AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೆದ್ದಿ’ ಸಿನಿಮಾ ವಿವಾದ, ನಿರ್ದೇಶಕನೇ ಸರಿ ಎಂದ ಚಿತ್ರಸಾಹಿತಿ

Janhvi Kapoor in Peddi: ‘ಪೆದ್ದಿ’ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಸನಾ, ಕ್ಷಮೆ ಕೇಳಿದ್ದು ಮಾತ್ರವಲ್ಲದೆ, ಜಾನ್ಹವಿಯ ಗ್ಲಾಮರಸ್ ದೃಶ್ಯಗಳನ್ನು ಕತ್ತರಿಸಿ, ನಾಯಕಿಯ ಕೆಲವು ಭಾವುಕ ಸನ್ನಿವೇಶಗಳನ್ನು ಸಿನಿಮಾಕ್ಕೆ ಸೇರಿಸಿದ್ದಾರೆ. ಆದರೆ ಇದೀಗ ಸಿನಿಮಾಕ್ಕೆ ಹಾಡುಗಳನ್ನು ಬರೆದಿರುವ ಚಿತ್ರಸಾಹಿತಿ ಅನಂತ್ ಶ್ರೀರಾಮ್, ಸಿನಿಮಾನಲ್ಲಿ ಜಾನ್ಹವಿಯ ಪಾತ್ರವನ್ನು ಗ್ಲಾಮರೈಸ್ ಮಾಡಿ ತೋರಿಸಿದ್ದು ತಪ್ಪಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

‘ಪೆದ್ದಿ’ ಸಿನಿಮಾ ವಿವಾದ, ನಿರ್ದೇಶಕನೇ ಸರಿ ಎಂದ ಚಿತ್ರಸಾಹಿತಿ
Peddi Controversy
ಮಂಜುನಾಥ ಸಿ.
|

Updated on: Jun 14, 2026 | 10:19 PM

Share

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ದೊಡ್ಡ ಮೊತ್ತದ ಗಳಿಕೆಯನ್ನು ಮಾಡಿದೆ. ಆದರೆ ಸಿನಿಮಾನಲ್ಲಿ ನಾಯಕಿ ಜಾನ್ಹವಿ ಕಪೂರ್ ಅವರನ್ನು ಅತಿಯಾಗಿ ಗ್ಲಾಮರೈಸ್ ಮಾಡಿ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ, ಕ್ಷಮೆ ಕೇಳಿದ್ದು ಮಾತ್ರವಲ್ಲದೆ, ಗ್ಲಾಮರಸ್ ದೃಶ್ಯಗಳನ್ನು ಕತ್ತರಿಸಿ, ನಾಯಕಿಯ ಕೆಲವು ಭಾವುಕ ಸನ್ನಿವೇಶಗಳನ್ನು ಸಿನಿಮಾಕ್ಕೆ ಸೇರಿಸಿದ್ದಾರೆ. ಆದರೆ ಇದೀಗ ಸಿನಿಮಾಕ್ಕೆ ಹಾಡುಗಳನ್ನು ಬರೆದಿರುವ ಚಿತ್ರಸಾಹಿತಿ ಅನಂತ್ ಶ್ರೀರಾಮ್, ಸಿನಿಮಾನಲ್ಲಿ ಜಾನ್ಹವಿಯ ಪಾತ್ರವನ್ನು ಗ್ಲಾಮರೈಸ್ ಮಾಡಿ ತೋರಿಸಿದ್ದು ತಪ್ಪಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮಗಳನ್ನು ನಿರ್ದೇಶಕ ಬುಚ್ಚಿಬಾಬು ಸನಾ ಮಾಡುತ್ತಿದ್ದು, ಖುದ್ದು ತಾವೇ ಸುದ್ದಿಗೋಷ್ಠಿಗಳಲ್ಲಿ ಹಾಜರಾಗಿ ಸಿನಿಮಾದ ಯಶಸ್ಸಿನ ಖುಷಿಯನ್ನು ಮಾಧ್ಯಮದವರ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಇಂಥಹಾ ಸುದ್ದಿಗೋಷ್ಠಿಯಲ್ಲಿ ಬುಚ್ಚಿಬಾಬು ಸನಾ ಜೊತೆಗೆ ಚಿತ್ರಸಾಹಿತಿ ಅನಂತ್ ಶ್ರೀರಾಮ್ ಸಹ ಭಾಗಿ ಆಗಿದ್ದರು. ಸಹಜವಾಗಿಯೇ ಬುಚ್ಚಿಬಾಬುಗೆ ಜಾನ್ಹವಿಯ ಪಾತ್ರದ ಕುರಿತಾದ ಪ್ರಶ್ನೆ ಎದುರಾಯ್ತು.

ಆಗ ಮಧ್ಯ ಪ್ರವೇಶಿಸಿ ಉತ್ತರಿಸಿದ ಚಿತ್ರಸಾಹಿತಿ ಅನಂತ್, ‘ಜಾನ್ಹವಿಯ ಪಾತ್ರದ ಕುರಿತಾಗಿ ಎದ್ದ ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ಕೂತ ಕೆಲವು ಎಲೈಟ್ ಜನರ ಆಂಭೋಣವಷ್ಟೆ. ನಿಜವಾಗಿಯೂ ಸಿನಿಮಾ ನೋಡಿದ ಸಾಮಾನ್ಯ ಪ್ರೇಕ್ಷಕನದ್ದಲ್ಲ. ಯಾರೋ ಕೆಲವು ಇಂಗ್ಲೀಷ್ ಬಲ್ಲ, ಸಾಮಾಜಿಕ ಜಾಲತಾಣ ಬಳಸುವ ವ್ಯಕ್ತಿಗಳು ಮಾಡಿರುವ ವಿವಾದ ಅಷ್ಟೆ ಅದು. ನೀವು ಅದೇ ‘ವೈಟಲ್ ಅಟ್ರಾಕ್ಷನ್’, ‘ಹಾರ್ಮೊನಲ್ ರಿಯಾಕ್ಷನ್’ ಎಂದು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದರು. ಆದರೆ ಆ ನಾಯಕ ಒಬ್ಬ ಬುಡಕಟ್ಟಿಗೆ ಸೇರಿದವ, ಶಿಕ್ಷಣ ಇಲ್ಲದವ, ಅವನು ನಿನ್ನನ್ನು ಮುಟ್ಟುವ ಮನಸ್ಸಾಯಿತು ಎಂದು ಆತನ ಭಾಷೆಯಲ್ಲಿ ಹೇಳಿದರೆ ಅದು ಇವರಿಗೆ ಸರಿ ಬರಲಿಲ್ಲ’ ಎಂದು ಅವರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ವಿವಾದ; ನಿರ್ದೇಶಕನ ಬೆಂಬಲಕ್ಕೆ ನಿಂತ ಕಂಗನಾ ರಣಾವತ್ 

‘ಯಾರಿಗೂ ನೋವು ಮಾಡಬಾರದು ಎಂಬ ಉದ್ದೇಶದಿಂದ ಹಾಗೂ ಪ್ರಜಾಪ್ರಭುತ್ವ ಎಂದರೆ 49:51 ಮಾತ್ರವಲ್ಲ 99:1 ಆದರೂ ಅದು ಪ್ರಜಾಪ್ರಭುತ್ವವೇ ಎಂಬ ಉದ್ದೇಶದಿಂದ, ದೂರುವವರ ಸಂಖ್ಯೆ ಕಡಿಮೆ ಇದ್ದರೂ ಸಹ ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೇಳಿದ್ದಾರೆ. ಆದರೆ ಹೀಗೆಯೇ ಕತೆಯ ಹಿನ್ನೆಲೆ, ನಾಯಕ-ನಾಯಕಿಯ ಹಿನ್ನೆಲೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಆಧುನಿಕ ಯುಗದ ಸೂಕ್ಷ್ಮತೆಯೇ ತೆರಮೇಲೆ ಕಾಣಿಸಿಕೊಳ್ಳಬೇಕೆಂದು ಹೀಗೆಯೇ ಟೀಕಿಸುತ್ತಾ ಹೋದರೆ, ಕಮರ್ಶಿಯಲ್ ಸಿನಿಮಾಗಳು ಡಾಕ್ಯುಮೆಂಟರಿಗಳಾಗುತ್ತವೆ’ ಎಂದು ಅನಂತ್ ಹೇಳಿದ್ದಾರೆ.

ಬಳಿಕ ಮಾತನಾಡಿದ ಬುಚ್ಚಿಬಾಬು ಸನಾ, ‘ನಾಯಕಿಯ ದೃಶ್ಯಗಳನ್ನು ಮೊದಲು ಬರೆದುಕೊಂಡಾಗ ನಿಜಕ್ಕೂ ಚೆನ್ನಾಗಿತ್ತು. ಆದರೆ ಸಿನಿಮಾ ಉದ್ದವಾಯ್ತೆಂದು ಕೆಲವು ದೃಶ್ಯಗಳನ್ನು ತೆಗೆದೆವು ಆಗ ನಾಯಕಿಗೂ ಕತೆಗೂ ಲಿಂಕ್ ಕಟ್ ಆದಂತಾಯ್ತು. ಈಗ ಗ್ಲಾಮರಸ್ ದೃಶ್ಯಗಳನ್ನು ತೆಗೆದು ನಾಯಕಿಯ ಭಾವುಕ ದೃಶ್ಯಗಳನ್ನು ಸೇರಿಸಿದ್ದೇವೆ’ ಎಂದಿದ್ದಾರೆ ಬುಚ್ಚಿಬಾಬು ಸನಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!