದೆ ಅಂತ ಹೇಳಿಕೊಂಡಿದೆ. ಪಾಲಿಕೆಯೇನೋ ತೆರಿಗೆ ವಂಚಿಸಿದವ್ರ ಪಟ್ಟಿಯನ್ನ ಸಿದ್ಧಪಡಿಸಿ ವಸೂಲಿಗೆ ಮುಂದಾಗಿದೆ. ಆದ್ರೆ ಪಾಲಿಕೆಯ ಈ ಹೊಸ ಐಡಿಯಾ ನಿಜಕ್ಕೂ ವರ್ಕೌಟ್ ಆಗುತ್ತಾ ಅನ್ನೋದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

Published On - 12:56 pm, Wed, 15 January 20