ಬೆಳಗಾವಿ: ಅಂಚೆ ಕಚೇರಿಯಲ್ಲಿ ಹಣಕೊಡುತ್ತಿದ್ದಾರೆ ಅಂತ ಹೇಳಿ ಅಜ್ಜಿಗೆ ವಂಚನೆ

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ 75 ವರ್ಷದ ಉಮಕ್ಕ ರಾಮು ಕೇದಾರಿ ಅವರಿಗೆ ವ್ಯಕ್ತಿಯೋರ್ವ ವಂಚಿಸಿದ್ದಾನೆ. ರಸ್ತೆ ಬದಿ ಸೌತೆಕಾಯಿ ಮಾರಾಟ ಮಾಡುವ ಉಮಕ್ಕ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೃತ್ಯವನ್ನು ಎಸಗಿದ್ದಾನೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ: ಅಂಚೆ ಕಚೇರಿಯಲ್ಲಿ ಹಣಕೊಡುತ್ತಿದ್ದಾರೆ ಅಂತ ಹೇಳಿ ಅಜ್ಜಿಗೆ ವಂಚನೆ
ಮಾರಿಹಾಳ ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: May 01, 2025 | 6:01 PM

ಬೆಳಗಾವಿ, ಮೇ 01: ಅಂಚೆ ಕಚೇರಿಯಲ್ಲಿ (Post Office) ಹಣ ಕೊಡುತ್ತಿದ್ದಾರೆ ಅಂತ ಹೇಳಿ, ಅಜ್ಜಿಯ ಬಳಿ ಇದ್ದ ಒಡವೆಗಳನ್ನು ದೋಚಿ ವ್ಯಕ್ತಿಯೋರ್ವ ಪರಾರಿಯಾಗಿದ್ದಾನೆ. ಬೆಳಗಾವಿ (Belagavi) ತಾಲೂಕಿನ ಮುತಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಉಮಕ್ಕ ರಾಮು ಕೇದಾರಿ (75) ಮೋಸ ಹೋಗಿರುವ ಅಜ್ಜಿ.

ಉಮಕ್ಕ ಅವರು ರಸ್ತೆ ಬದಿ ಸೌತೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದಾರೆ. ಅಜ್ಜಿ ಉಮಕ್ಕ ಅವರ ಬಳಿ ವ್ಯಕ್ತಿಯೋರ್ವ ಬಂದು ಪರಿಚಯಸ್ಥನಂತೆ ಮಾತನಾಡಿಸಿದ್ದಾನೆ. ಬಳಿಕ, “ಅಂಚೆ ಕಚೇರಿಯಲ್ಲಿ ವಯಸ್ಸಾದವರಿಗೆ ಆರು ಸಾವಿರ ರೂ. ಹಣ ಕೊಡುತ್ತಾರೆ, ನೀನು ಬಾ” ಎಂದು ಉಮಕ್ಕ ಅವರನ್ನು ಕರೆದುಕೊಂಡು ಹೋಗಿದ್ದಾನೆ. ನಂತರ ಯಾವುದೋ ಕಟ್ಟಡದ ಬಳಿ​ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಆಗಾಗ ಅಜ್ಜಿ ಮನೆಗೆ ಬರುತ್ತಿದ್ದವ ಯುವತಿಯನ್ನೇ ಪಟಾಯಿಸಿ ಮದ್ವೆಯಾದ

ಇದನ್ನೂ ಓದಿ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಪಾಸಾದರೆ ಮಾತ್ರ ಲವ್ ಮಾಡ್ತೀನಿ ಅಂದಿದ್ದಾಳಂತೆ ಅವನ ಹುಡುಗಿ!
ಬೆಳಗಾವಿ: ಸಂಬಳ ನೀಡದಿದ್ದಕ್ಕೆ ಬೇಸತ್ತು ಆ್ಯಂಬುಲೆನ್ಸ್ ಚಾಲಕ ಆತ್ಮಹತ್ಯೆ

ನಂತರ, ವಂಚಕ “ಬಂಗಾರ ಹಾಕಿಕೊಂಡು ಒಳಗೆ ಹೋದರೆ ಹಣ ಕೊಡಲ್ಲ ಎಂದು ವೃದ್ಧೆ ಉಮಕ್ಕ ಅವರಿಗೆ ಹೇಳಿದ್ದಾನೆ. ವಂಚಕನ ಮಾತು ನಂಬಿದ ಉಮಕ್ಕ, ಬಂಗಾರದ ಓಲೆ ಮತ್ತು ಬಳೆಗಳನ್ನು ಬಿಚ್ಚಿ ಆತನ ಕೈಗೆ ಕೊಟ್ಟು ಒಳಗೆ ಹೋಗಿದ್ದಾನೆ. ಒಳ ಹೋಗಿ ಹೊರ ಬರುಷ್ಟರಲ್ಲಿ ವಂಚಕ ಪರಾರಿಯಾಗಿದ್ದಾನೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Thu, 1 May 25

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us