ಜೋಡೆತ್ತು, ಕುದುರೆಗಳ ರೇಸ್, ಪ್ರೇಕ್ಷಕರಿಗೆ ಕಿಕ್ಕೇರಿಸಿದ ಓಟದ ಗಮ್ಮತ್ತು
ಬೆಳಗಾವಿ: ಹಳ್ಳಿ ಆಟಗಳ ಗಮ್ಮತ್ತೇ ಹಂಗೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ವೆ. ಜೊತೆಗೆ ಫುಲ್ ಮಸ್ತಿಯನ್ನೂ ಕೊಡುತ್ತವೆ. ಚಿಕ್ಕೋಡಿಯಲ್ಲಿ ನಡೆದ ಈ ಜಾತ್ರೆಯೂ ಯಾವ ಖದರ್ಗೂ ಕಮ್ಮಿ ಇರಲಿಲ್ಲ. ಮೈತುಂಬಾ ರಂಗು ಬಳ್ಕೊಂಡು ಸಿದ್ಧವಾಗಿರೋ ಜೋಡೆತ್ತು. ಪಕ್ದಲ್ಲೇ ಕುದುರೆಗಳು ಇವೆ. ನೋಡ ನೋಡ್ತಿದ್ದಂತೆ ಅಲ್ಲೊಂದು ವಾರ್ ಶುರುವಾಗಿತ್ತು. ಅದು ಅಂತಿಂಥ ವಾರ್ ಅಲ್ಲ. ಜೋಡೆತ್ತು ಮತ್ತು ಕುದುರೆಗಳ ರನ್ನಿಂಗ್ ರೇಸ್. ಮಿಂಚಿನಂತೆ ಮರೆಯಾಗೋ ಹೈವೋಲ್ಟೇಜ್ ರೇಸ್. ರಸ್ತೆಯಲ್ಲಿ ಎತ್ತುಗಳು ಮುನ್ನುಗ್ಗಿ ಬರ್ತಿದ್ರೆ ಶಿಳ್ಳೆ ಕೇಕೆಗಳು ಮೊಳಗಿದ್ವು. ನೋಡೋರಂತೂ ರೋಮಾಂಚನಗೊಂಡಿದ್ರು. […]
ಬೆಳಗಾವಿ: ಹಳ್ಳಿ ಆಟಗಳ ಗಮ್ಮತ್ತೇ ಹಂಗೆ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ವೆ. ಜೊತೆಗೆ ಫುಲ್ ಮಸ್ತಿಯನ್ನೂ ಕೊಡುತ್ತವೆ. ಚಿಕ್ಕೋಡಿಯಲ್ಲಿ ನಡೆದ ಈ ಜಾತ್ರೆಯೂ ಯಾವ ಖದರ್ಗೂ ಕಮ್ಮಿ ಇರಲಿಲ್ಲ.
ಮೈತುಂಬಾ ರಂಗು ಬಳ್ಕೊಂಡು ಸಿದ್ಧವಾಗಿರೋ ಜೋಡೆತ್ತು. ಪಕ್ದಲ್ಲೇ ಕುದುರೆಗಳು ಇವೆ. ನೋಡ ನೋಡ್ತಿದ್ದಂತೆ ಅಲ್ಲೊಂದು ವಾರ್ ಶುರುವಾಗಿತ್ತು. ಅದು ಅಂತಿಂಥ ವಾರ್ ಅಲ್ಲ. ಜೋಡೆತ್ತು ಮತ್ತು ಕುದುರೆಗಳ ರನ್ನಿಂಗ್ ರೇಸ್. ಮಿಂಚಿನಂತೆ ಮರೆಯಾಗೋ ಹೈವೋಲ್ಟೇಜ್ ರೇಸ್.
ರಸ್ತೆಯಲ್ಲಿ ಎತ್ತುಗಳು ಮುನ್ನುಗ್ಗಿ ಬರ್ತಿದ್ರೆ ಶಿಳ್ಳೆ ಕೇಕೆಗಳು ಮೊಳಗಿದ್ವು. ನೋಡೋರಂತೂ ರೋಮಾಂಚನಗೊಂಡಿದ್ರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಖಜಗೋನಹಟ್ಟಿ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಪ್ರಯುಕ್ತ ಕುದುರೆಗಾಡಿ ಮತ್ತು ಎತ್ತಿನಗಾಡಿ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲು ಎತ್ತಿನ ಗಾಡಿ ಓಡಿಸುವ ಸ್ಪರ್ಧೆ ನಡೆಸಲಾಯಿತು. ದೇವಸ್ಥಾನದ ಪಕ್ಕದಲ್ಲಿರುವ ಗುಡ್ಡದಲ್ಲಿ ಈ ಸ್ಪರ್ಧೆ ನಡೆದಿದ್ದು, ಎರಡು ಕಿಲೋ ಮೀಟರ್ ದೂರವನ್ನ ಯಾರು ಫಸ್ಟ್ ಮುಟ್ಟುತ್ತಾರೋ ಅವ್ರೇ ಗೆದ್ದಂತೆ. ಹೀಗೆ ಮೊದಲ, ದ್ವಿತೀಯ, ತೃತೀಯ ಅಂತಾ ಮೂರು ಭಾಗಗಳಲ್ಲಿ ಬಹುಮಾನ ನೀಡಲಾಯ್ತು.
ಇನ್ನು ಎತ್ತಿನಗಾಡಿ ಸ್ಪರ್ಧೆ ಮುಗೀತ್ತಿದ್ದಂತೆ ಕುದುರೆಗಾಡಿ ಸ್ಪರ್ಧೆ ನಡೀತು. ಈ ಕುದುರೆಗಾಡಿ ಸ್ಪರ್ಧೆಯಲ್ಲಿ ಒಂದೂವರೆ ಕಿಲೋ ಮೀಟರ್ ದೂರವನ್ನ ಯಾರು ಫಸ್ಟ್ ರೀಚ್ ಆಗ್ತಾರೋ ಅವ್ರನ್ನ ವಿಜಯಿ ಅಂತಾ ಘೋಷಿಸಲಾಯ್ತು. ಇನ್ನು ಕುದುರೆ ಮತ್ತು ಎತ್ತಿನ ಗಾಡಿ ರೇಸ್ಗೆ ಮಹಾರಾಷ್ಟ್ರದ ಸಾಂಗಲಿ, ಜತ್ತ, ಮಿರಜ್ ಕೊಲ್ಲಾಪುರ, ಚಿಕ್ಕೋಡಿ, ಹಾರೋಗೇರಿ, ಬೆಳಗಾವಿ, ಗೋಕಾಕ್ನಿಂದ ಸ್ಪರ್ಧಿಗಳು ಬಂದಿದ್ರು.
ಸದ್ಯ ಹಳ್ಳಿ ಸೊಗಡಿನ ಈ ಆಟ ಜಾತ್ರೆಗೆ ಹೊಸ ಕಳೆ ತಂದಿದ್ದಲ್ದೇ ನೋಡುಗರಿಗೆ ಸಖತ್ ಮಜಾ ಕೊಟ್ಟಿತ್ತು. ಇಷ್ಟು ದಿನ ಕೃಷಿಯಲ್ಲೇ ಬ್ಯುಸಿಯಾಗಿದ್ದ ರೈತರು ಕೂಡ ಗೇಮ್ ಹೆಸ್ರಲ್ಲಿ ರಿಲ್ಯಾಕ್ಸ್ ಆಗಿದ್ರು.
Published On - 11:57 am, Sun, 12 January 20