ಬೆಂಗಳೂರಿನಿಂದ ಅನಂತಪುರ, ಹೌರಾ ರೈಲು ಸಂಚಾರ ರದ್ದು: ದೀಪಾವಳಿಗೆ ಕೇರಳಕ್ಕೆ ವಿಶೇಷ ರೈಲು, ಇಲ್ಲಿದೆ ವೇಳಾಪಟ್ಟಿ

ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಿದೆ. ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ರದ್ದಾಗಿದೆ. ಮತ್ತೊಂದೆಡೆ, ದೀಪಾವಳಿಗೆ ಬೆಂಗಳೂರಿನಿಂದ ತಿರುವನಂತಪುರಂಗೆ ವಿಶೇಷ ರೈಲು ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ - ತಿರುವನಂತಪುರ ಸ್ಪೆಷಲ್ ಟ್ರೇನ್​ನ ವೇಳಾಪಟ್ಟಿ ಹಾಗೂ ವಿವರಗಳು ಇಲ್ಲಿವೆ.

ಬೆಂಗಳೂರಿನಿಂದ ಅನಂತಪುರ, ಹೌರಾ ರೈಲು ಸಂಚಾರ ರದ್ದು: ದೀಪಾವಳಿಗೆ ಕೇರಳಕ್ಕೆ ವಿಶೇಷ ರೈಲು, ಇಲ್ಲಿದೆ ವೇಳಾಪಟ್ಟಿ
ಸಾಂದರ್ಭಿಕ ಚಿತ್ರ

Updated on: Nov 03, 2026 | 7:59 AM

ಮುಖ್ಯಾಂಶಗಳು

  • ಬೆಂಗಳೂರು-ಅನಂತಪುರ ಮೆಮು ರೈಲು ಸಂಚಾರ ರದ್ದು
  • ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರದ್ದು
  • ದೀಪಾವಳಿಗೆ ಕೇರಳಕ್ಕೆ ವಿಶೇಷ ರೈಲು ಸಂಚಾರ

ಬೆಂಗಳೂರು, ನವೆಂಬರ್ 3: ರೈಲು ಹಳಿ ನವೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಬೆಂಗಳೂರು-ಅನಂತಪುರ ಮೆಮು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಇದರ ಜೊತೆಗೆ, ಎಸ್‌ಎಂವಿಟಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಮತ್ತೊಂದೆಡೆ, ದೀಪಾವಳಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್‌ನಿಂದ ಕೇರಳದ ತಿರುವನಂತಪುರಂ ನಾರ್ತ್‌ಗೆ ವಿಶೇಷ ರೈಲು ಸಂಚರಿಸಲಿದೆ.

ಬೆಂಗಳೂರು-ಅನಂತಪುರ ಮೆಮು ರೈಲು ಸಂಚಾರದಲ್ಲಿ ಬದಲಾವಣೆ

ಪೆನುಕೊಂಡ ಮತ್ತು ರಂಗೇಪಲ್ಲಿ ನಡುವಿನ ರೈಲು ಹಳಿ ನವೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಖ್ಯೆ 66559 ಕೆಎಸ್‌ಆರ್ ಬೆಂಗಳೂರು-ಅನಂತಪುರ ಮೆಮು ರೈಲನ್ನು ಮಂಗಳವಾರ ಹಿಂದೂಪುರದಿಂದ ಅನಂತಪುರದವರೆಗಿನ ಮಾರ್ಗದಲ್ಲಿ ರದ್ದುಗೊಳಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 66560 ಅನಂತಪುರ-ಕೆಎಸ್‌ಆರ್ ಬೆಂಗಳೂರು ಮೆಮು ರೈಲನ್ನು ಅನಂತಪುರದಿಂದ ಹಿಂದೂಪುರದವರೆಗೆ ರದ್ದುಗೊಳಿಸಲಾಗಿದೆ.

ಇದರೊಂದಿಗೆ, ರೈಲು ಸಂಖ್ಯೆ 12864 ಎಸ್‌ಎಂವಿಟಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನೂ ನವೆಂಬರ್ 3ರಂದು ರದ್ದುಗೊಳಿಸಲಾಗಿದೆ.

ದೀಪಾವಳಿಗೆ ಬೆಂಗಳೂರಿನಿಂದ ಕೇರಳಕ್ಕೆ ವಿಶೇಷ ರೈಲು

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್ ಮತ್ತು ತಿರುವನಂತಪುರಂ ನಾರ್ತ್ ನಡುವೆ ವಿಶೇಷ ರೈಲು ಸಂಚರಿಸಲಿದೆ.

ಬೆಂಗಳೂರು – ತಿರುವನಂತಪುರ ವಿಶೇಷ ರೈಲು ಟೈಮಿಂಗ್ಸ್

  • ರೈಲು ಸಂಖ್ಯೆ 06575 ಶುಕ್ರವಾರ ಸಂಜೆ 4.40ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಮರುದಿನ ಬೆಳಗ್ಗೆ 10.30ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.
  • ಹಿಂತಿರುಗುವ ರೈಲು ಸಂಖ್ಯೆ 06576 ಶನಿವಾರ ಮಧ್ಯಾಹ್ನ 12.40ಕ್ಕೆ ತಿರುವನಂತಪುರಂ ನಾರ್ತ್‌ನಿಂದ ಹೊರಟು, ಭಾನುವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಇದನ್ನೂ ಓದಿ: ಕಾರವಾರದ ಪ್ರಯಾಣಿಕರಿಗೆ ಬಿಗ್​​ ಗುಡ್​​ನ್ಯೂಸ್: ನವೆಂಬರ್ 3ನೇ ವಾರದಲ್ಲಿ ಬೆಂಗಳೂರು-ಕಾರವಾರ ವಂದೇ ಭಾರತ್ ರೈಲು ಸಂಚಾರ

ರೈಲು ಸಂಚಾರದಲ್ಲಿ ಬದಲಾವಣೆ ಇರುವುದರಿಂದ ಪ್ರಯಾಣಿಕರು ತಮ್ಮ ಪ್ರಯಾಣ ಆರಂಭಿಸುವ ಮೊದಲು ರೈಲಿನ ವೇಳಾಪಟ್ಟಿ ಮತ್ತು ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us