AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವ ಅಂಗವಾಗಿ ಜ 14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ: ಈ ಬಾರಿ ಥೀಮ್ ಯಾವುದು? ಟಿಕೆಟ್​ ದರವೆಷ್ಟು?

ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ 2026: ಗಣರಾಜ್ಯೋತ್ಸವ ಅಂಗವಾಗಿ ಈ ಬಾರಿ 13 ದಿನಗಳ ಕಾಲ ಲಾಲ್​​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಹಾಗಾದರೆ ಫ್ಲವರ್ ಶೋನ ಥೀಮ್, ಯಾವಾಗ ಆರಂಭ ಮತ್ತು ಟಿಕೆಟ್ ದರ ಸೇರಿ ಎಲ್ಲದರ ಮಾಹಿತಿ ಇಲ್ಲಿದೆ.

ಗಣರಾಜ್ಯೋತ್ಸವ ಅಂಗವಾಗಿ ಜ 14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ: ಈ ಬಾರಿ ಥೀಮ್ ಯಾವುದು? ಟಿಕೆಟ್​ ದರವೆಷ್ಟು?
ಫ್ಲವರ್ ಶೋಗೆ ಸಿದ್ಧತೆ ನಡೆದಿರುವುದು
ಗಂಗಾಧರ​ ಬ. ಸಾಬೋಜಿ
| Edited By: |

Updated on:Jan 13, 2026 | 12:40 PM

Share

ಬೆಂಗಳೂರು, ಜನವರಿ 12: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ (Flower Show)  ಅನಾವರಣಗೊಳ್ಳಲಿದೆ. ಗಣರಾಜ್ಯೋತ್ಸವ (Republic Day) ದಿನಾಚರಣೆ ಅಂಗವಾಗಿ ತೋಟಗಾರಿಕಾ ಇಲಾಖೆ ಜನವರಿ 14ರಿಂದ 26ರವರೆಗೆ 219ನೇ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದ್ದು, ಜ.14ರ ಸಂಜೆ 4 ಗಂಟೆಗೆ ಸಿಎಂ, ಡಿಸಿಎಂ ಮತ್ತು ಪೂರ್ಣಚಂದ್ರ ತೇಜಸ್ವಿ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್​ ಹೇಳಿದ್ದಿಷ್ಟು

ಫ್ಲವರ್ ಶೋ ಆಯೋಜನೆ ಬಗ್ಗೆ ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಜ.14ರಂದು ಉದ್ಘಾಟನೆ ಬಳಿಕ ಸಂಜೆ 5 ಗಂಟೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಇದು 219ನೇ ಫಲಪುಷ್ಪ ಪ್ರದರ್ಶನ. ಮೊದಲನೇ ಪ್ರದರ್ಶನ 1912ರಲ್ಲಿ ನಡೆದಿತ್ತು ಎಂದರು.

ಫ್ಲವರ್ ಶೋನಲ್ಲಿ ಏನೆಲ್ಲಾ ಇರಲಿದೆ

ಪರಿಸರ, ಪ್ರಾಣಿ-ಪಕ್ಷಿಗಳ ಪ್ರೇಮಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕುರಿತು ಈ ಭಾರಿಯ ಪ್ಲವರ್ ಶೋ ಇರಲಿದೆ. ಗಾಜಿನ ಮನೆಯಲ್ಲಿ ಬೃಹತ್ ಬೆಟ್ಟ, ನೀರಿನ ಹರಿ, ಪ್ರಾಣಿ ಪಕ್ಷಿಗಳಿಂದ ಕಂಗೊಳಿಸಲಿದೆ. ತೇಜಸ್ವಿ ಹಾಗೂ ಮಡದಿಯ ಪ್ರತಿಕೃತಿ, ಕರ್ವಾಲೋ ಕಾದಂಬರಿ ಕಾಲ್ಪನಿಕ ಚಿತ್ರಣ, ಬಿಳಿಗಿರ ರಂಗನ ಬೆಟ್ಟದ ಹಳ್ಳಿ ಸೊಗಡು, ಜಾನಪದ, ಡೊಳ್ಳು ಕುಣಿತ, ನಂದಿಗಿರಿಧಾಮ, ನಾರುಬೇರಿನ ಪ್ರದರ್ಶನ ಇರಲಿದೆ.

ಇದನ್ನೂ ಓದಿ: 11 ದಿನಗಳ ಕಬ್ಬನ್ ಪಾರ್ಕ್​​ ಪುಷ್ಪಮೇಳಕ್ಕೆ ಚಾಲನೆ: ಕಣ್ಮನ ಸೆಳೆದ ಬಗೆ ಬಗೆಯ ಹೂಗಳು

ತಮಿಳುನಾಡು, ಕೇರಳ, ಮಹಾರಾಷ್ಟ, ಡಾರ್ಜಿಲಿಂಗ್, ವಯನಾಡು ಕಡೆಯಿಂದ ಹೂಗಳು ಬರಲಿವೆ. 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 32 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗುವುದು. ಈ ಬಾರಿ ಲಾಲ್​ಬಾಗ್​ನಲ್ಲಿ ಬೆಳೆದಿರುವ 27 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರವೇಶ ಶುಲ್ಕ ಎಷ್ಟು?

ಇನ್ನು ಲಾಲ್​​ಬಾಗ್​ ಫ್ಲವರ್ ಶೋಗೆ ಟಿಕೆಟ್​ ದರ ನಿಗದಿ ಮಾಡಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ರಜೆ ದಿನಗಳಲ್ಲಿ 100 ರೂ ಟಿಕೆಟ್ ದರ ಇರಲಿದ್ದು, ಮಕ್ಕಳಿಗೆ 30 ರೂ, 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಅಷ್ಟೇ ಅಲ್ಲದೆ ಫಲಫುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಇಂದಿನಿಂದ ಡಿಸೆಂಬರ್ 7ರವರೆಗೆ ಕಬ್ಬನ್ ಪಾರ್ಕ್​ನಲ್ಲಿ ಫ್ಲವರ್ ಶೋ!

ಕಳೆದ ಬಾರಿ 3 ಕೋಟಿ 5 ಲಕ್ಷ ರೂ ಆದಾಯ ಬಂದಿತ್ತು. ಈ ಬಾರಿ 3 ಕೋಟಿ 2 ಲಕ್ಷ ರೂ ಖರ್ಚು ಮಾಡಿ ಫಲಪುಷ್ಪ ಪ್ರದರ್ಶನ ಮಾಡಲಾಗುತ್ತಿದ್ದು, 10 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ ಎಂದು  ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್ ಹೇಳಿದ್ದಾರೆ.

ವರದಿ: ನಟರಾಜ್​​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 4:16 pm, Mon, 12 January 26

ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ