AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೇಕಲ್​ನಲ್ಲಿ ರೈತನ ಗ್ರೀನ್ ಹೌಸ್ ಧ್ವಂಸಗೊಳಿಸಿದ ಕಿಡಿಗೇಡಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ರೈತರೊಬ್ಬರ ಗ್ರೀನ್​ ಹೌಸ್​ ಅನ್ನು ಧ್ವಂಸಗೊಳಿಸಲಾಗಿದೆ. ರೈತ ಕಾರ್ತಿಕ್ ರೆಡ್ಡಿ ಅವರು ತಮ್ಮ ಜಮೀನಿನಲ್ಲಿರುವ ಗ್ರೀನ್​ ಹೌಸ್ ಅನ್ನು ಗುತ್ತಿಗೆ ನೀಡಲು ನಿರಾಕರಿಸಿದ್ದರಿಂದ ಈ ಘಟನೆ ನಡೆದಿದೆ. ಆರೋಪಿಗಳು ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್​ನಲ್ಲಿ ರೈತನ ಗ್ರೀನ್ ಹೌಸ್ ಧ್ವಂಸಗೊಳಿಸಿದ ಕಿಡಿಗೇಡಿಗಳು
ರೈತನ ಗ್ರೀನ್ ಹೌಸ್ ಧ್ವಂಸ
ರಾಮು, ಆನೇಕಲ್​
| Edited By: ವಿವೇಕ ಬಿರಾದಾರ|

Updated on:Jul 16, 2025 | 5:18 PM

Share

ಆನೇಕಲ್, ಜುಲೈ 16: ಗುತ್ತಿಗೆ ನೀಡಲಿಲ್ಲ ಅಂತ ರೈತರೊಬ್ಬರ (Farmer) ಗ್ರೀನ್​ ಹೌಸ್ ಧ್ವಂಸಗೊಳಿಸಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಸಿಂಗಸಂದ್ರ ಗ್ರಾಮದಲ್ಲಿ ನಡೆದಿದೆ. ರೈತ ಕಾರ್ತಿಕ್ ರೆಡ್ಡಿ ಎಂಬುವರಿಗೆ ಸೇರಿದ ಒಂದು ಎಕರೆಯಲ್ಲಿದ್ದ ಗ್ರೀನ್​ಹೌಸ್​ ಅನ್ನು ಆರೋಪಿಗಳಾದ ಹಾರಗದ್ದೆ ಅಣ್ಣಯಪ್ಪ, ಶ್ರೀಧರ್ ಮತ್ತು ಮುರಳಿ ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ. ಕಾರ್ತಿಕ್ ರೆಡ್ಡಿ ಅವರು ಪ್ರಭಾವತಿ ಎಂಬುವರಿಂದ ಜಮೀನು ಖರೀದಿಸಿದ್ದರು. ಈ ಜಮೀನಿನಲ್ಲಿದ್ದ ಗ್ರೀನ್ ಹೌಸ್ ಅನ್ನು ಕಡಿಮೆ ಬೆಲೆಗೆ ಗುತ್ತಿಗೆಗೆ ನೀಡುವಂತೆ ಆರೋಪಿಗಳು ಕಾರ್ತಿಕ್ ರೆಡ್ಡಿ ಅವರ ಬಳಿ ಅತಿ ಕಡಿಮೆ ಬೆಲೆಗೆ ಕೇಳಿದ್ದಾರೆ.

ಅದಕ್ಕೆ, ಕಾರ್ತಿಕ್​ ರೆಡ್ಡಿ ಅವರು ಗುತ್ತಿಗೆ ಕೊಡಲ್ಲ ಎಂದಿದ್ದಾರೆ. ಆಗ ಆರೋಪಿಗಳು ಜಮೀನು ಮಾರಾಟ ಮಾಡುವಂತೆ ಧಮ್ಕಿ ಹಾಕಿದ್ದಾರೆ. ಅಲ್ಲದೆ, ರೌಡಿಶೀಟರ್​ಗಳನ್ನು ಕರೆಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ, ಆರೋಪಿಗಳು ಒಂದು ವಾರದ ಹಿಂದೆ ರೌಡಿಗಳನ್ನು ಕರೆಸಿ ಗ್ರೀನ್ ಹೌಸ್ ಧ್ವಂಸಗೊಳಿಸಿದ್ದಾರೆ. ಪ್ರಶ್ನಿಸಲು ಹೋದ ಕಾರ್ತಿಕ್ ರೆಡ್ಡಿ ಕುಟುಂಬದವರ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿ ರಕ್ಷಣೆ ನೀಡುವಂತೆ ರೈತ ಕುಟುಂಬ ಒತ್ತಾಯಿಸಿದೆ.

ಇದನ್ನೂ ಓದಿ: ಸ್ನೇಹಿತನ ಮನೆಗೆ ಹೋಗಿದ್ದ ಮಹಿಳೆಗೆ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ

ಲೈನ್ ಮ್ಯಾನ್ ಮೇಲೆ ಮಾರಣಾಂತಿಕ ಹಲ್ಲೆ

ನೆಲಮಂಗಲ: ಲೈನ್​ ಮ್ಯಾಬ್​ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಲೈನ್ ಮ್ಯಾನ್ ಮಧು ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಇಫಾಯತ್ ಖಾನ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ರಾಡ್​ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನೆಲಮಂಗಲ ತಾಲೂಕಿನ ಇಸ್ಲಾಂಪುರ 7ನೇ ಕ್ರಾಸ್ ಡಬಲ್ ಟಿಸಿ ಬಳಿ ಘಟನೆ ನಡೆದಿದೆ. ಮುರಿದ ಕಂಬ ಸರಿ ಮಾಡಲು ಹೋಗಿದ್ದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಲೈನ್ ಮ್ಯಾನ್ ಮಧು ತಲೆ ಹಾಗೂ ಕಿವಿಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Wed, 16 July 25

Follow Us
ರಾಮು, ಆನೇಕಲ್​
ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಗೃಹಲಕ್ಷ್ಮೀ, ಗೃಹಜ್ಯೋತಿಗೆ ಹೊಸ ಅರ್ಜಿಗೆ ಏನೇನು ದಾಖಲೆ ಬೇಕು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಸಹೋದರನಿಗೆ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಪ್ಪಿದಕ್ಕೆ ಸಾಹುಕಾರ್ ಹೇಳಿದ್ದೇನು?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ?
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಕಿರುಕುಳ ತಾಳಲಾರದೇ ಅಧಿಕಾರಿಯ ಮುಖಕ್ಕೆ ರಾಜೀನಾಮೆ ಬಿಸಾಕಿದ ಲೇಡಿ ಸಿಬ್ಬಂದಿ
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಬೆಂಗಳೂರಿನಲ್ಲಿ ಒಂದೇ ಒಂದು ಮಳೆಗೆ ತುಂಬಿ ಹರಿಯುತ್ತಿರೋ ಹಳ್ಳ ಕೊಳ್ಳಗಳು!
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು!
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ
ಗೃಹಲಕ್ಷ್ಮಿ ಅಲ್ಲ ಚುನಾವಣಾ ಲಕ್ಷ್ಮೀ: ವಿಜಯೇಂದ್ರ ವ್ಯಂಗ್ಯ