ವಾರದೊಳಗೆ 3 ಕೃಷಿ ಕಾಯ್ದೆ ವಾಪಸ್ ಪಡೆಯದಿದ್ರೆ ಬಾರುಕೋಲು ಚಳುವಳಿ ಮಾಡುತ್ತೇವೆ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ
ಕೇಂದ್ರ ಸರ್ಕಾರ ಈಗಾಗಲೇ 3 ಕೃಷಿ ಕಾಯ್ದೆ ವಾಪಸ್ ಪಡೆದಿವೆ. ನಿಮ್ಮ ಸಂದೇಶವನ್ನು ಸಿಎಂಗೆ ತಲುಪಿಸುತ್ತೇವೆ. ನಿಮ್ಮ ಪರವಾಗಿ ನಾವು ಮುಖ್ಯಮಂತ್ರಿ ಜತೆ ಚರ್ಚೆ ಮಾಡುತ್ತೇವೆ ಎಂದು ರೈತರ ಮನವಿ ಸ್ವೀಕರಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿ: ಕೃಷಿ ಕಾಯ್ದೆ ವಾಪಸ್ ಪಡಿಲೇ ಬೇಕು. ಇಲ್ಲದಿದ್ದರೆ ಈ ಕ್ಷಣದಿಂದಲೇ ಉಗ್ರ ಹೋರಾಟ ಆರಂಭಿಸಬೇಕಾಗುತ್ತೆ. ಕೃಷಿ ಸಚಿವರು ರೈತರನ್ನ ನಿರಾಶೆಗೊಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮತ್ತೊಂದು ಎಚ್ಚರಿಕೆ ನೀಡುತ್ತೇವೆ. ಕೃಷಿ ಕಾಯಿದೆ ವಾಪಸ್ ಪಡೆಯದಿದ್ರೆ ನಾವು ವಿಶ್ರಮಿಸಲ್ಲ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ. ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೈತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಸುವರ್ಣ ಸೌಧದ ಬಳಿಯ ಕೊಂಡಸಕೊಪ್ಪ ಗ್ರಾಮದ ಬಳಿ ಪ್ರತಿಭಟನೆ ಮಾಡಲಾಗುತ್ತಿದೆ.
ಸುವರ್ಣಸೌಧ ಬಳಿ ರೈತರ ಧರಣಿ ಸ್ಥಳಕ್ಕೆ ಸಚಿವರು ಆಗಮಿಸಿದ್ದಾರೆ. ಸರ್ಕಾರದ ಪ್ರತಿನಿಧಿಗಳಾಗಿ ಬಿ.ಸಿ. ಪಾಟೀಲ್, ಭೈರತಿ ಬಸವರಾಜ್ ಆಗಮಿಸಿದ್ದಾರೆ. ಭೂಸ್ವಾಧೀನ ತಿದ್ದುಪಡಿ ವಿಧೇಯಕ ಹಿಂಪಡೆಯುವಂತೆ ಆಗ್ರಹ ಕೇಳಿಬಂದಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಆಗ್ರಹ ಕೇಳಿಬಂದಿದೆ. ಕೇಂದ್ರ ಸರ್ಕಾರ ಈಗಾಗಲೇ 3 ಕೃಷಿ ಕಾಯ್ದೆ ವಾಪಸ್ ಪಡೆದಿವೆ. ನಿಮ್ಮ ಸಂದೇಶವನ್ನು ಸಿಎಂಗೆ ತಲುಪಿಸುತ್ತೇವೆ. ನಿಮ್ಮ ಪರವಾಗಿ ನಾವು ಮುಖ್ಯಮಂತ್ರಿ ಜತೆ ಚರ್ಚೆ ಮಾಡುತ್ತೇವೆ ಎಂದು ರೈತರ ಮನವಿ ಸ್ವೀಕರಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇಂದು ಅಧಿವೇಷನದಲ್ಲಿ ಏನೂ ಚರ್ಚೆ ಆಗಿಲ್ಲ. ಸಂತಾಪ ಸೂಚಿಸಲು ಸಭೆ ಸೀಮಿತ ಆಗಿತ್ತು. ಇನ್ನೂ ಹತ್ತು ದಿನ ನಾವು ಇಲ್ಲೇ ಇರಬೇಕು. ನಿಮಗೆ ನಿಜವಾಗ್ಲೂ ನಿರಾಶೆ ಆಗೋಕೆ ಕೊಡಲ್ಲ. ದಯವಿಟ್ಟು ಪ್ರತಿಭಟನೆ ಹಿಂಪಡೆಯಿರಿ. ಸಿಎಂ ವಾರಣಾಸಿಯಿಂದ ಬಂದ ನಂತರ ಚರ್ಚೆ ಮಾಡೋಣ ಎಂದು ಭೈರತಿ ಬಸವರಾಜ ಹೇಳಿಕೆ ನೀಡಿದ್ದಾರೆ.
ವಾರದೊಳಗೆ 3 ಕೃಷಿ ಕಾಯ್ದೆ ವಾಪಸ್ ಪಡೆಯದಿದ್ರೆ ಬಾರುಕೋಲು ಚಳವಳಿ ಮಾಡುತ್ತೇವೆ ಸರ್ಕಾರಕ್ಕೆ ಒಂದು ವಾರಗಳ ಕಾಲ ಗಡುವು ನೀಡೋಣ. ವಾರದೊಳಗೆ 3 ಕೃಷಿ ಕಾಯ್ದೆ ವಾಪಸ್ ಪಡೆಯಬೇಕು. ಕಾಯ್ದೆ ವಾಪಸ್ ಪಡೆಯದಿದ್ರೆ ಬಾರುಕೋಲು ಚಳವಳಿ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 20ರಂದು ಬಾರುಕೋಲು ಚಳವಳಿಯ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಬಾರುಕೋಲು ಚಳವಳಿ ಮಾಡುವುದಾಗಿ ಹೇಳಿದ್ದಾರೆ.
ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಧರಣಿ ನಡೆಸಲಾಗಿದೆ. ಬೆಳಗಾವಿಯ ಸುವರ್ಣಸೌಧದ ಬಳಿ ರೈತರಿಂದ ಪ್ರತಿಭಟನೆ ಮಾಡಲಾಗಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ಧ ರೈತ ಶೇಖಪ್ಪ ಗರಂ ಆಗಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಚಕ್ಕಂದ ಆಡೋಕೆ ಬಂದಿದ್ದಾನೆ. ನಮ್ಮ ಬೆಳೆ ಹಾಳು ಆದಾಗ ಯಾವ ಒಬ್ಬನ್ನೂ ಭೇಟಿ ನೀಡಿಲ್ಲ. ಅವನು ನಾವು ರೈತರು ಅಲ್ಲ ಎಂದು ಹೇಳುತ್ತಾನೆ. ಅವನಿಗೆ ಸೀರೆ ಉಡಿಸಿದ್ರೆ ಹೆಂಗಸು ಅಲ್ಲ ಅತ್ತ ಗಂಡಸು ಅಲ್ಲ. ಎಷ್ಟು ಮಂದಿ ಜೈಲಿಗೆ ಹಾಕತ್ತಾನೆ ನಾನು ನೋಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ: ಕಳೆದ 2 ವರ್ಷಗಳಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗಿಲ್ಲ ಕಳೆದ 2 ವರ್ಷಗಳಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗಿಲ್ಲ. ಸಂಸ್ಥೆಯ ನೌಕರರು ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಬದಲಿಗೆ ಹೋರಾಟ ನಡೆಸಿದ ನೌಕರರಿಗೆ ತೊಂದರೆಗಳಾಗಿವೆ. ಹೋರಾಟದ ಪ್ರತಿಫಲವಾಗಿ 5 ಸಾವಿರ ನೌಕರರ ಅಮಾನತು ಮಾಡಲಾಗಿದೆ. ಆದರೆ, ವೇತನ ಪರಿಷ್ಕರಣೆ ಆಗಿಲ್ಲ. ವರ್ಗಾವಣೆ ಮಾಡಿದ ಎಲ್ಲರಿಗೂ ಮಾತೃಸಂಸ್ಥೆಗೆ ವಾಪಸ್ ತರಬೇಕು. ಕೊವಿಡ್ ಕಾರಣಕ್ಕೆ ನಿಲ್ಲಿಸಿದ ವಿವಿಧ ಭತ್ಯೆಗಳನ್ನ ನೀಡಬೇಕು ಎಂದು ಸಾರಿಗೆ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಯಾದಗಿರಿ ಜಿಲ್ಲಾ ಘಟಕದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಇದನ್ನೂ ಓದಿ: ಕಾರ್ಖಾನೆಗಳಿಗೆ ವಿದ್ಯುತ್ ಬಿಲ್ ವಿನಾಯಿತಿ ನೀಡಿದಂತೆ ಧಾರ್ಮಿಕ ಕೇಂದ್ರಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಪರಿಷತ್ನಲ್ಲಿ ಮನವಿ
ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭ; ವಿಧಾನಸಭೆ ಕಲಾಪ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Mon, 13 December 21