Akkineni Nagarjuna: ನಿಂತ ಜಾಗದಲ್ಲೇ ಸಾವಿರ ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ

ರಾಜ್ಯ ಸಭೆಯ ಸದಸ್ಯ ಸಂತೋಷ್​ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

Akkineni Nagarjuna: ನಿಂತ ಜಾಗದಲ್ಲೇ ಸಾವಿರ ಎಕರೆ ಕಾಡನ್ನು ದತ್ತು ಪಡೆದ ಅಕ್ಕಿನೇನಿ ನಾಗಾರ್ಜುನ
ನಾಗಾರ್ಜುನ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 13, 2021 | 2:28 PM

ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಮಗ ನಾಗ ಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ನಡುವೆ ವಿಚ್ಛೇದನ ಉಂಟಾದ ನಂತರದಲ್ಲಿ ನಾಗಾರ್ಜುನ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಮಾಧ್ಯಮಗಳು ಪ್ರಶ್ನಿಸುವ ಮೊದಲೇ ಅವರು ಬೇಸರ ಹೊರಹಾಕಿದ್ದರು. ಇದರ ಜತೆಗೆ ತೆಲುಗು ಬಿಗ್​ ಬಾಸ್​ ಅನ್ನು ಯಶಸ್ವಿಯಾಗಿ ಅವರು ನಡೆಸಿಕೊಡುತ್ತಿದ್ದಾರೆ. ಈ ಮಧ್ಯೆ ಅವರು ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರದಿಂದ ಫ್ಯಾನ್ಸ್​ ಸಾಕಷ್ಟು ಖುಷಿಪಟ್ಟಿದ್ದಾರೆ.

ರಾಜ್ಯ ಸಭೆಯ ಸದಸ್ಯ ಸಂತೋಷ್​ ಜೋಗಿನಪಲ್ಲಿ ಅವರಿಗೆ ಮರಗಳ ಮೇಲೆ ಅತ್ಯಂತ ಹೆಚ್ಚು ಪ್ರೀತಿ. ಅವರು ಮರಗಳನ್ನು ಉಳಿಸಲು ಹಾಗೂ ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇವರ ಪರಿಚಯ ಅನೇಕರಿಗೆ ಇದೆ. ಗ್ರೀನ್​ ಇಂಡಿಯಾ ಚಾಲೆಂಜ್​​ ಅಡಿಯಲ್ಲಿ 16 ಕೋಟಿ ಮರಗಳನ್ನು ಅವರು ಬೆಳೆಸಿದ್ದಾರೆ. ಈ ಒಂದು ಅದ್ಭುತ ಕೆಲಸಕ್ಕೆ ಸಾಕಷ್ಟು ಸೆಲೆಬ್ರಿಟಿಗಳನ್ನೂ ಅವರು ಸೇರ್ಪಡೆ ಮಾಡಿಕೊಂಡಿದ್ದಾರೆ. ಈಗ ಈ ಸಾಲಿಗೆ ಅಕ್ಕಿನೇನಿ ನಾಗಾರ್ಜುನ ಕೂಡ ಸೇರಿಕೊಂಡಿದ್ದಾರೆ.

ಸಂತೋಷ್​ ಅವರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ತೆಲುಗು ಬಿಗ್​ ಬಾಸ್​ ವೇದಿಕೆ ಏರಿದ್ದರು. ಈ ವೇಳೆ ಪ್ರಭಾಸ್​ ಅವರು 1643 ಎಕರೆ ಅರಣ್ಯ ದತ್ತು ಪಡೆದಿದ್ದಾರೆ ಎಂದು ಸಂತೋಷ್​ ಮಾಹಿತಿ ನೀಡಿದರು. ಈ ವೇಳೆ ನಾಗಾರ್ಜುನ ಅವರು ನಿಜಕ್ಕೂ ಸಂತಸಗೊಂಡರು. ಅಲ್ಲದೆ, ನಿಂತ ಜಾಗದಲ್ಲೇ 1,000 ಎಕರೆ ಕಾಡನ್ನು ದತ್ತು ಪಡೆಯುವುದಾಗಿ ಘೋಷಿಸಿದರು. ‘ಪರಿಸರವನ್ನು ಕಾಪಾಡುವ ಜವಾಬ್ದಾರಿ ನಮ್ಮದು. ಹೀಗಾಗಿ, ಕಾಡುಗಳನ್ನು ನಾನು ದತ್ತುಪಡೆಯುತ್ತಿದ್ದೇನೆ. ಆ ಕಾಡನ್ನು ಪೋಷಿಸುವ ಹೊಣೆಯನ್ನು ನಾನು ಈಗಲೇ ಹೊತ್ತುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅವರು. ಈ ವಿಚಾರ ಕೇಳಿ ಅಭಿಮಾನಿಗಳು ಹಾಗೂ ಸಂತೋಷ್​ ಅವರು ನಿಜಕ್ಕೂ ಸಂತಸ ಪಟ್ಟಿದ್ದಾರೆ.

ನಾಗಾರ್ಜುನ ಅವರು ತೆಗೆದುಕೊಂಡ ಈ ನಿರ್ಧಾರದಿಂದ ಅನೇಕರಿಗೆ ಸ್ಫೂರ್ತಿ ಸಿಗಲಿದೆ. ಅವರ ಅಭಿಮಾನಿಗಳು ಕೂಡ ಕಾಡುಗಳನ್ನು ಪಡೆದುಕೊಳ್ಳಲು ಆಸಕ್ತಿ ತೋರಿಸುವ ಸಾಧ್ಯತೆ ಇದೆ. ಓರ್ವ ಅಭಿಮಾನಿ ಒಂದು ಎಕರೆ ಕಾಡನ್ನು ದತ್ತು ಪಡೆದರೂ ಅದರ ಒಟ್ಟಾರೆ ಸಂಖ್ಯೆ  .

ಇದನ್ನೂ ಓದಿ:ಪುನೀತ್ ಯಾವಾಗ ಸಿಕ್ಕರೂ ಒಳ್ಳೆಯ ಮಾತನ್ನಷ್ಟೇ ಆಡುತ್ತಿದ್ದರು; ಕಂಬನಿ ಮಿಡಿದ ನಾಗಾರ್ಜುನ 

ಸ್ವರ್ಗದಲ್ಲಿ ದೇವರಿಗೂ ಅವರು ಹಾಡು ಕೇಳಿಸ್ತಾರೆ ಎಂದ ಅಕ್ಕಿನೇನಿ ನಾಗಾರ್ಜುನ

Published On - 2:26 pm, Mon, 13 December 21