ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ಖೋಟಾ ನೋಟುಗಳ ಹಾವಳಿ
ಬೆಳಗಾವಿ: ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ಖೋಟಾ ನೋಟುಗಳ ಹಾವಳಿ ಶುರುವಾಗಿದೆ. ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಸವದತ್ತಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈರಣ್ಣ ಮೂಲಿನಮನಿ (30) ಬಂಧಿತ ಆರೋಪಿ. ಬಂಧಿತನಿಂದ 100, 500 ಮುಖಬೆಲೆಯ 38,500 ರೂಪಾಯಿ ನಕಲಿ ನೋಟು ಜಪ್ತಿ ಮಾಡಲಾಗಿದೆ. ಜಾತ್ರೆಯಲ್ಲಿ ಕುಂಕುಮ ಭಂಡಾರ ವ್ಯಾಪಾರಿಗೆ ಆರೋಪಿ ನಕಲಿ ನೋಟು ನೀಡಿ ವಂಚಿಸಿದ್ದಾನೆ. ಈ ಸಂಬಂಧ ವ್ಯಾಪಾರಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ […]
ಬೆಳಗಾವಿ: ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ಖೋಟಾ ನೋಟುಗಳ ಹಾವಳಿ ಶುರುವಾಗಿದೆ. ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯನ್ನು ಸವದತ್ತಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಈರಣ್ಣ ಮೂಲಿನಮನಿ (30) ಬಂಧಿತ ಆರೋಪಿ.
ಬಂಧಿತನಿಂದ 100, 500 ಮುಖಬೆಲೆಯ 38,500 ರೂಪಾಯಿ ನಕಲಿ ನೋಟು ಜಪ್ತಿ ಮಾಡಲಾಗಿದೆ. ಜಾತ್ರೆಯಲ್ಲಿ ಕುಂಕುಮ ಭಂಡಾರ ವ್ಯಾಪಾರಿಗೆ ಆರೋಪಿ ನಕಲಿ ನೋಟು ನೀಡಿ ವಂಚಿಸಿದ್ದಾನೆ. ಈ ಸಂಬಂಧ ವ್ಯಾಪಾರಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಸವದತ್ತಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.