‘ನೀವೇನು ಸರ್ವಾಧಿಕಾರಿಯೇ?’: ಎಕ್ಸ್​​ ಪೋಸ್ಟ್​​ ಮಾಡಿ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಜೆಡಿಎಸ್​​ ಕಿಡಿ

ಸ್ಟಿಂಗ್ ಆಪರೇಷನ್‌ಗೆ ಒಳಗಾದವರು ಮಾತ್ರ ಮಾತನಾಡಬೇಕು ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೀವೇನು ಸರ್ವಾಧಿಕಾರಿಯೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದೆ. ಸಿದ್ದಾರ್ಥ ಟ್ರಸ್ಟ್‌ಗೆ ಸಿಎ ನಿವೇಶನ ತೆಗೆದುಕೊಳ್ಳಲು ಇದ್ದ ನಿಮ್ಮ ಆತುರತೆ ಸಿದ್ದರಾಮಯ್ಯರ ವರ್ಚಸ್ಸಿಗೆ ಮಸಿ ಬಳಿಯುತ್ತಿರುವಾಗ ಅವರಿಗೆ ನ್ಯಾಯ ಕೊಡಿಸಲು ಇಲ್ಲದಿರುವುದು ದುರಂತ ಎಂದು ಪ್ರಿಯಾಂಕ್​​ ಕಾಲೆಳೆದಿದೆ.

ನೀವೇನು ಸರ್ವಾಧಿಕಾರಿಯೇ?: ಎಕ್ಸ್​​ ಪೋಸ್ಟ್​​ ಮಾಡಿ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಜೆಡಿಎಸ್​​ ಕಿಡಿ
ಗೃಹ ಸಚಿವ ಪ್ರಿಯಾಂಕ್​ ಖರ್ಗೆ ವಿರುದ್ಧ ಜೆಡಿಎಸ್​​ ಕಿಡಿ
Image Credit source: Tv9 Kannada
Edited By:

Updated on: Oct 14, 2026 | 2:07 PM

ಬೆಂಗಳೂರು, ಅಕ್ಟೋಬರ್​​ 14: ಸ್ಟಿಂಗ್‌ ಆಪರೇಷನ್‌ ಬಗ್ಗೆ ಅದಕ್ಕೆ ಒಳಗಾದವರು ಹೇಳಬೇಕೇ ಹೊರತು ಬೇರೆಯವರು ಮಾತನಾಡಬಾರದು ಎಂಬ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿಕೆಗೆ ಜೆಡಿಎಸ್​​ ಕಿಡಿ ಕಾರಿದೆ. ಸ್ಟಿಂಗ್‌ ಆಪರೇಷನ್‌ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸುವುದು ತಪ್ಪೇ ? ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ? ನ್ಯಾಯಕ್ಕಾಗಿ ಧ್ವನಿ ಎತ್ತಲು ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಚಾರಿತ್ರ್ಯ ಹರಣ ಮಾಡುತ್ತಿರುವವರು ಯಾರು ? ಅವರ ವಿರುದ್ಧ ಸ್ಟಿಂಗ್‌ ಮಾಡಿದ ಆ ಮಹಾನಾಯಕ ಯಾರು ? ಅವರ ಹೆಸರನ್ನು ಬಹಿರಂಗ ಪಡಿಸಲು ನಿಮ್ಮ ಕಾಂಗ್ರೆಸ್​​ ಸರ್ಕಾರ ಯಾಕೆ ಮೀನಾಮೇಷ ಎಣಿಸುತ್ತಿದೆ? ನೀವೇನು ಸರ್ವಾಧಿಕಾರಿಯೇ? ಎಂದು ಪ್ರಶ್ನಿಸಿದೆ.

ಎಕ್ಸ್​ ಪೋಸ್ಟ್​​ ಮಾಡಿ ಜೆಡಿಎಸ್​​ ಕಿಡಿ

ನೀವು ಚಿತ್ತಾಪುರದಲ್ಲಿ ಗೆಲ್ಲಲು, ಗೃಹ ಸಚಿವರಾಗಲು ಸಿದ್ದರಾಮಯ್ಯರ ದುಡಿಮೆ ಇದೆ ಎನ್ನುವುದನ್ನು ಮರೆತು ಬಿಟ್ಟಿರಾ? ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಕಾರಣ ಏನು ಎಂಬುದನ್ನು ಬಹಿರಂಗ ಪಡಿಸುವ ಧೈರ್ಯ ನಿಮಗಿದೆಯೇ ಪ್ರಿಯಾಂಕ್‌ ಖರ್ಗೆ ? ಸ್ಟಿಂಗ್‌ ಆಪರೇಷನ್‌ ಬಗ್ಗೆ ಇಡೀ ದೇಶವೇ ಮಾತಾಡುತ್ತಿದೆ. ಮಾಧ್ಯಮಗಳ ಮುಂದೆ ನಿಮ್ಮ ಒಣ ಪೌರುಷ ತೋರಿಸುವುದನ್ನು ಬಿಡಿ. ರಾಜ್ಯದ ಗೃಹ ಸಚಿವರಾಗಿ ಈ ಬಗ್ಗೆ ಬಾಯಿ ತೆರೆಯದೇ ಏಕೆ ಮೌನವಾಗಿದ್ದೀರಿ? ಸ್ಟಿಂಗ್‌ ಆಪರೇಷನ್‌ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಯಾಕೆ ಹೆದರಿಕೆ? ತಮ್ಮ ಸರ್ಕಾರದ ಹಾಗೂ ಮಹಾನಾಯಕನ ಬಂಡವಾಳ ಹೊರಗೆ ಬರುತ್ತದೆ ಎಂಬ ಭಯವೇ? ಎಂದು ಪ್ರಶ್ನಿಸಿರುವ ಜೆಡಿಎಸ್​​, ಸಿದ್ದಾರ್ಥ ಟ್ರಸ್ಟ್‌ಗೆ ಸಿಎ ನಿವೇಶನ ತೆಗೆದುಕೊಳ್ಳಲು ಇದ್ದ ನಿಮ್ಮ ಆತುರತೆ ಸಿದ್ದರಾಮಯ್ಯರ ವರ್ಚಸ್ಸಿಗೆ ಮಸಿ ಬಳಿಯುತ್ತಿರುವಾಗ ಅವರಿಗೆ ನ್ಯಾಯ ಕೊಡಿಸಲು ಇಲ್ಲದಿರುವುದು ದುರಂತ ಎಂದು ಪ್ರಿಯಾಂಕ್​​ ಖರ್ಗೆ ಕಾಲೆಳೆದಿದೆ.

ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲಿ ಸ್ಟಿಂಗ್​​ ಸಂಚಲನ: ಕಾಂಗ್ರೆಸಿಗರಲ್ಲಿ ತಳಮಳ, ವಿಪಕ್ಷಗಳಿಗೆ ಅಸ್ತ್ರ

ಸ್ಟಿಂಗ್​​ ಹಗರಣದ ಬಗ್ಗೆ ಪ್ರಿಯಾಂಕ್​​ ಏನು ಹೇಳಿದ್ದರು?

Priyank Kharge: ಸ್ಟಿಂಗ್ ಆಪರೇಷನ್ ಆಗಿದೆ ಎಂದ ರಾಜಣ್ಣ ಮಾತಿಗೆ ಪ್ರಿಯಾಂಕ್​ ಖರ್ಗೆ ಹಿಂಗ್ಯಾಕಂದ್ರು! |#TV9D

ಸ್ಟಿಂಗ್ ಆಪರೇಷನ್ ಕೇಸ್ ಸಿಬಿಐಗೆ ಕೊಡಿ ಎಂದು ಕೇಂದ್ರ ಸಚಿವ ಹೆಚ್​ಡಿಕೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಆಪರೇಷನ್​ಗೆ ಸಿಬಿಐ ತನಿಖೆ ಏನಕ್ರೀ ಬೇಕು? ಸಿಬಿಐಗೆ ಸಿಬ್ಬಂದಿ ಎಲ್ಲಿಂದ ತರುತ್ತಾರೆ, ನಾವೇ ಸಿಬ್ಬಂದಿ ಕೊಡಬೇಕು. ಹಿಂದಿನ ಎರಡು ಕೇಸ್​ಗಳನ್ನೇ ಸಿಬಿಐನವರು ಇನ್ನೂ ಮುಗಿಸಿಲ್ಲ. ಸ್ಟಿಂಗ್ ಆಪರೇಷನ್ ಬಗ್ಗೆ ರಾಜ್ಯದ ಪೊಲೀಸರೇ ತನಿಖೆ ಮಾಡ್ತಾರೆ. ಅಲ್ಲದೆ ಸ್ಟಿಂಗ್​​ ಆಪರೇಷನ್​​ ಬಗ್ಗೆ ಅದಕ್ಕೆ ಒಳಗಾದವರು ಮಾತನಾಡಬೇಕೇ ವಿನಃ ನಾವು ನೀವು ಹೇಳಬಾರದು ಎಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us