AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಕಿ ಜೀವನಕ್ಕಾಗಿ ಕಳ್ಳತನ: ಬರೋಬ್ಬರಿ 32 ಬೈಕ್ ಕದ್ದಿದ್ದ ಆಸಾಮಿ ಸಿಕ್ಕಿಬಿದ್ದ

ದೇವನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆಂಧ್ರಪ್ರದೇಶ ಮೂಲದ ಬೈಕ್​ ಕಳ್ಳನನ್ನು ಅರೆಸ್ಟ್​ ಮಾಡಿದ್ದಾರೆ. ಆರೋಪಿ ನಕಲಿ ಕೀ ಬಳಸಿ ಬೈಕ್ ಕದ್ದು ಪರಾರಿಯಾಗುತ್ತಿದ್ದ. ಶೋಕಿ ಜೀವನ ನಡೆಸಲು ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಸದ್ಯ ಬಂಧಿತ ಆರೋಪಿಯಿಂದ 10 ವಿವಿಧ ಬೈಕ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಶೋಕಿ ಜೀವನಕ್ಕಾಗಿ ಕಳ್ಳತನ: ಬರೋಬ್ಬರಿ 32 ಬೈಕ್ ಕದ್ದಿದ್ದ ಆಸಾಮಿ ಸಿಕ್ಕಿಬಿದ್ದ
ಬಂಧಿತ ಆರೋಪಿ
ನವೀನ್ ಕುಮಾರ್ ಟಿ
| Edited By: |

Updated on: Aug 26, 2025 | 5:23 PM

Share

ದೇವನಹಳ್ಳಿ, ಆಗಸ್ಟ್ 26: ನಕಲಿ ಕೀ ಬಳಸಿ ಸುಮಾರು 32 ಬೈಕ್​ಗಳನ್ನು ಕಳ್ಳತನ (theft) ಮಾಡಿದ್ದ ಖದೀಮನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬೈಕ್​ ಕದ್ದು ಪರಾರಿಯಾಗುತ್ತಿದ್ದ ಆಂದ್ರ ಮೂಲದ ಆನಂದ್​ ಬಂಧಿತ ಆರೋಪಿ. ದೇವನಹಳ್ಳಿ (Devanahalli) ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್​ ಮಾಡಲಾಗಿದ್ದು, 22 ಸ್ಪ್ಲೆಂಡರ್​ ಬೈಕ್​, 10 ವಿವಿಧ ಬೈಕ್​ಗಳನ್ನು ಸೀಜ್ ಮಾಡಲಾಗಿದೆ.​

ಬಂಧಿತ ಆರೋಪಿ ಆನಂದ್​, ದೇವನಹಳ್ಳಿ ಸೇರಿದಂತೆ ನಗರದಲ್ಲಿ ನಕಲಿ ಕೀ ಬಳಸಿ ಬೈಕ್​ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕ್​ಗಳನ್ನು 10 ರಿಂದ 20 ಸಾವಿರ ರೂ ಮಾರುತ್ತಿದ್ದ. ಶೋಕಿ ಜೀವನ ನಡೆಸುತ್ತಿದ್ದ. ಈ ಹಿಂದೆಯೂ ಬೈಕ್​ ಕದ್ದು ಜೈಲು ಸೇರಿದ್ದ. ಬಳಿಕ ಬೇಲ್​ ಮೇಲೆ ಹೊರಬಂದು ಮತ್ತೆ ಕಳ್ಳತನಕ್ಕೆ ಇಳಿದ್ದಿದ್ದ. ಇದೀಗ ಮತ್ತೊಮ್ಮೆ ಲಾಕ್​ ಆಗಿದ್ದಾನೆ.

230 ಗ್ರಾಂ ಚಿನ್ನಾಭರಣ ಕಳ್ಳತನ: ಆರೋಪಿ ಅಂದರ್​

ಬೇಗೂರು ಪೊಲೀಸರಿಂದ ಮನೆಕಳವು ಆರೋಪಿ ಬಂಧಿಸಿರುವಂತಹ ಘಟನೆ ನಡೆದಿದೆ. ಶಾಂತಕುಮಾರ್ ಅಲಿಯಾಸ್ ಶಾಂತ ಬಂಧಿತ ಆರೋಪಿ. ಓರ್ವ ನಾಪತ್ತೆ ಆಗಿದ್ದಾನೆ. 230 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಸಾಲ ಕೊಟ್ಟವರ ಮನೆಯಲ್ಲೇ ಕನ್ನ; ತಂಗಿ ಕೃತ್ಯಕ್ಕೆ ಅಣ್ಣ ಸಾಥ್,​ ಆರು ಜನರ ಬಂಧನ

ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಕೆ.ಜಿ.ಎಫ್​ನಿಂದ ಟ್ರೈನ್​ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು. ಸದ್ಯ ಶಾಂತ್ ಕುಮಾರ್ ಸ್ನೇಹಿತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಗಳ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಚಿತ್ರದುರ್ಗದಲ್ಲಿ ಇಬ್ಬರು ಬೈಕ್​​ ಕಳ್ಳರ ಬಂಧನ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಹೊಸದುರ್ಗ ಠಾಣೆ ಸಿಪಿಐ ರಮೇಶ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಚಿತ್ರದುರ್ಗ ಮೂಲದ ದಾದಾಪೀರ್ ಮತ್ತು ನಬೀವುಲ್ಲಾ ಎಂಬುವವರನ್ನು ಅರೆಸ್ಟ್​ ಮಾಡಲಾಗಿದೆ. ಬಂಧಿತರಿಂದ 7ಲಕ್ಷ ರೂ. ಮೌಲ್ಯದ ಒಟ್ಟು 11ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​