ಗದಗ– ಬೆಟಗೇರಿ ನಗರಸಭೆ ಗದ್ದುಗೆ ಗುದ್ದಾಟ: ಮತದಾರರ ಪಟ್ಟಿಯಲ್ಲಿ ಎಂಎಲ್ಸಿ ಹೆಸರು ಸೇರಿಸುವ ಅರ್ಜಿ ತಿರಸ್ಕಾರ
ಗದಗ-ಬೆಟಗೇರಿ ನಗರಸಭೆ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವಿಷಯದಲ್ಲಿ ಮತ್ತೆ ಕಾಂಗ್ರೆಸ್, ಬಿಜೆಪಿ ನಡುವೆ ಗುದ್ದಾಟ ನಡೆದಿದೆ. ಕೈ ಪಡೆ ಈ ಬಾರಿ ಏನಾದ್ರೂ ಮಾಡಿ ಅಧಿಕಾರಕ್ಕೆ ಏರಬೇಕು ಅಂತ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಹೀಗಾಗಿ ಕಾಂಗ್ರೆಸ್ ಎಂಎಲ್ಸಿ ಸಲೀಂ ಅಹ್ಮದ್ ಅವ್ರ ಹೆಸರು ಗದಗ ಮತದಾರ ಪಟ್ಟಿಗೆ ಸೇರಿಸಲು ಪ್ಲಾನ್ ಮಾಡಿತ್ತು. ಇತ್ತ ಬಿಜೆಪಿ ಕೂಡ ಎಂಎಲ್ಸಿ ಎಸ್ ವಿ ಸಂಕನೂರ ಹೆಸರು ಸೇರಿಸಲು ಪ್ಲಾನ್ ಮಾಡಿತ್ತು. ಆದ್ರೆ, ಇಬ್ಬರ ವಿರುದ್ಧವೂ ದೂರು ಬಂದ ಹಿನ್ನಲೆಯಲ್ಲಿ ಎಸಿ ಅವ್ರು ಎರಡು ಅರ್ಜಿ ತಿರಸ್ಕಾರ ಮಾಡಿದ್ದಾರೆ.
ಗದಗ, ಸೆ.04: ಗದಗ-ಬೆಟಗೇರಿ ನಗರಸಭೆ ಪದೇ ಪದೇ ಯಡವಟ್ಟುಗಳ ಮೂಲಕ ಕುಖ್ಯಾತಿ ಪಡೆದಿದೆ. ಕಳೆದ ವಾರ ಪೌರಾಯುಕ್ತರ ಪೋರ್ಜರಿ ಸಹಿ, ನಕಲಿ ಠರಾವು ಪ್ರಕರಣ ಭಾರಿ ಸದ್ದು ಮಾಡಿತ್ತು. ಇದು ಕಾಂಗ್ರೆಸ್ (Congress), ಬಿಜೆಪಿ (BJP) ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅಂದ್ಹಾಗೆ ಗದಗ-ಬೆಟಗೇರಿ ನಗರಸಭೆ (Gadag-Betageri Municipality) ಒಟ್ಟು 35 ಸದಸ್ಯರ ಬಲ ಹೊಂದಿದೆ. ಬಿಜೆಪಿ 18 ಸದಸ್ಯರು ಹಾಗೂ ಒಬ್ಬ ಬಿಜೆಪಿ ಸಂಸದ ಸೇರಿ ಒಟ್ಟು 19 ಬಲ ಹೊಂದಿದೆ. ಕಾಂಗ್ರೆಸ್ನ 17 ಸದಸ್ಯರು, ಓರ್ವ ಶಾಸಕರು ಸೇರಿ ಒಟ್ಟು 18 ಸದಸ್ಯರ ಬಲ ಹೊಂದಿದೆ. ಮೊದಲನೇ ಅವಧಿಗೆ ಬಿಜೆಪಿ ಅಧಿಕಾರ ಮಾಡಿದೆ. ಈಗ 2ನೇ ಅವಧಿಗೆ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಹೊರಡಿಸಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಿದ್ರೆ. ಉಪಾದ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಈ ಬಾರಿಯಾದ್ರೂ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾವೇರಿಯಿಂದ ಗದಗ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆನ್ ಲೈನ್ನಲ್ಲಿ ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್ಗೆ ಟಾಂಗ್ ಕೊಡಲು ಬಿಜೆಪಿ ಕೂಡ ಎಂಲ್ಸಿಸಿ ಎಸ್ ವಿ ಸಂಕನೂರ ಹುಬ್ಬಳ್ಳಿ ಯಿಂದ ಗದಗ ಕ್ಷೇತ್ರದಲ್ಲಿ ಹೆಸರು ಸೇರಿಸಲು ಪ್ಲಾನ್ ಮಾಡಿ ಅರ್ಜಿ ಸಲ್ಲಿಸಿದ್ರು. ಕಾಂಗ್ರೆಸ್ ಸರ್ಕಾರ ಇರೋದ್ರಿಂದ ಬಿಜೆಪಿ ಎಂಎಲ್ಸಿ ಅರ್ಜಿ ತಿರಸ್ಕಾರ ಆಗುತ್ತೆ. ಕಾಂಗ್ರೆಸ್ ಎಂಎಲ್ಸಿ ಹೆಸರು ಸೇರ್ಪಡೆ ಆಗುತ್ತೆ ಅನ್ನೋ ಚರ್ಚೆ ತೀವ್ರವಾಗಿತ್ತು. ಆದ್ರೆ, ಇಬ್ಬರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸದಂತೆ ಎರಡು ಪಕ್ಷಗಳು ದೂರು ನೀಡಿವೆ. ಎರಡು ಕಡೆ ವಾದವಿವಾದ ಆಲಿಸಿದ ಗದಗ ಎಸಿ ಗಂಗ್ಗಪ್ಪ ಅವ್ರು ಎರಡು ಅರ್ಜಿಗಳು ತಿರಸ್ಕಾರ ಮಾಡಿ ಆದೇಶ ಹೊರಡಿಸಿದ್ದಾರೆ. ಉಪವಿಭಾಗಾಧಿಕಾರಿ ಗಂಗಪ್ಪ ಅವರ ಆದೇಶ ಎರಡು ಪಕ್ಷಗಳಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ಗದಗ-ಬೆಟಗೇರಿಯ ಹಲವೆಡೆ ಗ್ಯಾಸ್ ರೀ ಫಿಲ್ಲಿಂಗ್ ದಂಧೆ; ಟಿವಿ9 ರಿಯಾಲಿಟಿ ಚೆಕ್ ವೇಳೆ ಬಯಲಾಯ್ತು ಆಕ್ರಮ
ಇನ್ನೊಂದೆಡೆ ನಕಲಿ ಠರಾವು, ಪೌರಾಯುಕ್ತರ ನಕಲಿ ಸಹಿ ಪ್ರಕರಣದಲ್ಲಿ ಬಿಜೆಪಿ ಮೂರು ಸದಸ್ಯರು ಸಿಲುಕಿಕೊಂಡಿದ್ದಾರೆ. ಸಚಿವ ಎಚ್ ಕೆ ಪಾಟೀಲ್ ಅಧಿಕಾರಿ ಮೇಲೆ ಒತ್ತಡ ಹಾಕಿ ಕೇಸ್ ಮಾಡಿಸಿದ್ದಾರೆ ಅಂತ ಬಿಜೆಪಿ ಆರೋಪಿಸಿದೆ. ಈ ಮೂಲಕ ಬಿಜೆಪಿ ಸದಸ್ಯರ ನಗರಸಭೆಗೆ ಬಾರದಂತೆ ಮಾಡಿ ಅಧಿಕಾರದ ಚುಕ್ಕಾಣಿಯ ಹಿಡಿಯುವ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ ಕೈ ನಾಯಕರು ಅಂತ ಆರೋಪಿಸಿದ್ರು. ಈ ಪ್ರಕರಣಕ್ಕೆ ಬಿಜೆಪಿ ಹೈಕೋರ್ಟ್ ನಿಂದ ತಡೆ ತಂದಿದೆ. ಹೀಗಾಗಿ ಈ ಪ್ಲಾನ್ ಫಲಿಸದಕ್ಕೆ ಎಂಎಲ್ಸಿ ಸಲೀಂ ಅಹ್ಮದ್ ಅವರ ಹೆಸರು ಗದಗ ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಅಧಿಕಾರಕ್ಕೆ ಏರುವ ಹುನ್ನಾರ ಮಾಡಿದ್ರು. ಆದರೆ, ಸಚಿವ ಎಚ್ ಕೆ ಪಾಟೀಲ್ ತಂತ್ರ ಫಲಿಸಲಿಲ್ಲ ಅಂತ ಬಿಜೆಪಿ ಆರೋಪಿಸಿದೆ. ಇದರ ಬೆನ್ನಲೇ ಕಾಂಗ್ರೆಸ್ ಸರ್ಕಾರ ಹೊರಡಿಸಿದ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಗೆ ತಡೆಯಾಜ್ನೆ ತರುವ ಮೂಲಕ ಆಡಳಿತಾಧಿಕಾರಿಯ ಅಧಿಕಾರ ಮುಂದುವರಿಸುತ್ತಿದೆ. ಈ ಮೂಲಕ ಅವಳಿ ನಗರದ ಅಭಿವೃದ್ಧಿ ಕುಂಠಿತವಾಗುತ್ತೆ ಅಂತ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿ-ಕಾಂಗ್ರೆಸ್ ನಡುವೆ ಆರೋಪಗಳ ಸುರಿ ಮಳೆ
ಆದರೆ, ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಬಿಜೆಪಿ ಅಧಿಕಾರದ ಆಸೆಗಾಗಿ ಬಿಜೆಪಿ ಎಂಎಲ್ಸಿ ಎಸ್ ವಿ ಸಂಕನೂರ ಅವ್ರನ್ನ ಬಳಸಿಕೊಳ್ತಿದೆ ಅಂತ ಕಿಡಿಕಾರಿದ್ದಾರೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆ ಬಂದ್ರೆ ಎಂಎಲ್ಸಿ ಎಸ್ ವಿ ಸಂಕನೂರ ಅವ್ರು ಹುಬ್ಬಳ್ಳಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡ್ತಾರೆ. ಇತ್ತ ಗದಗ ನಗರಸಭೆ ಅಧ್ಯಕ್ಷ, ಉಪಾದ್ಯಕ್ಷರ ಚುನಾವಣೆ ಬಂದ್ರೆ ಗದಗ ಕ್ಷೇತ್ರದ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಳಿ ನಗರದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಅಂತ ಕಿಡಿಕಾರಿದ್ದಾರೆ. ಸಾಕಷ್ಟು ಹಗರಣ ಮೂಲಕ ಗದಗ-ಬೆಟಗೇರಿ ನಗರಸಭೆಗೆ ಕಪ್ಪುಚುಕ್ಕೆ ತಂದಿದೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಅವಧಿಯಲ್ಲೂ ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾಗಿತ್ತು. ಹೀಗಾಗಿ ಓಬಿಸಿಗೆ ಅನ್ಯಾಯವಾಗಿದೆ ಹೀಗಾಗಿ ಸ್ಟೇ ತರಲಾಗಿದೆ ಅಂತಾರೆ.
ಏನೇ ಇರಲಿ ಶತಾಯಗತಾಯ ಈ ಬಾರಿ ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಕಸರತ್ತು ಮಾಡ್ತಾಯಿದೆ. ಆದ್ರೆ, ಬಿಜೆಪಿ ಪ್ರತಿತಂತ್ರ ಮಾಡುವ ಮೂಲಕ ಕೈ ಪಡೆಗೆಟಾಂಗ್ ನೀಡ್ತಾಯಿದೆ. ಬಿಜೆಪಿ ಸದಸ್ಯರನ್ನು ಸೆಳೆದು ಅಧಿಕಾರದ ಗದ್ದುಗೆ ಏರಲು ಪ್ಲಾನ್ ಕೂಡ ಕಾಂಗ್ರೆಸ್ ಮಾಡ್ತೀದೆ ಅನ್ನೋ ಗುಸುಗುಸು ಅವಳಿ ನಗರದಲ್ಲಿ ಕೇಳಿ ಬರ್ತಾಯಿದೆ. ಜಿಲ್ಲಾಡಳಿತ ಸ್ಟೇ ತೆರವು ಮಾಡುವಂತೆ ಕೋರ್ಟ್ ಅರ್ಜಿ ಸಲ್ಲಿಸಲು ಪ್ಲಾನ್ ಮಾಡಿದೆ. ಸೆಪ್ಟೆಂಬರ್ 11ರಂದು ಕೋರ್ಟ್ ಆದೇಶ ನೀಡಲಿದೆ. ಆ ಬಳಿಕವೇ ನಗರಸಭೆ ಗದ್ದುಗೆ ಯಾರ ಪಾಲಾಗುತ್ತೆ ಅನ್ನೋ ಕುತೂಹಲ ಅವಳಿ ನಗರದ ಜನರಲ್ಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ