ದೊಡ್ಡಬಳ್ಳಾಪುರ: ಅಯ್ಯೋ ವಿಧಿಯೇ! ಬೆಕ್ಕು ರಕ್ಷಿಸಲು ಹೋಗಿ ಪ್ರಾಣ ತೆತ್ತ ಯುವಕ
ಮರದಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಇನ್ನೂ ಬಾಳಿ ಬದುಕಬೇಕಾಗಿದ್ದ 25 ವರ್ಷದ ಯುವಕ ಪ್ರಾಣ ತೆತ್ತಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಹಾಲಿನ ಡೇರಿ ಬಳಿ ಈ ದುರ್ಘಟನೆ ನಡೆದಿದೆ. ಅಷ್ಟಕ್ಕೂ ಯುವಕನಿಗೆ ಆಗಿದ್ದೇನು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಸೆಪ್ಟೆಂಬರ್ 22): ಮರದಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕನ್ನು(Cat) ರಕ್ಷಿಸಲು ಹೋಗಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ(doddaballapur) ಹಾಲಿನ ಡೇರಿ ಬಳಿ ನಡೆದಿದೆ. ರೋಷನ್(25) ಮೃತ ದುರ್ವೈವಿ. ಡೇರಿ ಮುಂಭಾಗ ಕಾರು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ರೋಷನ್, ಬೆಕ್ಕು ಮರದಲ್ಲಿ ಸಿಲುಕಿ ಪರದಾಡುತ್ತಿರುವುದನ್ನು ಕಂಡು ರಕ್ಷಣೆಗೆ ಮುಂದಾಗಿದ್ದಾನೆ. ಆದ್ರೆ, ಮರವೇರಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ರೋಷನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ನಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ದೊಡ್ಡಬಳ್ಳಾಪುರದ ಹಾಲಿನ ಡೈರಿ ಮುಂಭಾಗ ಇರುವ ಕಾರು ಗ್ಯಾರೇಜ್ ನಲ್ಲಿ ರೋಷನ್ ಕೆಲಸ ಮಾಡುತ್ತಿದ್ದ. ಆದ್ರೆ, ರೋಷನನ್ನು ವಿಧಿ ಹೇಗೆ ಕರೆದುಕೊಂಡಿದೆ ನೋಡಿ. ಬೆಕ್ಕು ಮರದಲ್ಲಿ ಸಿಲುಕಿ ಪರದಾಡುತ್ತಿದ್ದನ್ನು ಮರುಗಿದ ರೋಷನ್, ಮರವೇರಿ ಬೆಕ್ಕು ರಕ್ಷಣೆ ಮಾಡಲು ಹೋಗಿದ್ದಾನೆ. ಆದ್ರೆ, ದುರದೃಷ್ಟವಶಾತ್ ಈ ವೇಳೆ ವಿದ್ಯುತ್ ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಇನ್ನು ಘಟನಾ ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.