Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಅಮಾನವೀಯ ಘಟನೆ: 2 ತಿಂಗಳ ಹೆಣ್ಣು ಹಸುಗೂಸನ್ನೇ ಕೆರೆಗೆ ಎಸೆದ ತಾಯಿ

ಬೆಳಗಾವಿಯ ಕಣಬರಗಿಯಲ್ಲಿ ತಾಯಿ ತನ್ನ ಎರಡು ತಿಂಗಳ ಮಗುವನ್ನು ಕೆರೆಗೆ ಎಸೆದ ಘಟನೆ ನಡೆದಿದೆ. ದನಗಳನ್ನು ತೊಳೆಯುತ್ತಿದ್ದ ಯುವಕರು ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ಪಿಡ್ಸ್‌ ಸಮಸ್ಯೆ ಇದೆ ಎಂದು ತಾಯಿ ಹೇಳಿಕೊಂಡಿದ್ದಾಳೆ. ಪೊಲೀಸರು ತಾಯಿಯ ವಿರುದ್ಧ ಕೊಲೆ ಪ್ರಯತ್ನದ ಆರೋಪ ಹೊರಿಸಿದ್ದಾರೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ಅಮಾನವೀಯ ಘಟನೆ: 2 ತಿಂಗಳ ಹೆಣ್ಣು ಹಸುಗೂಸನ್ನೇ ಕೆರೆಗೆ ಎಸೆದ ತಾಯಿ
ಬೆಳಗಾವಿಯಲ್ಲಿ ಅಮಾನವೀಯ ಘಟನೆ: 2 ತಿಂಗಳ ಹೆಣ್ಣು ಹಸುಗೂಸನ್ನೇ ಕೆರೆಗೆ ಎಸೆದ ತಾಯಿ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2024 | 4:59 PM

ಬೆಳಗಾವಿ, ಡಿಸೆಂಬರ್​​ 15: ಮಗುವಿಗೆ ಪಿಡ್ಸ್​ ಬರುತ್ತೆ ಅಂತಾ ಹೆತ್ತ ಎರಡು ತಿಂಗಳ ಹೆಣ್ಣು ಹಸುಗೂಸನ್ನು ತಾಯಿ (Mother) ಕೆರೆಗೆ ಎಸೆದಿರುವಂತಹ ಮತ್ತೊಂದು ಅಮಾನವೀಯ ಘಟನೆ ಬೆಳಗಾವಿ‌‌ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ. ತಾಯಿ ಮಗುವನ್ನು ಕೆರೆಗೆ ಎಸೆಯುವುದನ್ನ ನೋಡಿದ ದನ, ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಗುವಿನ ರಕ್ಷಣೆ

ಕಣಬರಗಿ ಗ್ರಾಮದ ನಿವಾಸಿ ಶಾಂತಿ ಕರವಿನಕೊಪ್ಪ ಎಂಬುವವರು ಈ ಕೃತ್ಯ‌ವೆಸಗಿದ್ದಾರೆ. ಮಗುವನ್ನು ಕೆರೆಗೆ ಎಸೆದು ಓಡಿ ಹೋಗುತ್ತಿದ್ದ ತಾಯಿಯನ್ನ ತಡೆದು ಸ್ಥಳೀಯರು ಬುದ್ದಿ ಹೇಳಿದ್ದಾರೆ. ಮಗುವನ್ನ ರಕ್ಷಣೆ ಮಾಡಿ ಅವಳ ಕೈಗೆ ನೀಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಸೊಸೆಯನ್ನ ಮಂಚಕ್ಕೆ ಕರೆದ ಮಾವ : ಬರಲೊಪ್ಪದಕ್ಕೆ ಆಕೆಯ ಜೀವವನ್ನೇ ತೆಗೆದ!

ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಶಾಂತಿ ಗೃಹಿಣಿಯಾಗಿದ್ದಳು. ಇತ್ತ ಗಂಡ ಹಿಂಡಾಲ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕೆಲಸಕ್ಕೆ ಹೋಗಿದ್ದಾಗ ಮಗುವನ್ನ ಎತ್ತಿಕೊಂಡು ಕೆರೆಗೆ ಬಂದಿದ್ದಾರೆ. ಹೀಗೆ ಕೆರೆಗೆ ಬಂದ ಕೆಲ ಹೊತ್ತು ಅನುಮಾನಾಸ್ಪದವಾಗಿ ಕೆರೆ ಮೇಲೆ ಓಡಾಡಿದ್ದಾರೆ. ಬಳಿಕ ಮಗುವನ್ನು ಕೆರೆಗೆ ಎಸೆದು ತಾಯಿ ಓಡತೋಡಗಿದ್ದಾರೆ.

ಇದನ್ನ ಗಮನಿಸಿದ ಸವಾರ ಕನ್ನಯ್ಯಾ ಜಂಬಾಳೆ ಎಂಬಾತ ಓಡೋಡಿ ಹೋಗಿದ್ದಾರೆ. ಕಿರುಚಾಡಿ ಅಲ್ಲಿದ್ದ ಜರನ್ನ ಸೇರಿಸಿದ್ದಾರೆ. ಇದೇ ಕೆರೆಯಲ್ಲಿ ದನ ತೊಳೆಯುತ್ತಿದ್ದ ಜ್ಯೋತಿಬಾ ಎಂಬ ಯುವಕ ಕೂಡಲೇ ಕೆರೆಗೆ ಹಾರಿ ಮಗುವನ್ನ ರಕ್ಷಣೆ ಮಾಡಿ ಸ್ಥಳೀಯರ ಕೈಗೆ ನೀಡಿದ್ದಾರೆ.

ತಾಯಿ ಅರೆಸ್ಟ್

ಇನ್ನೂ ಕೆರೆಗೆ ಮಗುವನ್ನ ಎಸೆದು ಶಾಂತಿ ಓಡುತ್ತಿದ್ದಂತೆ ಹಿಂಬಾಲಿಸಿದ ಸ್ಥಳೀಯರು ಕೂಡಲೇ ಆಕೆಯನ್ನ ಹಿಡಿದು ಕೆರೆ ಕಡೆಗೆ ಕರೆದುಕೊಂಡು ಬಂದಿದ್ದಾರೆ. ರಕ್ಷಣೆ ಮಾಡಿದ ಮಗುವನ್ನ ಆಕೆ ಕೈಗೆ ಕೊಟ್ಟು ಬುದ್ದಿವಾದ ಹೇಳಿದ್ದಾರೆ. ಆ್ಯಂಬುಲೆನ್ಸ್ ಕರೆಸಿ ಮಗುವನ್ನ ನಗರದಲ್ಲಿರುವ ಚಿಕ್ಕ ಮಕ್ಕಳ ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದಾರೆ.  ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನ ಬಂಧಿಸಿದ್ದಾರೆ.

ಇನ್ನೂ ಮಗುವನ್ನ ಕೆರೆಗೆ ಯಾಕೆ ಎಸೆದಿದ್ದು ಅಂತಾ ವಿಚಾರಣೆ ನಡೆಸಿದಾಗ ಮಗನಿಗೆ ನಿರಂತರವಾಗಿ ಪಿಡ್ಸ್ ಬರ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು. ಇನ್ನೂ ಒಂದು ಮೊದಲ ಮಗನ ಎರಡನೇ ವರ್ಷದ ಹುಟ್ಟುಹಬ್ಬ ಕೂಡ ಇಂದೇ ಇದ್ದು ಇದೇ ದಿನ ಎರಡನೇ ಮಗನನ್ನ ಕೊಲ್ಲಲು ಯತ್ನಿಸಿದ್ದಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿಯಾದರೆ ಸಾಕು ವಿಡಿಯೋ ಕಾಲ್: ಇನ್ಸ್​ಪೆಕ್ಟರ್​​ ವಿರುದ್ಧ ಮಹಿಳಾ ಸಿಬ್ಬಂದಿ ದೂರು

ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಾಯಿ ವಿರುದ್ದ ಕೊಲೆ ಕೇಸ್ ದಾಖಲಾಗಿದ್ದು, ಇತ್ತ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿಜಕ್ಕೂ ಮಗುವಿಗೆ ಪಿಡ್ಸ್​​ ಬರ್ತಿತ್ತಾ. ಬಂದಿದ್ದರೆ ಚಿಕಿತ್ಸೆ ಕೊಡಿಸಬೇಕಿತ್ತು. ಹಣ ಇಲ್ದಿದ್ರೂ ಸರ್ಕಾರಿ ಆಸ್ಪತ್ರೆಯಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕಿತ್ತು. ಆದರೆ ಈ ರೀತಿ ಮಗುವನ್ನೇ ಹೆತ್ತಮ್ಮ ಕೊಲ್ಲಲು ಮುಂದಾಗಿದ್ದು ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.