Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಭಮೇಳಕ್ಕೆ​ ತೆರಳುತ್ತಿದ್ದ ಕ್ರೂಸರ್​ ವಾಹನ ಅಪಘಾತ: ಬೆಳಗಾವಿಯ ಆರು ಮಂದಿ ಸಾವು

ಮಧ್ಯಪ್ರದೇಶದ ಜಬಲ್ಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗೋಕಾಕದ ನಾಲ್ವರು ಭಕ್ತರು ಮೃತಪಟ್ಟಿದ್ದಾರೆ. ಕ್ರೂಸರ್ ವಾಹನದಲ್ಲಿ ಪ್ರಯಾಗ್ ರಾಜ್ ಕುಂಭಮೇಳಕ್ಕೆ ತೆರಳುತ್ತಿದ್ದ ರು ಎಂದು ತಿಳಿದುಬಂದಿದೆ. ಲಕ್ಷ್ಮಿ ಬಡಾವಣೆಯ ಬಾಲಚಂದ್ರ ಗೌಡರ ಮತ್ತು ಬಸವರಾಜ ಕುರಟ್ಟಿ ಸೇರಿದಂತೆ ನಾಲ್ವರು ಮೃತಪಟ್ಟವರಲ್ಲಿ ಸೇರಿದ್ದಾರೆ. ನಾಲ್ವರು ಸ್ಥಿತಿ ಗಂಭೀರವಾಗಿದೆ.

ಕುಂಭಮೇಳಕ್ಕೆ​ ತೆರಳುತ್ತಿದ್ದ ಕ್ರೂಸರ್​ ವಾಹನ ಅಪಘಾತ: ಬೆಳಗಾವಿಯ ಆರು ಮಂದಿ ಸಾವು
ಜಖಂ ಗೊಂಡಿರುವ ಕ್ರೂಸರ್​
Follow us
Sahadev Mane
| Updated By: ವಿವೇಕ ಬಿರಾದಾರ

Updated on:Feb 24, 2025 | 10:17 AM

ಬೆಳಗಾವಿ, ಫೆಬ್ರವರಿ 24: ಮಧ್ಯಪ್ರದೇಶದ (Madhya Pradesh) ಜಬಲಪೂರ ಪೆಹರಾ‌ ಟೋಲ್ ನಾಕಾ ಬಳಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ (Gokak) ನಗರದ ಆರು ಮಂದಿ ಮೃತಪಟ್ಟಿದ್ದಾರೆ.  ಇಬ್ಬರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ‌ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಮೃತರು ದುರ್ದೈವಿಗಳು. ಗಾಯಗೊಂಡ ಮುಸ್ತಾಕ್ ಶಿಂಧಿಕುರಬೇಟ, ಸದಾಶಿವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ದಿನಗಳ ಹಿಂದೆ ಗೋಕಾಕ್​ನಿಂದ ಕ್ರೂಸರ್ ವಾಹನದಲ್ಲಿ ಭಕ್ತರು ಪ್ರಯಾಗ್‌ರಾಜ್​ನ ಕುಂಭಮೇಳಕ್ಕೆ (Prayagraj Kumbh Mela) ತೆರಳುತ್ತಿದ್ದರು ಸೋಮವಾರ (ಫೆ.24) ಬೆಳಗಿನ ಜಾವ ಕ್ರೂಸರ್​ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಬೀದರ್​ನ ಆರು ಮಂದಿ ಸಾವು

ಉತ್ತರಪ್ರದೇಶದ ವಾರಣಾಸಿ ಬಳಿ ಅಪಘಾತ ಸಂಭವಿಸಿದ್ದ ಮಹಾ ಕುಂಭಮೇಳಕ್ಕೆ ತೆರಳಿದ್ದ ಬೀದರ್​ ಮೂಲದ ಆರು ಮಂದಿ ಮೃತಪಟ್ಟಿದ್ದರು. ಸುನೀತಾ (40 ವರ್ಷ), ನೀಲಮ್ಮ( 62 ವರ್ಷ) ಲಕ್ಷ್ಮಿ (57 ವರ್ಷ) ಕಲಾವತಿ (60 ವರ್ಷ) ಸಂತೋಷ (45 ವರ್ಷ) ಮೃತ ದುರ್ದೈವಿಗಳು. ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದರು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಬೆಂಗಳೂರಿನ ಮಹಿಳೆ ಅಪಘಾತದಲ್ಲಿ ಸಾವು

ಬೀದರ್​ನ ಲಾಡಗೆರಿ ನಗರ ನಿವಾಸಿಗಳಾದ 14 ಜನ ಫೆಬ್ರವರಿ 18 ರಂದು ಮಧ್ಯಾಹ್ನ ಬೀದರ ನಗರದಿಂದ ಕ್ರೂಸರ್​​ಮಹಾಕುಂಭ ಪ್ರಯಾಗರಾಜಗೆ ಹೊರಟಿದ್ದರು. ಶುಕ್ರವಾರ (ಫೆ.21) ಬೆಳಗಿನ ಜಾವ ಮಿರಾಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 am, Mon, 24 February 25