ಸರ್ಕಾರಿ ಡಾಕ್ಟರುಗಳು ಬೆಳಗ್ಗೆ ಆಸ್ಪತ್ರೆಗೆ ಬಂದು ಸಹಿ ಮಾಡಿ, 1ಗಂಟೆ ಇದ್ದು, ಆಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದಾರೆ: ಲಕ್ಷ್ಮಣ ಸವದಿ ವಿಷಾದ
ಬೆಳಗಾವಿಯಲ್ಲಿ ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಸರ್ಕಾರಿ ವೈದ್ಯರ ಕೆಲಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ರು. ಸರ್ಕಾರಿ ಡಾಕ್ಟರ್ಗಳು ಬೆಳಗ್ಗೆ ಆಸ್ಪತ್ರೆ ಬಂದು ಸಹಿ ಮಾಡುತ್ತಾರೆ.
ಬೆಳಗಾವಿ: ಸರ್ಕಾರಿ ಡಾಕ್ಟರ್ಗಳು ಬೆಳಗ್ಗೆ ಆಸ್ಪತ್ರೆ ಬಂದು ಸಹಿ ಮಾಡುತ್ತಾರೆ. ಕೇವಲ ಒಂದು ಗಂಟೆ ಇದ್ದು ಅವರ ಖಾಸಗಿ ಆಸ್ಪತ್ರೆ ಹೋಗಿ ಕೆಲಸ ಮಾಡುತ್ತಾರೆ ಎಂಬ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಪ್ರಶ್ನೆಗೆ ಡಾ.ಕೆ.ಸುಧಾಕರ್ ಉತ್ತರ ಕಟ್ಟಿದ್ದಾರೆ.
ಬೆಳಗಾವಿಯಲ್ಲಿ ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಸರ್ಕಾರಿ ವೈದ್ಯರ ಕೆಲಸದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ರು. ಸರ್ಕಾರಿ ಡಾಕ್ಟರ್ಗಳು ಬೆಳಗ್ಗೆ ಆಸ್ಪತ್ರೆ ಬಂದು ಸಹಿ ಮಾಡುತ್ತಾರೆ. ಕೇವಲ ಒಂದು ಗಂಟೆ ಇದ್ದು ಅವರ ಖಾಸಗಿ ಆಸ್ಪತ್ರೆ ಹೋಗಿ ಕೆಲಸ ಮಾಡುತ್ತಾರೆ. ಸಾಕಷ್ಟು ಸರ್ಕಾರಿ ವೈದ್ಯರು ತಮ್ಮ ತಮ್ಮ ಖಾಸಗಿ ಆಸ್ಪತ್ರೆಗೆ ಬರುವಂತೆ ರೋಗಿಗಳಿಗೆ ಕೇಳುತ್ತಾರೆ. ಇದರ ಬಗ್ಗೆ ಸರ್ಕಾರ ಕ್ರಮ ಏನೂ ಎಂದು ಪ್ರಶ್ನಿಸಿದ್ರು. ಈ ವೇಳೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮುಂದಿನ ದಿನಗಳಲ್ಲಿ ಅಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರು ಹಾಜರಾತಿ ಆಗುತ್ತಿದೆ. ಬೆಳಗ್ಗೆ 9:30 ರಿಂದ ಸಂಜೆ ನಾಲ್ಕು ಗಂಟೆವರೆಗೆ ಕಾರ್ಯ ನಿರ್ವಹಿಸಬೇಕು. ಅವರು ಅಲ್ಲೆ ಇರುವ ವಸತಿಯಲ್ಲಿ ಉಳಿದುಕೊಳ್ಳಬೇಕು. ಕೆಲ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ನಂತರ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವುದು ಸತ್ಯ. ಹೀಗಾಗಿ ಸರ್ಕಾರಿ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಅಂತವರಿಗೆ ಶಿಕ್ಷೆ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ಮಾಡುತ್ತೇವೆ. ಗ್ರಾಮೀಣ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ವಾರ್ಷಿಕ ಮೂರು ಲಕ್ಷಗಳ ಅನುದಾನವನ್ನು ಮುಕ್ತನಿಧಿಯನ್ನಾಗಿ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 139 ಪ್ರಾಥಮಿಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರಕ್ಕೆ ಬದ್ಧತೆ ಇದೆ ಎಂದು ಉತ್ತರಿಸಿದರು.
ಇದನ್ನೂ ಓದಿ: Akkineni Nagarjuna: ನಿಂತ ಜಾಗದಲ್ಲೇ ಸಾವಿರ ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ