AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕಾಲ್ತುಳಿತ: ದೂರು ದಾಖಲಿಸಿದ ಟಿ.ಜೆ ಅಬ್ರಹಾಂ, ಆರ್‌ಸಿಬಿ ವಿರುದ್ಧ ಫಿಕ್ಸಿಂಗ್ ಆರೋಪ

2025ರ ಐಪಿಎಲ್‌ ಫೈನಲ್‌ನಲ್ಲಿ ಪಂಜಾಬ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಗೆದ್ದು 18 ವರ್ಷಗಳ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದೆ. ಆದ್ರೆ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, ಕಪ್ ಗೆದ್ದ ಖುಷಿ 11 ಜನರ ಸಾವಿನಲ್ಲಿ ಮಾಯವಾಗಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ದೂರು ನೀಡಿದ್ದಾರೆ. ಅಲ್ಲದೇ ಪರೋಕ್ಷವಾಗಿ ಆರ್​ ಸಿಬಿ ಮ್ಯಾಚ್ ಫಿಕ್ಸ್ ಆರೋಪ ಮಾಡಿದ್ದಾರೆ.

ಬೆಂಗಳೂರು ಕಾಲ್ತುಳಿತ: ದೂರು ದಾಖಲಿಸಿದ ಟಿ.ಜೆ ಅಬ್ರಹಾಂ, ಆರ್‌ಸಿಬಿ  ವಿರುದ್ಧ ಫಿಕ್ಸಿಂಗ್ ಆರೋಪ
Tj Abraham
Shivaprasad B
| Updated By: ರಮೇಶ್ ಬಿ. ಜವಳಗೇರಾ|

Updated on:Jun 19, 2025 | 4:59 PM

Share

ಬೆಂಗಳೂರು, (ಜೂನ್ 19): ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ (Bengaluru Stampede Case) ಸಂಬಂಧಿಸಿದಂತೆ ಸಿಎಂ, ಡಿಸಿಎಂ ಸೇರಿದಂತೆ ಐಎಎಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ದೂರು ದಾಖಲಿಸಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್, ಡಾ. ಶಾಲಿನಿ ರಜನೀಶ್, ಸತ್ಯವತಿ, ಕೆಎಸ್ ಸಿಎ, ಆರ್ ಸಿಬಿ, ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ ದಯಾನಂದ್, ವಿಕಾಸ್ ಕುಮಾರ್, ಶೇಖರ್ ತೆಕ್ಕಣನವರ್, ವಿಧಾನಸೌಧ ಡಿಸಿಪಿ ಕರಿಬಸನಗೌಡ ಸೇರಿ ಹಲವರ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಇದೇ ವೇಳೆ ಮ್ಯಾಚ್ ಗೆ ಮುನ್ನ ವಿನ್ ಆಗುತ್ತಾರೆ ಎಂದು ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸಿದ ಟಿ ಜೆ ಅಬ್ರಹಾಂ ಪರೋಕ್ಷವಾಗಿ ಆರ್‌ಸಿಬಿ ವಿರುದ್ಧ ಫಿಕ್ಸಿಂಗ್‌ ಬಾಂಬ್‌ ಸಿಡಿಸಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಟಿಜೆ ಅಬ್ರಹಾಂ, ಕಳೆದ ಜೂನ್ 4 ರಂದು ಬೆಂಗಳೂರಿನಲ್ಲಿ ದುರಂತ ನಡೀತು. 11 ಜನರು ಸಾವಿಗೆ ಉತ್ತರವನ್ನ ಕೊಡಬೇಕು. ಆರ್ ಸಿಬಿ ಮತ್ತು ಡಿಕೆ ಶಿವಕುಮಾರ್​ ನಡುವಿನ ಕನೆಕ್ಷನ್ ಏನು? ಡಿಕೆ ಶಿವಕುಮಾರ್ ಗೂ ಕ್ರಿಕೆಟ್ ಗೂ ಏನು ಸಂಬಂಧ? ಆರ್ ಸಿಬಿ ನ ಕೊಂಡುಕೊಳ್ಳಬೇಕು ಅಂತಿದ್ರು. 8 ಸಾವಿರದ 600 ಕೋಟಿ ರೂಪಾಯಿಗೆ ಪ್ಲ್ಯಾನ್ ಮಾಡಿದ್ದರು. 17 ಸಾವಿರ ಕೋಟಿ ರೂ. ಇದ್ರೆ ಮುಂದುವರಿಬೋದು ಎನ್ನುವುದು ಗೊತ್ತಾಗತ್ತೆ ಎಂದು ಸ್ಫೋಟಕ ಆರೋಪಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್​ಸಿಬಿಗೆ ಹೈಕೋರ್ಟ್​ ನೋಟಿಸ್

ಡಿಎನ್ಎ ಅವರ ಪ್ಲ್ಯಾನ್ 2 ವರೆ ಕಿಲೋ ಮೀಟರ್ ವಿಕ್ಟರಿ ಪರೇಡ್ ಗೆ ರೆಡಿಯಾಗಿತ್ತು. ಬಸ್ ನಲ್ಲಿ ಓಪನ್ ಪರೇಡ್ ಆಗಿದ್ರೆ ರಸ್ತೆಯಲ್ಲಿ ನಿಂತಿದ್ದ ಜನ ನೋಡಿಕೊಂಡು ಮನೆಗೆ ಹೋಗುತ್ತಿದ್ದರು. ಒಂದೇ ಕಡೆ ಆಗಿದ್ದರಿಂದ ಈ ರೀತಿ ಆಗಿರುವುದ. ಕಾರ್ಯಕ್ರಮವನ್ನ ಎರಡು ದಿನ ಮುಂದೂಡಿದ್ರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಇದನ್ನೂ ಓದಿ
Image
Stampede: ಮೃತರ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರ ಮೊತ್ತ ಹೆಚ್ಚಳ
Image
Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್​ಸಿಬಿ ಅಭಿಮಾನಿಗಳು
Image
ತನಿಖೆಗಿಳಿದ ಸಿಐಡಿ: ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ
Image
ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಕುನ್ಹಾ ಆಯೋಗಕ್ಕೆ ಸೂಚನೆ

ಪಂದ್ಯಕ್ಕೂ ಮುನ್ನ ವಿನ್ ಆಗುತ್ತಾರೆಂದು ಹೇಗೆ ಗೊತ್ತಾಯ್ತು?

ಮೂರನೇ ತಾರೀಕು ಡಿಎನ್ಎ ಅವರು ಪತ್ರ ಬರೀತಾರೆ. ಆರ್ ಸಿಬಿ ವಿಕ್ಟರಿ ಪರೇಡ್ ಇರುತ್ತೆ ಎಂದು ಕಬ್ಬನ್ ಪಾರ್ಕ್ ಎಸಿಪಿಗೆ ರಿಕ್ವೆಸ್ಟ್ ಲೆಟರ್ ಕೊಡುತ್ತಾರೆ. ಮ್ಯಾಚ್​ಗೂ  ಮುನ್ನ ವಿನ್ ಆಗುತ್ತಾರೆ ಎಂದು ಹೇಗೆ ಗೊತ್ತಾಯ್ತು? ಎಂದು ಪ್ರಶ್ನಿಸಿದ ಟಿ ಜೆ ಅಬ್ರಹಾಂ, ಅದೇ ಮೂರನೇ ತಾರೀಕು ಶಾಲಿನಿ ರಜನೀಶ್ ಒಪ್ಪಿಗೆ ಕೊಡುತ್ತಾರೆ. ಅದನ್ನ ನೋಡಿ ಸತ್ಯವತಿ ಅವರು ಸಾಯಾಂಕಾಲ ಕರಿಬಸನಗೌಡಗೆ ಲೆಟರ್ ಬರೆಯುತ್ತಾರೆ. ಫೈರ್ ಪೋರ್ಸ್, ಪಿಡಬ್ಲ್ಯೂಡಿ, ಪೊಲೀಸರ ಫರ್ಮಿಷನ್ ಇತ್ತಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ.

ದೇಶದಲ್ಲಿ ಕಾನೂನು ಇದೆ ಎಂದು ತೋರಿಸುತ್ತೇನೆ

ಮೊದಲು ಏಳು ಜನ ಸಾವನ್ನಪ್ಪಿದ್ದರೂ ಎಲ್ಲಾ ಸ್ಮೈಲ್ ಮಾಡಿಕೊಂಡು ಹೋಗುತ್ತಿದ್ದರು. ನಮ್ಮ ಕಾನೂನು ಹೋರಾಟ ಮುಂದುವರೆಯುತ್ತೆ. ಇದು ಕೋರ್ಟ್ ಗೆ ಹೋಗುತ್ತೆ, ಕೋರ್ಟ್ ನಲ್ಲಿ ನೋಡಿಕೊಳ್ಳುತ್ತೇವೆ. ಮೂರನೇ ತಾರೀಕು ಹೇಗೆ ಗೊತ್ತಾಯ್ತು ಎನ್ನುವುದು ತನಿಖೆಯಲ್ಲಿ ಗೊತ್ತಾಗಬೇಕಿದೆ. ನಮಗೆ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳುತ್ತಾರೆ. ಬೇರೆ ಏಜೆನ್ಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೀನಿ.ಅವಾಗ ನಾನು ಎಲ್ಲಾ ಎಕ್ಸ್ ಪ್ಲೋರ್ ಮಾಡುತ್ತೇನೆ. ಈ ರಾಜ್ಯದಲ್ಲಿ, ದೇಶದಲ್ಲಿ ಕಾನೂನು ಇದೆ. ಅದನ್ನ ತೋರಿಸುತ್ತೇನೆ. ನಾವು ಸ್ಲೋ… ಆದರೂ ಏನೂ ಅಂತ ತೋರಿಸುತ್ತೇನೆ ಎಂದು ಖಡಕ್ ಆಗಿ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Thu, 19 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ