ಲಾರಿ ಬೈಕ್ ಮುಖಾಮುಖಿ, ಸ್ಥಳದಲ್ಲೇ ಬೈಕ್ನಲ್ಲಿದ್ದ ಇಬ್ಬರ ದುರ್ಮರಣ
ಬೆಂಗಳೂರು ಗ್ರಾಮಾಂತರ: ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನೆಲ್ಲಕುಂಟೆ ಗ್ರಾಮದ ಬಳಿ ನಡೆದಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ರಂಜಿತ್ ಹಾಗೂ ಶಾಂತಕುಮಾರ್ ಮೃತ ದುರ್ದೈವಿಗಳು. ಲಾರಿ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಬೈಕ್ ಹೊತ್ತಿ ಉರಿದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.