ಬೆಂಗಳೂರು ರಸ್ತೆ ಟೀಕೆ ಬೆನ್ನಲ್ಲೇ ಡಿಕೆಶಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮೋಹನ್ ದಾಸ್ ಪೈ!
ಸದ್ಯ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಮತ್ತೆ ಭಾರಿ ಸದ್ದು ಮಾಡುತ್ತಿದೆ. ನಗರದ ರಸ್ತೆ ಸಂಬಂಧ ಉದ್ಯಮಿಗಳು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದರು. ಅದರಲ್ಲೂ ಕಿರಣ್ ಮಜುಂದಾರ್ ಶಾ ಹಾಗೂ ಮೋಹನ್ ದಾಸ್ ಪೈ ಬೆಂಗಳೂರಿನ ರಸ್ತೆ ಗುಂಡಿ, ಟ್ರಾಫಿಕ್ ಹಾಗೂ ಮೂಲಸೌಕರ್ಯಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಆದ್ರೆ, ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಇದೀಗ ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ.

ಬೆಂಗಳೂರು, (ಅಕ್ಟೋಬರ್ 26): ಬೆಂಗಳೂರು ನಗರ ಅಭಿವೃದ್ಧಿಯ (bengaluru development) ವಿಚಾರವಾಗಿ ಉದ್ಯಮಿಗಳ ಟೀಕೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು.. ಡಿಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ‘ನಾಗರಿಕರೊಂದಿಗೆ ನಡಿಗೆ’ ಕಾರ್ಯಕ್ರಮ ನಡೆಸಿದ್ದು, ಈ ಮೂಲಕ ಜನರ ಜೊತೆ ಸಂವಾದ, ಕುಂದುಕೊರತೆ ಆಲಿಸಿತ್ತಿದ್ದಾರೆ. ಇದಕ್ಕೆ ಇದೀಗ ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಅವರಂತಹ ಪ್ರಮುಖರು ಡಿಕೆ ಶಿವಕುಮಾರ್ ಅವರನ್ನ ಶ್ಲಾಘಿಸಿ ಗುಣಗಾನ ಮಾಡಿದ್ದಾರೆ.
ನಿನ್ನೆ (ಅಕ್ಟೋಬರ್ 25) ರಾತ್ರಿ ನಡೆದ ವಿಶೇಷ ಡಿನ್ನರ್ ಮೀಟಿಂಗ್ ವೇಳೆ ಡಿಕೆ ಶಿವಕುಮಾರ್ ಅವರು ನಗರದಲ್ಲಿನ ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಅವರ ವಿಶ್ವಾಸವನ್ನು ಗಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಹಾಗೂ ಹೂಡಿಕೆ ವಾತಾವರಣ ಕುರಿತಂತೆ ಉದ್ಯಮಿಗಳಿಂದ ಹಲವು ಸಲಹೆಗಳನ್ನು ಪಡೆದುಕೊಂಡರು. ಅಲ್ಲದೇ ತಮ್ಮ ಕಾರ್ಯಕ್ರಮಗಳ ಬಗ್ಗೆಯೂ ಉದ್ಯಮಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಪೈಕಿ “ನಾಗರೀಕರೊಂದಿಗೆ ನಡಿಗೆ” ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಡೇಟಾ ಸೆಂಟರ್ ತೆರೆಯುತ್ತಿದೆ: ಆದ್ರೆ ನಾವು ರಸ್ತೆಗುಂಡಿ ಮುಚ್ಚಲು ಕಷ್ಟಪಡುತ್ತಿದ್ದೇವೆ; ಮೋಹನ್ ದಾಸ್ ಪೈ
ಡಿಕೆ ಶಿವಕುಮಾರ್ ಅವರ “ನಾಗರೀಕರೊಂದಿಗೆ ನಡಿಗೆ” ಈ ಕಾರ್ಯಕ್ರಮದ ಮೂಲಕ ಜನರ ಮಧ್ಯೆ ತೆರಳಿ, ಅವರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಹಾರ ನೀಡುತ್ತಿರುವುದಕ್ಕೆ ಉದ್ಯಮಿಗಳು ಶ್ಲಾಘಿಸಿದ್ದಾರೆ. ಅದರಲ್ಲೂ ಹಿಂದೆ ಸರ್ಕಾರವನ್ನು ಟೀಕೆ ಮಾಡಿದ್ದ ಉದ್ಯಮಿ ಮೋಹನ್ ದಾಸ್ ಪೈ ಅವರು ಸಾಮಾಜಿಕ ಜಾಲತಾಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಮೆಚ್ಚುಗೆಯ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಎಕ್ಸ್’ ಖಾತೆಯಲ್ಲಿ ಶ್ಲಾಘಿಸಿದ ಉದ್ಯಮಿ ಮೋಹನ್ ದಾಸ್ ಪೈ, ಜನರ ಜೊತೆ ಸಂವಾದ, ಕುಂದುಕೊರತೆ ಆಲಿಸಿದ್ದು ಒಳ್ಳೆಯ ಕಾರ್ಯ. ಜನರ ಸಮಸ್ಯೆಗಳನ್ನು ಬಗೆಹರಿಸುವುದು ಒಳ್ಳೆಯ ನಾಯಕನ ಕೆಲಸ. ನಿಮ್ಮ ಈ ಕೆಲಸ ಜನರು, ನಾಯಕರ ನಡುವಿನ ಸೇತುವೆ ಇದ್ದಂತೆ. ಕಳೆದ ಮೂರು ತಿಂಗಳಿಂದ ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಮಹತ್ವದ ಯೋಜನೆ ಕೈಗೊಂಡಿದ್ದೀರಿ. ಜಿಬಿಎ ರಚನೆ ಮಾಡಿದ್ದು ಅತೀ ದೊಡ್ಡ ಕೊಡುಗೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯವನ್ನು ಹಾಡಿಹೊಗಳಿದ್ದಾರೆ.
Thank you DCM @DKShivakumar for this wonderful initiative.meeting citizens,understanding their issues,giving succour to them,solving their problems is the tasks of great political leaders. you interactions are bridging the gap between voters and their representatives. You have… https://t.co/FiAkwaLefp
— Mohandas Pai (@TVMohandasPai) October 26, 2025
ನಗರದ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಸುಧಾರಣೆ, ಮೂಲಸೌಕರ್ಯ ವಿಸ್ತರಣೆ ಸೇರಿದಂತೆ ಹಲವು ವಿಷಯಗಳಲ್ಲಿ ಡಿಕೆ ಶಿವಕುಮಾರ್ ಕೈಗೊಂಡಿರುವ ಕ್ರಮಗಳಿಗೆ ಉದ್ಯಮಿಗಳಿಂದ ಮೆಚ್ಚುಗೆ ಬಂದಿದ್ದು, ಈ ಮೂಲಕ ಡಿಕೆ ಶಿವಕುಮಾರ್ ಅವರ ಇಮೇಜ್ ಬದಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




