ಕೆಐಎಡಿಬಿ ಭೂಮಿ ಹಂಚಿಕೆ ವ್ಯವಸ್ಥೆ ಇನ್ನು ಸರಳ, ಸರಳ! 10 ಎಕರೆವರೆಗಿನ ಭೂ ಹಂಚಿಕೆಗೆ ಪರಿಶೀಲನೆ ಅವಶ್ಯವಿಲ್ಲ ಎಂದ ಕೈಗಾರಿಕಾ ಇಲಾಖೆ
ಕೆಐಎಡಿಬಿಯಿಂದ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣ ಮಾಡಲಾಗಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮಾದರಿಯಲ್ಲಿ ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಬೆಂಗಳೂರು: ಕೆಐಎಡಿಬಿಯಿಂದ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣ ಮಾಡಲಾಗಿದೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಮಾದರಿಯಲ್ಲಿ ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಭೂ ಪರಿಶೋಧನಾ ಸಮಿತಿಯಲ್ಲಿ ಕೆಲ ನಿಯಮ ಸರಳೀಕರಣ ಮಾಡಲಾಗಿದ್ದು 10 ಎಕರೆವರೆಗಿನ ಭೂಮಿ ಹಂಚಿಕೆಗೆ ಪರಿಶೀಲನೆ ಅವಶ್ಯವಿಲ್ಲ. ಹೂಡಿಕೆ ಪ್ರಸ್ತಾವನೆಗಳು ನೇರವಾಗಿ ರಾಜ್ಯ ಮಟ್ಟದ ಸಮಿತಿಯ ಮುಂದೆ ಮಂಡನೆಗೆ ಅವಕಾಶ ನೀಡಿ ರಾಜ್ಯ ಕೈಗಾರಿಕಾ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಗಳಿಗೆ ಅಗತ್ಯ ಭೂಮಿ ಸುಲಭವಾಗಿ ನೀಡಲು ಸರಳೀಕರಣ ಮಾಡಲಾಗಿದೆ. ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ ಕೈಗಾರಿಕಾ ಇಲಾಖೆ ನಿರ್ಧಾರ ಕೈಗೊಂಡಿದೆ. 10 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಮತ್ತು 15 ಕೋಟಿಯಿಂದ 500 ಕೋಟಿವರೆಗಿನ ಹೂಡಿಕೆಯ ಪ್ರಸ್ತಾವನೆಗಳು ಭೂ ಲೆಕ್ಕ ಪರಿಶೋಧನಾ ಸಮಿತಿಯ ಮುಂದೆ ಮಂಡಿಸಲು ಅವಕಾಶ ನೀಡಲಾಗಿದೆ. ಅಂತಿಮ ಅನುಮೋದನೆಗಾಗಿ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ: ಸಚಿವ ಸುಧಾಕರ್ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ರೈತರ ಯತ್ನ
ದೇವನಹಳ್ಳಿ(ಆಗಸ್ಟ್ 15): ಕೆಐಎಡಿಬಿಗೆ (KIADB) ರೈತರ ಭೂಸ್ವಾಧೀನ ವಿರೋಧಿಸಿ ಸಚಿವ ಸುಧಾಕರ್ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ರೈತರು ಯತ್ನಿಸಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಬಳಿ ನಡೆದಿದೆ. 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸಚಿವ ಡಾ.ಕೆ.ಸುಧಾಕರ್ ಭಾಷಣದ ವೇಳೆ ಘಟನೆ ನಡೆದಿದ್ದು, ಚನ್ನರಾಯಪಟ್ಟಣ ರೈತರಿಂದ ಸಚಿವರಿಗೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ. ರೈತರನ್ನ ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಲಾಯಿತು. ಲಾಠಿ ಬೀಸಿ ರೈತರನ್ನ ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಕೆಲಕಾಲ ಮೈದಾನದ ಬಳಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪ್ರತಿಭಟನೆ ಮಾಡಿದ ರೈತರ ವಿರುದ್ದ ಗರಂ ಆದ ಸಚಿವ ಡಾ.ಕೆ.ಸುಧಾಕರ್
ರೈತರ ಮುತ್ತಿಗೆ ಯತ್ನ ವಿಚಾರಕ್ಕೆ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದು, ರೈತರ ಜತೆ ಮಾತುಕತೆಯನ್ನ ಮಾಡಬೇಕು ಅಹವಾಲು ಕೇಳಬೇಕು. ಕೈಗಾರಿಕಾ ಇಲಾಖೆ ಸುತ್ತೋಲೆಗಳು ಏನು, ಯಾವ ಉದ್ದೇಶಕ್ಕೆ ಮಾಡಲಾಗುತ್ತಿದೆ. ಇವೆಲ್ಲಾ ಮಾಹಿತಿಯನ್ನ ನಾನು ತೆಗೆದುಕೊಂಡು ರೈತರ ಬಳಿ ಮಾತುಕತೆ ನಡೆಸುತ್ತೇನೆ. ಆದರೆ ಇವತ್ತು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ರೈತರು ಈ ರೀತಿ ಮಾಡಿರೋದಕ್ಕೆ ನಾನು ಖೇದವನ್ನ ವ್ಯಕ್ತಪಡಿಸುತ್ತೇನೆ. ನಮ್ಮ ಪೂರ್ವಿಕರು ರಕ್ತವನ್ನ ಹರಿಸಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಇಂತಹ ಸಂಭ್ರಮದಲ್ಲಿ ಕೆಲವರು ರೈತರ ಹೆಸರೇಳಿಕೊಂಡು ಅಗೌರವ ತೋರಿದ್ದಾರೆ. ರೈತ ಹೋರಾಟಗಾರರ ಹೆಸರಿನಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಈ ರೀತಿ ಮಾಡಿದ್ದಾರೆ ಖೇದವನ್ನ ವ್ಯಕ್ತಪಡಿಸುತ್ತೇನೆ.
ಇದು ಪುನರಾವರ್ತನೆ ಆಗಬಾರದು, ನಿಮಗೆ ಶೋಭೆ ತರುವಂತದಲ್ಲ ಅಂತಾ ಪ್ರತಿಭಟನೆ ಮಾಡಿದ ರೈತರ ವಿರುದ್ದ ಗರಂ ಆದರು. ಸ್ವಾತಂತ್ರ್ಯ ದಿನದಂದು ಪ್ರತಿಭಟನೆ ಮಾಡಿ ಅಗೌರವ ತೋರಿದ ರೈತರ ಬಗ್ಗೆ ಪೊಲೀಸರು ಕಾನೂನಾತ್ಮಕ ಕ್ರಮ ಕೈಗೋಳ್ತಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
Published On - 3:41 pm, Tue, 6 September 22