ಪಾಸಿಟಿವ್ ಬಂದ್ರೆ ನಮ್ಮ ಆಸ್ಪತ್ರೆಗೆ ಬರಬೇಡಿ ಅಂತಿದ್ದಾರೆ ಕೊವಿಡ್ ಆಸ್ಪತ್ರೆ ವೈದ್ಯರು!
ದೇವನಹಳ್ಳಿ: ಹೊಸಕೋಟೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಒಂದು ವಾರದಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ನಡುವೆ ತಾಲೂಕಿನ ಜನರಿಗೆ ಮತ್ತೊಂದು ಆಘಾತವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ರು ಚಿಕಿತ್ಸೆಗಾಗಿ ಕೊವಿಡ್ ಸೆಂಟರ್ಗಳು ಸಿದ್ಧವಾಗಿಲ್ಲ. ಈಗ ಇರುವ ಹೊಸಕೋಟೆ ಕೊವಿಡ್ ಸೆಂಟರ್ನಲ್ಲಿ ಮುಂದಿನ 10 ದಿನಗಳ ವರೆಗೂ ಬೆಡ್ ಇಲ್ಲವಂತೆ. ಅಲ್ಲದೆ ಅಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ಯಾವುದೇ ಸೌಲಭ್ಯ ಸಹ ಇಲ್ಲ. ಹೀಗಾಗಿ ಸೋಂಕಿತರಿಗೆ ಹಾಗೂ ಸ್ಥಳೀಯರಿಗೆ […]
ದೇವನಹಳ್ಳಿ: ಹೊಸಕೋಟೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಒಂದು ವಾರದಲ್ಲಿ 8 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ನಡುವೆ ತಾಲೂಕಿನ ಜನರಿಗೆ ಮತ್ತೊಂದು ಆಘಾತವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ರು ಚಿಕಿತ್ಸೆಗಾಗಿ ಕೊವಿಡ್ ಸೆಂಟರ್ಗಳು ಸಿದ್ಧವಾಗಿಲ್ಲ.
ಈಗ ಇರುವ ಹೊಸಕೋಟೆ ಕೊವಿಡ್ ಸೆಂಟರ್ನಲ್ಲಿ ಮುಂದಿನ 10 ದಿನಗಳ ವರೆಗೂ ಬೆಡ್ ಇಲ್ಲವಂತೆ. ಅಲ್ಲದೆ ಅಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ಯಾವುದೇ ಸೌಲಭ್ಯ ಸಹ ಇಲ್ಲ. ಹೀಗಾಗಿ ಸೋಂಕಿತರಿಗೆ ಹಾಗೂ ಸ್ಥಳೀಯರಿಗೆ ಆತಂಕ ಉಂಟಾಗಿದೆ. ನೆಪಕ್ಕೆ ಮಾತ್ರ ಈ ಕೊವಿಡ್ ಸೆಂಟರ್ ಇದಿಯಾ ಎಂಬಂತಾಗಿದೆ.
ಸುಮ್ಮನೆ ಕೊವಿಡ್ ಸೆಂಟರ್ ಮಾಡಿದ್ದೀವಿ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಸೇರಿದಂತೆ ಕೊವಿಡ್ ಸೆಂಟರ್ನಲ್ಲಿ ಇರಬೇಕಾದ ಯಾವುದೇ ಸೌಲಭ್ಯ ಇಲ್ಲ ಎಂದು ಕೊವಿಡ್ ಆಸ್ವತ್ರೆಯ ಮುಖ್ಯಾಧಿಕಾರಿ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ಕರೆತರಬೇಡಿ ಎಂದು ಇಲ್ಲಿನ ವೈದ್ಯರು ಹೇಳುತ್ತಿದ್ದಾರೆ. ಹೊಸಕೋಟೆಯಲ್ಲಿ ಸಮುದಾಯಕ್ಕೆ ಸೋಂಕು ಹರಡಿರೂ ಆತಂಕದ ನಡುವೆ ಕೊವಿಡ್ ಆಸ್ಪತ್ರೆಯ ಅವ್ಯವಸ್ಥೆ ಜನರಿಗೆ ಮತ್ತೊಂದು ಆಘಾತ ನೀಡಿದೆ.
Published On - 11:25 am, Tue, 23 June 20