ಶೇ.70ರಷ್ಟು ಬೆಂಗಳೂರಿಗರಿಗೆ ಕೊರೊನಾ ಸದ್ದಿಲ್ಲದೇ ಬಂದು ಹೋಗಿದೆ; ಐಸಿಎಂಆರ್​ ಸೆರೋ ಸರ್ವೆಯಲ್ಲಿ ಬಯಲಾಯ್ತು ಅಚ್ಚರಿ

ICMR Sero Survey: ಬೆಂಗಳೂರಿನ ಜನರ ದೇಹದಲ್ಲಿ ಪ್ರತಿಕಾಯಗಳ ಉತ್ಪತ್ತಿ ಹೇಗಿದೆ? ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಎಷ್ಟರ ಮಟ್ಟಿಗಿದೆ ಎಂದು ತಿಳಿದುಕೊಳ್ಳುವ ಸಲುವಾಗಿ ಈ ಸರ್ವೆ ಮಾಡಲಾಗಿದ್ದು, ಇದರ ಫಲಿತಾಂಶವನ್ನು ಗಮನಿಸಿದಾಗ ಶೇ.70ರಷ್ಟು ಜನರಿಗೆ ಈಗಾಗಲೇ ಕೊರೊನಾ ಬಂದು ಹೋಗಿದೆ ಎಂಬ ವಿಚಾರ ಬಯಲಾಗಿದೆ.

ಶೇ.70ರಷ್ಟು ಬೆಂಗಳೂರಿಗರಿಗೆ ಕೊರೊನಾ ಸದ್ದಿಲ್ಲದೇ ಬಂದು ಹೋಗಿದೆ; ಐಸಿಎಂಆರ್​ ಸೆರೋ ಸರ್ವೆಯಲ್ಲಿ ಬಯಲಾಯ್ತು ಅಚ್ಚರಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Jul 09, 2021 | 8:40 AM

ಬೆಂಗಳೂರು: ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗುತ್ತಿರುವ ಜಿಲ್ಲೆ ಎಂದು ಗುರುತಿಸಿಕೊಂಡಿದ್ದ ಬೆಂಗಳೂರಿನಲ್ಲಿ ಐಸಿಎಂಆರ್​ ಮಹತ್ವದ ಸರ್ವೆ ನಡೆಸಿದೆ. ಒಂದು ವಾರದ ಹಿಂದೆ ಈ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಅದರ ವರದಿಯೀಗ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬಿಬಿಎಂಪಿ ಸಹಾಯದೊಂದಿಗೆ ಬೆಂಗಳೂರಿನಲ್ಲಿ ಸೆರೋ ಸರ್ವೆ ನಡೆಸಿರುವ ಐಸಿಎಂಆರ್ ಬೆಂಗಳೂರಿಗರ ದೇಹದಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯಗಳ ಪ್ರಮಾಣ ಹೇಗಿದೆ ಎಂದು ಲೆಕ್ಕ ಹಾಕಿದೆ. ಅಚ್ಚರಿಯ ವಿಚಾರವೆಂದರೆ ಶೇ.70ರಷ್ಟು ಜನರಿಗೆ ಈಗಾಗಲೇ ಕೊರೊನಾ ಬಂದು ಹೋಗಿದ್ದು, ಅವರ ದೇಹದಲ್ಲಿ ಪ್ರತಿಕಾಯಗಳ ಉತ್ಪತ್ತಿಯೂ ಆಗಿದೆ ಎನ್ನುವುದನ್ನು ಸೆರೋ ಸರ್ವೆ ಬಹಿರಂಗಗೊಳಿಸಿದೆ.

ಇದೇ ಮೊದಲ ಬಾರಿಗೆ 6 ವರ್ಷ ಮೇಲ್ಪಟ್ಟ ಮಕ್ಕಳನ್ನೂ ಸೆರೋ ಸರ್ವೆಯಲ್ಲಿ ಒಳಪಡಿಸಲಾಗಿದ್ದು, ಎರಡನೇ ಅಲೆ ವೇಳೆ ತೀವ್ರ ಹೊಡೆತ ಅನುಭವಿಸಿದ್ದ ಬೆಂಗಳೂರಿನ ಒಟ್ಟು 10 ಭಾಗದಲ್ಲಿ ಸರ್ವೆ ಮಾಡಲಾಗಿದೆ. ಎಲ್ಲಾ ವಲಯದ ಜನರನ್ನೂ ಸೆರೋ ಸರ್ವೆಗೆ ಒಳಪಡಿಸಲಾಗಿದ್ದು, ಬಿಬಿಎಂಪಿ ಸಹಾಯದೊಂದಿಗೆ ಒಂದು ವಾರದ ಹಿಂದೆಯಷ್ಟೇ ಸರ್ವೆ ಪೂರ್ಣಗೊಳಿಸಲಾಗಿದೆ. ಬೆಂಗಳೂರಿನ ಜನರ ದೇಹದಲ್ಲಿ ಪ್ರತಿಕಾಯಗಳ ಉತ್ಪತ್ತಿ ಹೇಗಿದೆ? ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಎಷ್ಟರ ಮಟ್ಟಿಗಿದೆ ಎಂದು ತಿಳಿದುಕೊಳ್ಳುವ ಸಲುವಾಗಿ ಈ ಸರ್ವೆ ಮಾಡಲಾಗಿದ್ದು, ಇದರ ಫಲಿತಾಂಶವನ್ನು ಗಮನಿಸಿದಾಗ ಶೇ.70ರಷ್ಟು ಜನರಿಗೆ ಈಗಾಗಲೇ ಕೊರೊನಾ ಬಂದು ಹೋಗಿದೆ ಎಂಬ ವಿಚಾರ ಬಯಲಾಗಿದೆ.

ಕೊರೊನಾ ಎರಡನೇ ಅಲೆ ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ ಹಬ್ಬಿತ್ತಾದರೂ ಕೊರೊನಾ ಪರೀಕ್ಷೆಗೆ ಒಳಪಟ್ಟವರಿಗೆ ಮಾತ್ರ ಕೊರೊನಾ ಇದೆಯೋ, ಇಲ್ಲವೋ ಎಂಬುದು ಗೊತ್ತಾಗಿತ್ತು. ಅದರ ಹೊರತಾಗಿ ಕೊರೊನಾ ಪರೀಕ್ಷೆಗೆ ಒಳಪಡದೇ ಉಳಿದವರು ಎಷ್ಟೋ ಮಂದಿ ಇದ್ದಾರೆ. ಆದರೆ, ಈಗ ನಡೆಸಿರುವ ಸರ್ವೆಯಲ್ಲಿ ಕೊರೊನಾಗೆ ತುತ್ತಾಗದವದರಲ್ಲೂ, ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದವರಲ್ಲೂ ಪ್ರತಿಕಾಯಗಳ ಅಭಿವೃದ್ಧಿ ಆಗಿರುವುದು ಪತ್ತೆಯಾಗಿದೆ. ಅಂದರೆ, ಅವರಿಗೆಲ್ಲಾ ಸದ್ದಿಲ್ಲದೆಯೇ ಕೊರೊನಾ ಬಂದು ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಂಭಾವ್ಯ ಮೂರನೇ ಅಲೆ ಹಾಗೂ ಡೆಲ್ಟಾ ರೂಪಾಂತರಿಯ ಅಪಾಯದ ಬಗ್ಗೆ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಸದರಿ ಸರ್ವೆ ಅತ್ಯಂತ ಪ್ರಮುಖವಾಗಲಿದ್ದು, ಶೇ.70ರಷ್ಟು ಬೆಂಗಳೂರಿಗರಲ್ಲಿ ಪ್ರತಿಕಾಯಗಳ ಅಭಿವೃದ್ಧಿ ಆಗಿದೆ ಎಂಬ ಲೆಕ್ಕಾಚಾರ ಹಲವು ಸಾಧ್ಯತೆಗಳು ತೆರೆದುಕೊಳ್ಳಲು ದಾರಿಯಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ಜನಸಮೂಹದಲ್ಲಿ ಪ್ರತಿಕಾಯಗಳು ಕಾಣಿಸಿಕೊಂಡಿದೆ ಎಂದಾದಲ್ಲಿ ಮೂರನೇ ಅಲೆಯಿಂದ ಬೆಂಗಳೂರು ಬಚಾವಾಗಬಹುದಾ? ಇವರ ದೇಹದಲ್ಲಿನ ಪ್ರತಿಕಾಯಗಳು ಎಷ್ಟರ ಮಟ್ಟಿಗೆ ಹೊಸ ರೂಪಾಂತರಿಗಳಿಂದ ದೇಹವನ್ನು ರಕ್ಷಿಸಲಿವೆ ಎಂಬೆಲ್ಲಾ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ.

ಇದನ್ನೂ ಓದಿ: 44-45 ವಾರದ ನಂತರ ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್​ ಪಡೆದವರಲ್ಲಿ ನಾಲ್ಕು ಪಟ್ಟು ಅಧಿಕ ಪ್ರತಿಕಾಯಗಳ ಸೃಷ್ಟಿ: ಆಕ್ಸ್​ಫರ್ಡ್​ 

ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಲಸಿಕೆ ಪಡೆದವರಿಗೆ ಶುಭಸುದ್ದಿ; ಮೊದಲ ಡೋಸ್​ನಲ್ಲೇ ಹೆಚ್ಚು ಪ್ರತಿಕಾಯ ಸೃಷ್ಟಿ ಎಂದ ಅಧ್ಯಯನ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್